ಕರಿಕೆ, ಸೆ. ೧೧: ಸಂಪಾಜೆ ವಲಯ ವ್ಯಾಪ್ತಿಯ ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶದಿಂದ ಕಳ್ಳತನ ಮಾಡಲಾಗಿದ್ದ ತೇಗದ ಮರದ ೧೦ ನಾಟಾಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.
ಸAಪಾಜೆ ಗ್ರಾಮದ ಕೊಯನಾಡು-ಚಿಟ್ಟೆಕಾನದಲ್ಲಿ ಪವನ್ ಎ.ಕೆ. ಅವರ ಮನೆಯ ಕೋಣೆಯೊಂದರಲ್ಲಿ ೧೦ ತೇಗದ ನಾಟಗಳು ಪತ್ತೆಯಾಗಿದ್ದು, ಈ ಸಂಬAಧ ಸಂಪಾಜೆ ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂಥಿಲ್ ಕುಮಾರ್ ಹಾಗೂ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ರಕ್ಷಾ ಹಾಗೂ ಸಂದೀಪ್ ಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಗಸ್ತು ವನಪಾಲಕರಾದ ಕಾಂತ ಬಿರಾದಾರ್, ಶೋಭಾ, ಸತೀಶ್ ಯಲ್ಲಾಲಿಂಗ, ಸಿದ್ಧರಾಮ ನಾಟಿಕರ, ನಾಗರಾಜ ಹಾಗೂ ಇಲಾಖಾ ಸಿಬ್ಬಂದಿಗಳಾದ ಮನೋಹರ, ಜಯರಾಮ್, ಗಹನ್, ಪ್ರಕಾಶ್, ಮಾಧವ, ಶೇಸಪ್ಪ, ಪುರುಷೋತ್ತಮ, ಹರ್ಷಿತ್, ಕಾಂತಪ್ಪ, ಚಿನ್ನಪ್ಪ, ವಸಂತ ಹಾಗೂ ವಿಶ್ವನಾಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. - ಸುಧೀರ್