ಮಡಿಕೇರಿ, ಸೆ. ೧೧; ಜಿಲ್ಲೆಗೆ ಮಾರಕವಾಗಿ ಪರಿಣಮಿಸಿರುವ ಕಸ್ತೂರಿ ರಂಗನ್ ವರದಿ ಜಾರಿಯಿಂದ ಜಿಲ್ಲೆಯ ಜನತೆಗೆ ಯಾವದೇ ತೊಂದರೆಯಾಗಲು ಅವಕಾಶ ನೀಡುವದಿಲ್ಲವೆಂದು ರೈತ ಹೋರಾಟ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಪ್ರಮುಖರು ಭರವಸೆ ನೀಡಿದ್ದಾರೆ.
ಗಾಂಧಿ ಮೈದಾನದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು; ಕಸ್ತೂರಿ ರಂಗನ್ ವರದಿಗೆ ಸಂಬAಧಿಸಿದAತೆ ಜುಲೈ ತಿಂಗಳಲ್ಲಿ ೭ನೇ ಕರಡು ತಿದ್ದುಪಡಿ ಪ್ರಕಟವಾಗಿದ್ದು, ೫೩ ಗ್ರಾಮಗಳು ಒಳಪಡಲಿವೆ ಎಂದು ಉಲ್ಲೇಖಿಸಲಾಗಿದೆ. ಆದರೆ ಅದರಲ್ಲಿ ಸೂಕ್ಷö್ಮ ಪರಿಸರ ವಲಯದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ. ಇದರಿಂದಾಗಿ ಅರಣ್ಯದಂಚಿನಲ್ಲಿ ವಾಸಿಸುತ್ತಿರುವವರ ಬದುಕು ಕಷ್ಟವಾಗಲಿದೆ. ಜಿಲ್ಲೆಯ ರೈತರು ಅರಣ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಅಧಿಕಾರಿಗಳು ರೈತರ ಒಳ್ಳೆತನ, ತಾಳ್ಮೆ ಪರೀಕ್ಷೆ ಮಾಡಬಾರದು. ಅವರಿಗೆ ರಕ್ಷಣೆ ನೀಡಬೇಕೆಂದು ಹೇಳಿದರು. ಕಸ್ತೂರಿರಂಗನ್ ವರದಿಯಿಂದಾಗಿ ಮುಂದಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ಸಿಗಲಿದೆಯೇ ಎಂಬ ಪ್ರಶ್ನೆ ಕೂಡ ಮೂಡುತ್ತಿದೆ. ೫೩ ಹಳ್ಳಿಗಳನ್ನು ಹೇಗೆ ಗುರುತು ಮಾಡಿದ್ದಾರೆ ಎಂದು ತಿಳಿಯುತ್ತಿಲ್ಲ, ಈ ಸಂಬAಧ ಸರಕಾರ ತಾ.೨೧ ರಿಂದ ೨೩ರವರೆಗೆ ವಿಶೇಷ ಅಧಿವೇಶನ ಏರ್ಪಡಿಸಿದೆ. ಅಲ್ಲಿ ವರದಿಯನ್ನು ಪಕ್ಷಾತೀತವಾಗಿ ತಿರಸ್ಕಾರ ಮಾಡಿ ನಿರ್ಣಯ ಕೈಗೊಂಡು ಕೇಂದ್ರ ಸರಕಾರಕ್ಕೆ ಸಲ್ಲಿಸಲು ಒತ್ತಾಯಿಸಲಾಗುವದು ಎಂದರು.
ಕಾಡಿನೊಳಗೆ ಇರುವವರ ಪರಿಸ್ಥಿತಿ.?
ಅರಣ್ಯ ಕಾಯ್ದೆ ೧೯೮೦ರಿಂದಲೇ ಇದ್ದು ಮತ್ತೆ ಹೊಸ ಕಾಯ್ದೆ ಏಕೆ ಎಂದು ಪ್ರಶ್ನಿಸಿದ ಶಾಸಕರು; ನಾವುಗಳು ಕಾಡಿನ ಹೊರಗಡೆ ಇರುವವರ ಸಮಸ್ಯೆ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ಆದರೆ, ಕಾಡಿನೊಳಗಡೆ, ಕಾಡನ್ನೇ ನಂಬಿಕೊAಡಿರುವ ಮೂಲನಿವಾಸಿಗಳ ಬದುಕು, ಸಂಕಷ್ಟದ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಿ ವರದಿ ಸಲ್ಲಿಸಬೇಕಿದೆ ಎಂದರು.
ಸಮಿತಿಯ ಕಾನೂನು ಸಲಹೆಗಾರ ಬಿ.ಜೆ. ದೀಪಕ್ ವರದಿಯ ಸಾಧಕ ಬಾಧಕಗಳ ಬಗ್ಗೆ ಪ್ರಾಸ್ತಾವಿಕವಾಗಿ ವಿವರಣೆ ನೀಡಿದರು.
೪ಏಳನೇ ಪುಟಕ್ಕೆ
ವೇದಿಕೆಯಲ್ಲಿ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ಕಾರ್ಯದರ್ಶಿ ಧರ್ಮಜ ಉತ್ತಪ್ಪ, ಮಾಜಿ ಶಾಸಕ ಎಸ್.ಜಿ.ಮೇದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಜೆಡಿಎಸ್ ಅಧ್ಯಕ್ಷ ಸಿ.ಎಲ್. ವಿಶ್ವ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಸಮಿತಿಯ ಪ್ರಮುಖ ದಿನೇಶ್ ಇತರರಿದ್ದರು. ಸಮಿತಿಯ ಪ್ರಮುಖ ಕೆ.ಎಂ.ಲೋಕೇಶ್ ಸ್ವಾಗತಿಸಿದರೆ, ಪುರುಷೋತ್ತಮ ರೈತ ಗೀತೆ ಹಾಡಿದರು.