ಗೋಣಿಕೊಪ್ಪಲು, ಸೆ.೧೧: ಕೊಡಗು ಜಿಲ್ಲಾ ಕಾಂಗ್ರೆಸ್‌ನ ೨ನೇ ಅವಧಿಗೆ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ತೀತಿರ ಧರ್ಮಜ ಉತ್ತಪ್ಪನವರನ್ನು ವೀರಾಜಪೇಟೆ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ತಿತಿಮತಿ ಬಳಿಯ ಆನೆಚೌಕೂರು ಗೇಟ್ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ವೀರಾಜಪೇಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಮ್ಮಡ ಸೋಮಣ್ಣ, ಮಲ್ಲಂಡ ಧ್ಯಾನ್ ದೇವಯ್ಯ ಸಮ್ಮುಖದಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಮಹಿಳಾ ಕಾಂಗ್ರೆಸ್‌ನ ಪ್ರಮುಖರು ಅಪಾರ ಕಾರ್ಯಕರ್ತರು, ಧರ್ಮಜ ಉತ್ತಪ್ಪನವರನ್ನು ಬರಮಾಡಿಕೊಂಡರು.

ಸ್ವಾಗತವನ್ನು ಸ್ವೀಕರಿಸಿ ಮಾತನಾಡಿದ ಧರ್ಮಜ, ಕಾಂಗ್ರೆಸ್ ಪಕ್ಷದ ವರಿಷ್ಠರು ಮತ್ತೊಂದು ಅವಧಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದಾರೆ. ಜಿಲ್ಲೆಯ ಎರಡು ಶಾಸಕರ ಸಲಹೆ ಸೂಚನೆಗಳನ್ನು ಪಾಲಿಸುತ್ತ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ. ಪಕ್ಷದಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಹಿರಿಯರ ಮಾರ್ಗದರ್ಶನದಂತೆ ಸರಿಪಡಿಸಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದರು.

ಪೊನ್ನAಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಮಾತನಾಡಿ ಪಕ್ಷದ ಪ್ರಮುಖರು ಉನ್ನತ ಹುದ್ದೆಗಳನ್ನು ಸ್ವೀಕರಿಸಿದ ತರುವಾಯ ಜಿಲ್ಲೆಗೆ ಆಗಮಿಸುವ ಸಂದರ್ಭ ಅವರನ್ನು ಆತ್ಮೀಯವಾಗಿ ಸ್ವಾಗತಿಸುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಮೂಕಳೇರ ಕುಶಾಲಪ್ಪ, ಪಿ.ಆರ್.ಪಂಕಜ, ಬಾಲಕೃಷ್ಣ, ಬಿ.ಎನ್.ಪ್ರಥ್ವಿ, ಕಾಂಗ್ರೆಸ್ ಮುಖಂಡರುಗಳಾದ ಚೊಟ್ಟೆಯಂಡಮಾಡ ವಿಶುರಂಜಿ, ತೀತಮಾಡ ಸದನ್, ಮುಕ್ಕಾಟಿರ ಸಂದಿಪ್, ಪವನ್ ಚಿಟ್ಟಿಯಪ್ಪ, ಅಪ್ಪಚಂಗಡ ಮೋಟಯ್ಯ, ಕೊಲ್ಲಿರ ಬೋಪಣ್ಣ, ಮೂಕಳೇರ ಆಶಾ,ಕೊಕ್ಕಂಡ ರೂಪ ಭೀಮಯ್ಯ, ಮೂಕಳೇರ ಸುಮಿತ ಗಣೇಶ್, ತೆರೆಸಾ ವಿಕ್ಟರ್, ಕುಸುಮಾಜೋಯಪ್ಪ, ಆಪಟ್ಟಿರ ಟಾಟೂ ಮೊಣ್ಣಪ್ಪ, ವಿ.ಟಿ.ವಾಸು, ಪಿ.ಕೆ. ಸಿದ್ದಪ್ಪ, ಮಣಿಕುಂಞ, ಎಸ್.ಹೆಚ್. ಮತೀನ್, ಮಾಳೇಟಿರ ಬೋಪಣ್ಣ, ಶಂಶು, ರಫೀಕ್, ಶಭೀರ್, ಜೋಕಿಂ, ಶಬರಿಶೆಟ್ಟಿ, ಸಮೀರ್, ಎ.ಜೆ.ಬಾಬು, ಮಹಾಬಲ, ಚೆಪ್ಪುಡೀರ ಬೋಪಣ್ಣ, ಖಾಲಿದ್, ಅಬ್ದುಲ್ ಸಮ್ಮದ್, ಕಾಡ್ಯಮಾಡ ಚೇತನ್, ಪ್ರಶಾಂತ್ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.

-ಹೆಚ್.ಕೆ.ಜಗದೀಶ್