(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಸೆ. ೧೧: ಎಸ್ಐಆರ್ ಪ್ರಕ್ರಿಯೆಯಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಕೊಡಗು ಜಿಲ್ಲೆಯ ೫೮,೮೮೩ ಮತದಾರರಿಗೆ ಈಗಾಗಲೇ ನೋಟಿಸ್ ಜನರೇಟ್ ಆಗಿದ್ದು, ಇದುವರೆಗೆ ೪೭,೩೪೧, ಮತದಾರರಿಗೆ ನೋಟಿಸ್ ವಿತರಣೆ ಮಾಡಲಾಗಿದ್ದು,ಇನ್ನೂ ೧೧,೫೪೨ ಮತದಾರರಿಗೆ ನೋಟಿಸ್ ವಿತರಣೆ ಮಾಡಬೇಕಿದೆ.
ಮತದಾರರಿಗೆ
ವಿತರಣೆಯಾಗಿರುವ ನೋಟಿಸ್ಗಳಲ್ಲಿ ಇದುವರೆಗೆ ಕೇವಲ ೧೦,೧೧೯ ಮತದಾರರ ವಿಚಾರಣೆ ಪೂರ್ಣಗೊಂಡಿದ್ದು, ಇನ್ನೂ ಕೂಡ ೩೭,೨೨೨ ಮತದಾರರ ವಿಚಾರಣೆ ಬಾಕಿ ಇದೆ. ಜಿಲ್ಲೆಯಲ್ಲಿ ೭೩ ಹೆಚ್ಚುವರಿ ಇ.ಆರ್.ಒಗಳನ್ನು ಮತದಾರರ ವಿಚಾರಣೆಗೆ ಹೆಚ್ಚುವರಿಯಾಗಿ ನೇಮಿಸಲಾಗಿದೆ. ಅಕ್ಟೋಬರ್ ೧೨ರವರೆಗೆ ವಿಚಾರಣೆ ನಡೆಯಲಿದೆ.
ಅಸ್ವಸ್ಥ ವೃದ್ಧೆಯನ್ನು ಕರೆತಂದು ವಿಚಾರಣೆ!
ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಒಂದರಲ್ಲಿ ಲಾಜಿಕಲ್ ಡಿಸ್ಕಿçಪೆನ್ಸಿ ಅಡಿಯಲ್ಲಿ ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರಿಗೆ ನೋಟಿಸ್ ನೀಡಲಾಗಿತ್ತು. ಸೆಪ್ಟೆಂಬರ್ ೧೦ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.
ಬಿದ್ದು ಕಾಲಿಗೆ ಏಟಾಗಿ ಹಾಸಿಗೆ ಹಿಡಿದಿದ್ದ ವೃದ್ಧೆಯ ಪರವಾಗಿ ಕುಟುಂಬಸ್ಥರು ವಿಚಾರಣೆಗೆ ಹಾಜರಾಗಲು ಅನುಮತಿ ಕೋರಿದ್ದರು. ಆದರೆ ಇಆರ್ಒ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೊರ ಜಿಲ್ಲೆಗಳಲ್ಲಿ ೮೫ ವರ್ಷ ಮೇಲ್ಪಟ್ಟ, ಅನಾರೋಗ್ಯ ಪೀಡಿತ ಮತ್ತು ವಿಶೇಷಚೇತನ ಮತದಾರರ ಮನೆಗೆ ಖುದ್ದು ಇಆರ್ಒಗಳು ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದರೆ, ಸಿದ್ದಾಪುರದಲ್ಲಿ ಮನೆಗೆ ಭೇಟಿ ನೀಡದೆ ಆಯೋಗದ ಆದೇಶ ಉಲ್ಲಂಘಿಸಲಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ನೆರೆಮನೆಯವರ ಸಹಕಾರದಿಂದ ಕಾರಿನಲ್ಲಿ ವೃದ್ಧೆಯನ್ನು ಕರೆತಂದು ಪಂಚಾಯತ್ ಮುಂಭಾಗದಲ್ಲೇ ಇಆರ್ಒ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಬಹುದಿತ್ತು ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.
ಹಿರಿಯರು, ಅಂಗವಿಕಲರಿಗೆ ರಿಲೀಫ್ - ಕುಟುಂಬಸ್ಥರು ಹಾಜರಾಗಲು ಅವಕಾಶ
ಎಸ್ಐಆರ್-೨೦೨೬ ರ ಅಡಿ ನೋಟಿಸ್ ಪಡೆದಿರುವ ಹಿರಿಯ ನಾಗರಿಕರು, ಅಂಗವಿಕಲರು, ಅನಾರೋಗ್ಯ ಪೀಡಿತರು ಹಾಗೂ ವಿದೇಶದಲ್ಲಿರುವ ಮತದಾರರು ಸ್ವತಃ ಹಾಜರಾಗಲು ಸಾಧ್ಯವಾಗದಿದ್ದರೆ, ಅವರ ಪರವಾಗಿ ಕುಟುಂಬದ ಯಾವುದೇ ವಯಸ್ಕ ಸದಸ್ಯರು ಚುನಾವಣಾ ನೋಂದಣಿ ಅಧಿಕಾರಿ (ಇಖಔ) ಅಥವಾ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (ಂಇಖಔ) ಮುಂದೆ ಹಾಜರಾಗಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ. ಕುಟುಂಬದ ವಯಸ್ಕ ಸದಸ್ಯರು ಸಂಬAಧಿತ ಮತದಾರರ ಪರವಾಗಿ ಹಾಜರಾಗಿ ಅಗತ್ಯ ದಾಖಲೆ ಮತ್ತು ಮಾಹಿತಿ ಸಲ್ಲಿಸಬಹುದಾಗಿದ್ದು, ಈ ಅವಕಾಶವನ್ನು ನೋಟಿಸ್ ವಿಲೇವಾರಿ ಪ್ರಕ್ರಿಯೆಯಲ್ಲಿ ಕಲ್ಪಿಸುವಂತೆ ಇಖಔ ಮತ್ತು ಂಇಖಔ ಗಳಿಗೆ ಸೂಚನೆ ನೀಡಲಾಗಿದೆ. ಭಾರತೀಯ ಚುನಾವಣಾ ಆಯೋಗದ ಮೇ ೧೪, ೨೦೨೬ರ ಪತ್ರ ಸಂಖ್ಯೆ ೨೩/೨೦೨೫-ಇಖS (ಗಿoಟ.II) ಉಲ್ಲೇಖಿಸಿ, ಕರ್ನಾಟಕದ ಜಂಟಿ ಮುಖ್ಯ ಚುನಾವಣಾಧಿಕಾರಿಯವರು ಸೆ.೧೧ರಂದು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.
ಕೊಡಗಿನಲ್ಲಿ ೨೦ ಸಾವಿರಕ್ಕೂ ಹೆಚ್ಚು ಅರ್ಜಿ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIಖ-೨೦೨೬) ಅಂಗವಾಗಿ ಕೊಡಗು ಜಿಲ್ಲೆಯಲ್ಲಿ ಜೂನ್ ೧೬ ರಿಂದ ಸೆಪ್ಟೆಂಬರ್ ೯ ರವರೆಗೆ ಒಟ್ಟು ೨೦,೦೨೧ ಅರ್ಜಿಗಳು ಸಲ್ಲಿಕೆಯಾಗಿವೆ. ಚುನಾವಣಾ ಆಯೋಗದ ವರದಿ ಪ್ರಕಾರ, ಹೊಸ ಮತದಾರರ ಸೇರ್ಪಡೆಗಾಗಿ ಈಔಖಒ-೬ - ೩,೬೭೮ ಅರ್ಜಿ, ವಿದೇಶದಲ್ಲಿರುವ ಮತದಾರರ ನೋಂದಣಿಗೆ ಈಔಖಒ-೬ಂ - ೨೨ ಅರ್ಜಿ ಸಲ್ಲಿಕೆಯಾಗಿವೆ. ಹೆಸರು ತೆಗೆಯಲು ಈಔಖಒ-೭ - ೨೩೭ ಅರ್ಜಿ, ಹಾಗೂ ತಿದ್ದುಪಡಿ ಮತ್ತು ವಿಳಾಸ ಬದಲಾವಣೆಗಾಗಿ ಈಔಖಒ-೮ - ೧೬,೦೮೪ ಅರ್ಜಿಗಳು ಸಲ್ಲಿಕೆಯಾಗಿದೆ.