ಕೂಡಿಗೆ, ಸೆ ೧೧: ನಂಜರಾಯಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಡ್ಲಳ್ಳಿ ಪ್ರಸನ್ನ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಅವಿಶ್ವಾಸ ನಿರ್ಣಯಣದಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಉಳಿದ ಅವಧಿಗೆ ಹಡ್ಲಳ್ಳಿ ಪ್ರಸನ್ನ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಈ ಸಂದರ್ಭ ಉಪಾಧ್ಯಕ್ಷ ಕೆಮ್ಮಾರನ ಲೋಕನಾಥ್, ನಿರ್ದೇಶಕರಾದ ಕಲ್ಲೇಗೌಡನ ಸುರೇಶ್, ಹಡ್ಲಳ್ಳಿ ಸತೀಶ್, ಸುಭಾಶ್, ಕೆ. ವೇಲಾಯುಧ, ಜೆ.ಸಿ. ತಮ್ಮಯ್ಯ, ಪಾಣತ್ತಲೆ ಕುಸುಮ, ಸಿ.ವಿ. ಪುಷ್ಪಾವತಿ ಹಾಗೂ ಕಾರ್ಯದರ್ಶಿ ಕುದುಕುಳಿ ಹರಿಣಿ ಕುಮಾರಿ ಇದ್ದರು.

ಈ ಸಂದರ್ಭ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಲ್. ವಿಶ್ವ, ಗೆಳೆಯರ ಬಳಗದ ಮೂಟೇರ ಬ್ರಿಜೇಶ್, ಕಲ್ಲೇಗೌಡನ ರವಿ ಬೆಳ್ಯಪ್ಪ, ಮೂಟೇರ ಅನಿಲ್, ಕೆದಂಬಾಡಿ ಚೇತನ್ ಇದ್ದರು.