ನಾಪೋಕ್ಲು, ಸೆ. ೧೧: ವಿದ್ಯೆ ಎಂಬುದು ಪುಸ್ತಕದ ಹುಳು ಅಲ್ಲ ಅದು ಮಸ್ತಕದ ಜ್ಞಾನ ಎಂದು ನಿವೃತ್ತ ಶಿಕ್ಷಕಿ ಮುಕ್ಕಾಟಿ ಗಂಗಮ್ಮ ಮಾದಪ್ಪ ಅವರು ಹೇಳಿದರು.
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಚೇರಂಬಾಣೆ ಗೌಡ ಸಮಾಜದಲ್ಲಿ ಆಯೋಜಿಸಲಾದ “ಅಂತರರಾಷ್ಟಿçÃಯ ಸಾಕ್ಷರತಾ ದಿನ” ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ರಾಜರ ಕಾಲದಲ್ಲಿ ಗುರುಕುಲದಲ್ಲಿ ವಿದ್ಯೆ ಕಲಿಯುತ್ತಿದ್ದರು. ನಮ್ಮ ಹಿರಿಯರು ಮರದಡಿಯಲ್ಲಿ ವಿದ್ಯೆ ಕಲಿತರು, ನಾವು ಮನೆಯಿಂದ ಶಾಲೆಗೆ ಹೋಗಿ ವಿದ್ಯೆ ಕಲಿತೆವು. ಆದರೆ ಇಂದು ನಮ್ಮ ಮಕ್ಕಳು ಗುರುಕುಲದಂತೆಯೇ ವಸತಿ ನಿಲಯದಲ್ಲಿ ವಿದ್ಯೆ ಕಲಿಯುವಂತಾಗಿದೆ. ಗಾಂಧೀಜಿ ಹೇಳಿದಂತೆ ನಮ್ಮ ಮಕ್ಕಳಿಗೆ ನಾವು ಮೂಲ ಶಿಕ್ಷಣದ ಮೂಲಕ ಬೋಧನೆ ಮಾಡಿದಲ್ಲಿ ನಮ್ಮ ಜನಪದ ಸಾಂಸ್ಕೃತಿ ಉಳಿಯುತ್ತದೆ ಎಂದರು. ೧೯೬೬ ರಲ್ಲಿ ಸಾಕ್ಷರತಾ ದಿನ ಜಾರಿಗೆ ಬಂದಿದ್ದು ೧೯೬೭ ರಿಂದ ಸೆಪ್ಟೆಂಬರ್ ೮ ರಂದು ಅಂತರರಾಷ್ಟಿçÃಯ ಸಾಕ್ಷರತಾ ದಿನ ಎಂದು ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ತುಳಸಿ ಮೋಹನ್, ಸಾಕ್ಷರತೆ ಎಂದರೆ ಓದುವ, ಬರೆಯುವ ಮತ್ತು ದೈನಂದಿನ ಬದುಕಿನಲ್ಲಿ ಅಗತ್ಯವಿರುವ ಮೂಲಭೂತ ಲೆಕ್ಕಾಚಾರ ಅಥವಾ ಜ್ಞಾನವನ್ನು ಪಡೆದು ಕೊಳ್ಳುವುದಾಗಿದೆ ಎಂದರು.
ಒಕ್ಕೂಟದ ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ, ನಿವೃತ್ತ ಶಿಕ್ಷಕಿ ಅಣ್ಣೆಚ್ಚಿರ ಬೋಜಮ್ಮ ಕುಶಾಲಪ್ಪ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕೂರನ ಸುಶೀಲ ಅಪ್ಪಾಜಿ, ಸಂಘಟನಾ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ ಸೇರಿದಂತೆ ಒಕ್ಕೂಟದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ಪ್ರಾರ್ಥಿಸಿ ಕಡ್ಯದ ಸ್ಮಿತಾ ಜೀವನ್ ಸರ್ವರನ್ನು ಸ್ವಾಗತಿಸಿದರು. ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ ಕಾರ್ಯಕ್ರಮ ನಿರೂಪಿಸಿ ಕಾಳೇರಮ್ಮನ ರಶಿ ಅಶೋಕ್ ವಂದಿಸಿದರು.