ಮಡಿಕೇರಿ,ಸೆ.೧೧: ಜಿಲ್ಲೆಯ ರೈತರು ಹಾಗೂ ಬೆಳೆಗಾರರಿಗೆ ಮಾರಕವಾಗಿರುವ ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತಂತೆ ಹೊರಡಿಸಲಾಗಿರುವ ಕಸ್ತೂರಿ ರಂಗನ್ ವರದಿಯ ಕರಡು ಪಟ್ಟಿಯನ್ನು ವಿರೋಧಿಸಿ ಜಿಲ್ಲೆಯ ರೈತರು, ಬೆಳೆಗಾರರು ರಸ್ತೆಗಿಳಿದು ಪ್ರತಿಭಟನೆ ಮಾಡಿದರು. ಶಾಂತಯುತವಾಗಿ ಮೆರವಣಿಗೆ ಮೂಲಕ ಸಾಗುತ್ತಿದ್ದ ರೈತರು ದಿಢೀರಾಗಿ ರಸ್ತೆ ತಡೆ ಮಾಡಿದರಲ್ಲದೆ, ಸ್ಥಳಕ್ಕಾಗಮಿಸಿದ ಜಿಲ್ಲೆಯ ಅಧಿಕಾರಿಗಳನ್ನು ಕೂಡ ಕೆಲ ಕಾಲ ತಡೆದು ಪ್ರತಿಭಟನೆ ನಡೆಸಿದರು.

ರೈತ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ರೈತರು ಹಾಗೂ ಬೆಳೆಗಾರರು ನಗರದ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ಸಮಾವೇಶಗೊಂಡರು. ಅಲ್ಲಿಂದ ಮೆರವಣಿಗೆ ಮೂಲಕ ಹೊರಟು ಜ.ತಿಮ್ಮಯ್ಯ ವೃತ್ತದವರೆಗೆ ಸಾಗಿ ಬಂದರು. ಮೆರವಣಿಗೆಯುದ್ದಕ್ಕೂ ಅರಣ್ಯ ಇಲಾಖೆ, ಅಧಿಕಾರಿಗಳು, ಕಸ್ತೂರಿ ರಂಗನ್ ವರದಿ ಸಿ ಮತ್ತು ಡಿ ಜಾಗ ಹಾಗೂ ಸೆಕ್ಷನ್ ೪ ಅಧಿಸೂಚನೆ ವಿರುದ್ಧ ಹಾಗೂ ರೈತರ ಪರವಾಗಿ ಘೋಷಣೆಗಳನ್ನು ಕೂಗುತ್ತಲೇ ಇದ್ದರು.

ದಿಢೀರ್ ರಸ್ತೆ ತಡೆ

ತಿಮ್ಮಯ್ಯ ವೃತ್ತದವರೆಗೂ ಸಾಗಿ ಬಂದ ಪ್ರತಿಭಟನಾಕಾರರು ವೃತ್ತದಲ್ಲಿ ದಿಢೀರಾಗಿ ರಸ್ತೆ ತಡೆಗೆ ಮುಂದಾದರು. ಸಾವಿರಾರು ಸಂಖ್ಯೆಯಲ್ಲಿದ್ದ ರೈತರು ಒಮ್ಮೆಲೆ ರಸ್ತೆ ತಡೆಗೆ ಮುಂದಾದುದರಿAದ ಬಂದೋಬಸ್ತ್ನಲ್ಲಿದ್ದ ಪೊಲೀಸರಿಗೂ ಏನೂ ಮಾಡಲಾಗಲಿಲ್ಲ. ಎಲ್ಲ ಕಡೆಗಳಿಂದಲೂ ರಸ್ತೆಗಳು ಬಂದ್ ಆಗಿ ವಾಹನ ಸಂಚಾರ ಸ್ಥಗಿತಗೊಂಡಿತು.

ಅಧಿಕಾರಿಗಳ ಆಗಮನಕ್ಕೆ ಪಟ್ಟು

ರಸ್ತೆ ತಡೆ ಸಂದರ್ಭ ಮಾತನಾಡಿದ ವಿವಿಧ ಸಂಘಟನೆಗಳ ಪ್ರಮುಖರು; ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಗೆ ಸಂಬAಧಿಸಿದAತೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯಿಂದ ಯಾವದೇ ಸಭೆ ಕರೆಯದೆ, ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಸ್ಥಳಕ್ಕೆ ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು. ಸಮಯ ಕಳೆಯುತ್ತಲೇ ಸ್ಥಳಕ್ಕೆ ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಅರಣ್ಯ ಸಂರಕ್ಷಣಾಧಿಕಾರಿ ಸೊನಾಲ್ ವೃಷ್ಣಿ, ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರುಗಳು ಆಗಮಿಸಿದರು.

ಸಭೆ ನಡೆಸಲು ಕ್ರಮ

ಅಧಿಕಾರಿಗಳು ಆಗಮಿಸಿದ ಬಳಿಕ ಹೋರಾಟ ಸಮಿತಿಯ ಪ್ರಮುಖರು ಕಸ್ತೂರಿ ರಂಗನ್ ವರದಿ ಅಧಿಸೂಚನೆಗೆ ಸಂಬAಧಿಸಿದAತೆ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸಭೆ ಕರೆದು ಆಕ್ಷೇಪಣೆ ಸಲ್ಲಿಸುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದರೂ ಸಭೆ ಕರೆಯದ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳನ್ನು ಪ್ರಶ್ನಿಸಿದರಲ್ಲದೆ, ಮುಂದಿನ ಒಂದು ವಾರದೊಳಗಡೆ ಸಭೆ ಏರ್ಪಡಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸೋಮಶೇಖರ್ ಅವರು; ಕಸ್ತೂರಿ ರಂಗನ್ ವರದಿಗೆ ಸಂಬAಧಿಸಿದAತೆ ರೈತರ ಭಾವನೆಗಳ ಅರಿವಾಗಿದೆ. ಈ ಸಂಬAಧ ಗ್ರಾಮ ಸಭೆಗಳನ್ನು ಏರ್ಪಡಿಸಿ ಸ್ಪಂದಿಸುವ ಕೆಲಸ ಮಾಡುತ್ತೇವೆ. ಸಭೆಗೆ ಸಂಬAಧಿಸಿದAತೆ ನೋಟಿಸ್ ಕಳುಹಿಸಲು ಒಂದು ವಾರದ ಅವಶ್ಯಕತೆ ಬೇಕಾಗುತ್ತದೆ. ಆದಷ್ಟು ಶೀಘ್ರ ಸಭೆ ಏರ್ಪಡಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವದೆಂದು ಹೇಳಿದರು.

ಪರಿಹಾರಕ್ಕಾಗಿ ಹೋರಾಟ

ಕಸ್ತೂರಿ ರಂಗನ್ ವರದಿ ವಿರುದ್ಧ ನಡೆಯುತ್ತಿದ್ದ ಹೋರಾಟ ಒಮ್ಮೆಲೆ ಬೇರೆ ದಿಕ್ಕಿನತ್ತ ತಿರುಗಿತು. ವರ್ಷದ ಹಿಂದೆ ಮುಕ್ಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಅವರು ನೆಟ್ಟು ಬೆಳೆಸಿದ ಏಲಕ್ಕಿ ಗಿಡಗಳನ್ನು ಅರಣ್ಯ ಇಲಾಖೆಯವರು ಕಡಿದು ನಾಶಪಡಿಸಿದ್ದು, ಇಲಾಖಾ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸುವದರೊಂದಿಗೆ ನಾಣಿಯಪ್ಪ ಅವರಿಗೆ ಪರಿಹಾರ ಒದಗಿಸಬೇಕೆಂದು ಹೋರಾಟ ಸಮಿತಿಯ ಪ್ರಮುಖರು ಅರಣ್ಯ ಇಲಾಖಾ ಸಂರಕ್ಷಣಾಧಿಗಳನ್ನು ಆಗ್ರಹಿಸಿದರು. ಒಂದು ವಾರದೊಳಗಡೆ ಪರಿಹಾರ ಒದಗಿಸುವದಾಗಿ ಅಧಿಕಾರಿ ಹೇಳಿದಾಗ ಅದಕ್ಕೊಪ್ಪದ ಹೋರಾಟಗಾರರು ಸ್ಥಳದಲ್ಲೇ ನೀಡುವಂತೆ ಒತ್ತಾಯಿಸಿದರು. ಅಧಿಕಾರಿ ಮೇಲಧಿಕಾರಿಗಳೊಂದಿಗೆ ಮಾತನಾಡಿ ಎರಡು ದಿನಗಳೊಳಗಡೆ ನೀಡುವದಾಗಿ ಹೇಳಿದಾಗ ಅದಕ್ಕೂ ಒಪ್ಪದ ಹೋರಾಟಗಾರರು; ಎರಡು ಗಂಟೆ ಕೂಡ ಸಮಯ ನೀಡುವದಿಲ್ಲವೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಅವರು; ಅರಣ್ಯ ಇಲಾಖೆಯವರು ಗಿಡಗಳನ್ನು ಕಡಿಯಬಾರದಿತ್ತು. ಇದರಲ್ಲಿ ಅವರದ್ದು ತಪ್ಪಾಗಿದೆ. ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ನಷ್ಟ ಭರಿಸಿಕೊಡಬೇಕು. ರೈತರ ಕಷ್ಟ ಅರ್ಥ ಮಾಡಿಕೊಳ್ಳಬೇಕು, ಎರಡು ದಿನಗಳಲ್ಲಿ ಪರಿಹಾರ ನೀಡುವದಾಗಿ ಅಧಿಕಾರಿ ಹೇಳಿದ್ದಾರೆ. ಅದರಂತೆ ನೀಡಬೇಕೆಂದು ಹೇಳಿದರು. ಆದರೂ ಸಮಾಧಾನಕ್ಕೆ ಬಾರದ ಹೋರಾಟಗಾರರು ಪರಿಹಾರ ನೀಡದಿದ್ದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿ ರಸ್ತೆಯಲ್ಲೇ ಧರಣಿಗೆ ಮುಂದಾದರು. ಪರಿಸ್ಥಿತಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಸೋಮಶೇಖರ್ ಅವರು, ತಾವು ಪರಿಹಾರದ ಚೆಕ್ ನೀಡುವದಾಗಿ ಹೇಳಿದರು.

ಜಿಲ್ಲಾಧಿಕಾರಿಗಳು ಚೆಕ್ ನೀಡುವದಾಗಿ ಘೋಷಿಸಿದ ಬಳಿಕ ರಸ್ತೆ ತಡೆಯನ್ನು ಕೈಬಿಟ್ಟ ಹೋರಾಟಗಾರರು ಬಳಿಕ ಸಭಾ ಕಾರ್ಯಕ್ರಮ ನಿಗದಿಯಾಗಿದ್ದ ಗಾಂಧಿ ಮೈದಾನತ್ತ ತೆರಳಿದರು.