ಮಡಿಕೇರಿ: ಅರೆಭಾಷೆ ಗೌಡ ಸಮುದಾಯದ ಸಭೆಯಲ್ಲಿ ಕೊಡವ ಸಮುದಾಯದವರ ಅಸ್ತಿತವನ್ನೇ ಪ್ರಶ್ನಿಸುವ ಮತ್ತು ನಮ್ಮಹಕ್ಕುಗಳಿಗೆ ಅಡ್ಡಗಾಲು ಹಾಕುವ ನಿರ್ಣಯಗಳನ್ನು ತೆಗೆದುಕೊಂಡಿರುÀವ ವಿಷಯವನ್ನು ಕಡಗದಾಳು ಇಗ್ಗುತಪ್ಪÀ ಕೂರುಳಿ ಅಂಬಲ ಮಂದ್ ಟ್ರಸ್ಟ್ ಹಾಗೂ ಮಂದ್ ಗೆ ಒಳಪಡುವ ೭ ನಾಡಿನ ಮೂಲನಿವಾಸಿಗಳು ತೀವ್ರವಾಗಿ ಖಂಡಿಸುತ್ತೆವೆ ಎಂದು ಹೇಳಿಕೆ ನೀಡಿದ್ದಾರೆ.

ಕೆಲ ವರ್ಷಗಳ ಹಿಂದಿನವರೆಗೆ ಅರೆಭಾಷೆ ಗೌಡ ಜನಾಂಗದವರಿಗೆ ಕೊಡವರ ಮೇಲೆ ಇಲ್ಲದೇ ಇದ್ದ ಈರ್ಷ್ಯೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಮಾಜದ ಸ್ವಾಸ್ಥö್ಯವನ್ನು ಕೆಡಿಸುವಂತದ್ದಾಗಿದೆ. ಅರೆಭಾಷೆ ಜನಾಂಗದ ಕೆಲವರು ಜನಾಂಗ ಜನಾಂಗಳ ನಡುವೆ ವಿಷಬೀಜ ಬಿತ್ತಿ ತಮಾಷೆ ನೋಡುವ ಧೋರಣೆಯಾಗಿದೆ ಎಂದಿದ್ದಾರೆ.

ನಮಗೆ ಸಿಗಬೇಕಿರುವ ಹಕ್ಕನ್ನು ನಾವು ಸಾಂವಿಧಾನಿಕವಾಗಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಬೇಡಿಕೆಗಳು ಸೂಕ್ತವಾಗಿವೆ. ಸಕಾರಣದಿಂದ ಕೂಡಿವೆ. ಇದಕ್ಕಾಗಿ ನಮ್ಮ ಹಲವು ಸಂಘಟನೆಗಳು ಸತತವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಕೊಡಗಿನ ಕೊಡವ ಜನಾಂಗ ಇಂತಹ ಹೋರಾಟಗಳಿಗೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಈ ಹಕ್ಕುಗಳನ್ನು ಪಡೆಯಲು ನಮಗಳಿಗೆ ಅರ್ಹತೆ ಇವೆ ಎಂದಾದಲ್ಲಿ ಅದನ್ನು ವಿಮರ್ಶಿಸಲು, ನೀಡಲು ಅದಕ್ಕೆ ಸಂಬಧಪಟ್ಟವರಿದ್ದಾರೆ. ಬೇಡಿಕೆಗಳನ್ನು ಮಂಡಿಸಲು ಯಾವುದೇ ನಾಯಕರ ಅಭಿಪ್ರಾಯ ನಮಗೆ ಅವಶ್ಯಕತೆ ಇಲ್ಲ ಎಂದು ಅವರುಗಳು ಹೇಳಿದ್ದಾರೆ.

ಇಂತಹ ಸಮಾಜ ಘಾತುಕ, ಜನಾಂಗವನ್ನು ಒಡೆಯುವ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಧೋರಣೆಗೆ ಇನ್ನಾದರೂ ಕಡಿವಾಣ ಹಾಕಿದರೆ ಒಳಿತು. ನಾವು ಇರುವುದೇ ಇಂಥದಕ್ಕೆ ಎಂಬ ಧೋರಣೆ ಮುಂದುವರಿದು ಮತ್ತೆ ಮತ್ತೆ ಕೊಡವ ಸಮುದಾಯದ ಅಸ್ತಿತ್ವವನ್ನು ಪ್ರಶ್ನಿಸಲು, ನಮ್ಮ ಹಕ್ಕುಗಳಿಗೆ ಅಡ್ಡಗಾಲು ಹಾಕುವ ಪ್ರಯತ್ನಗಳು ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಕೊಡವ ಸಮುದಾಯದ ಸಂಘಟನೆಗಳೊಡಗೂಡಿ ತೀವ್ರ ವಿರೋಧವನ್ನೂ ಎದುರಿಸಬೇಕಾಗುತ್ತದೆ ಎಂದು ಶ್ರೀ ಇಗ್ಗುತಪ್ಪ ಕೂರುಳಿ ಅಂಬಲ ಮಂದ್ ಟ್ರಸ್ಟ್ನ ಅಧ್ಯಕ್ಷ ಮಾದೇಟಿರ ಬೆಳ್ಯಪ್ಪ, ತಕ್ಕ ಕೊರವಂಡ ರಾಮು ಅಯ್ಯಪ್ಪ, ಟ್ರಸ್ಟಿ ಹಾಗೂ ದೇವತಕ್ಕ ಮುಕ್ಕಾಟಿರ ಸೋಮಯ್ಯ ಹಾಗೂ ಇತರರು ಎಚ್ಚರಿಸಿದ್ದಾರೆ.