ಶ್ರೀಮಂಗಲ: ಕೊಡವ ಸಮುದಾಯದ ಎಸ್‌ಟಿ ಮಾನ್ಯತೆ, ಕೊಡವ ಲ್ಯಾಂಡ್, ಕೊಡವರ ಭೂಮಿ-ಆಸ್ತಿ ಹಕ್ಕುಗಳ ರಕ್ಷಣೆ ಹಾಗೂ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಕೊಡವರು ಬಹುಕಾಲದಿಂದ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಮಾರ್ಗದಲ್ಲಿ ಬೇಡಿಕೆಗಳನ್ನು ಮುಂದಿಟ್ಟುಕೊAಡು ಬರುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ, ಗೌಡ ಸಮಾಜ ಒಕ್ಕೂಟದ ಸಭೆಯಲ್ಲಿ ಕೊಡವ ಸಮುದಾಯದ ಬೇಡಿಕೆಗಳನ್ನು ವಿರೋಧಿಸುವ ನಿರ್ಣಯ ಕೈಗೊಳ್ಳಲಾಗಿದೆ ಹಾಗೂ ಈ ವಿಚಾರವನ್ನು ಕಾನೂನು ವೇದಿಕೆಯಲ್ಲಿ ಪ್ರಶ್ನಿಸುವ ಕುರಿತು ನಿರ್ಧರಿಸಲಾಗಿದೆ ಎಂಬುದು ಗಂಭೀರವಾಗಿ ಪರಿಗಣಿಸಬೇಕಾದ ಬೆಳವಣಿಗೆಯಾಗಿದ್ದು, ಈ ನಿಲುವನ್ನು ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ತೀವ್ರವಾಗಿ ಖಂಡಿಸುವುದಲ್ಲದೆ ಗೌಡ ಸಮಾಜ ಒಕ್ಕೂಟವು ಕೊಡವ ಜನಾಂಗದ ಬೇಷರತ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸುತ್ತದೆ. ತಪ್ಪಿದಲ್ಲಿ ಮುಂದಿನ ಕಾನೂನು ಸಮರವನ್ನು ಎದುರಿಸಬೇಕಾಗುತ್ತದೆ ಎಂದಿದೆ.

ಕೊಡವರ ಸಾಂವಿಧಾನಿಕ ಬೇಡಿಕೆಗಳ ಬಗ್ಗೆ ನಿರ್ಧರಿಸಲು ಆದರದೇ ಆದ ವ್ಯವಸ್ಥೆ ಇದೆ. ಅದನ್ನು ನೀಡಬಾರದೆಂದು ಹೇಳುವ ಹಕ್ಕು ಯಾರಿಗೂ ಇಲ್ಲ. ನಮ್ಮ ಬೇಡಿಕೆಗಳ ಬಗ್ಗೆ ನಮಗೇ ಮಾತನಾಡುವ ಹಕ್ಕಿಲ್ಲ ಎಂಬ ರೀತಿಯ ಯಾವುದೇ ನಿಲುವನ್ನು ಕೊಡವ ಸಮುದಾಯ ಒಪ್ಪುವುದಿಲ್ಲ.

ಇಂತಹ ಬೆಳವಣಿಗೆಗಳು ಕೊಡಗಿನ ಜನರ ನಡುವೆ ಸಾಮಾಜಿಕ ಸಂಬAಧಗಳ ಮೇಲೆ ಪರಿಣಾಮ ಬೀರದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ. ಜನಾಂಗದ ಇತರರ ಹೇಳಿಕೆಗಳು ನಮಗೆ ಸಮಾಧಾನ ನೀಡುವುದಿಲ್ಲ. ಗೌಡ ಸಮಾಜ ಒಕ್ಕೂಟವೇ ಕೊಡವರ ಕ್ಷಮೆ ಯಾಚಿಸಲೇ ಬೇಕೆಂಬುದು ನಮ್ಮ ಒತ್ತಾಯವಾಗಿರುತ್ತದೆ ಎಂದು ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.