ಕೇಂದ್ರ ಸಚಿವರ ಬಳಿ ನಿಯೋಗ
ಕಸ್ತೂರಿ ರಂಗನ್ ವರದಿಗೆ ಸಂಬAಧಿಸಿದAತೆ ಜಿಲ್ಲೆಯ ಜನಪ್ರತಿನಿಧಿಗಳು, ರೈತ ಹೋರಾಟ ಸಮಿತಿಯ ಪ್ರಮುಖರು ಸೇರಿ ಸಂಸದರೊಡಗೂಡಿ ಕೇಂದ್ರ ಅರಣ್ಯ ಸಚಿವರ ಬಳಿ ನಿಯೋಗ ತೆರಳಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಈ ವರದಿಯಲ್ಲಿರುವ ಮಾರಕ ಅಂಶಗಳನ್ನು ತಿರಸ್ಕಾರ ಮಾಡುವಂತೆ ಮನವಿ ಮಾಡಬೇಕು. ಕೊಡಗು ಮಾತ್ರವಲ್ಲದೆ ರಾಜ್ಯದ ಇತರ ಭಾಗದಲ್ಲಿಯೂ ಬಾಧಿತ ಸಮಸ್ಯೆಯಾಗಿರುವದರಿಂದ ಜೆಡಿಎಸ್ ಪಕ್ಷದ ವಿಶ್ವ ಅವರು ಕೇಂದ್ರ ಸಚಿವರಾಗಿರುವ ಹೆಚ್.ಡಿ.P ÀÄಮಾರಸ್ವಾಮಿ ಅವರ ಗಮನಕ್ಕೂ ತರಬೇಕು ಎಂದು ಶಾಸಕ ಮಂತರ್ ಗೌಡ ಸಭೆಯಲ್ಲಿ ಉಲ್ಲೇಖ ಮಾಡಿದರು.
ಕೊಡಗು ಉಳಿಯಬೇಕು
ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ; ಇಂದಿನ ಹೋರಾಟ ಎಂದಿಗೂ ಮರೆಯಲಾಗದ ದಿವಸವಾಗಲಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದುತೋರಿಸಲಾಗಿದ್ದು ಈ ಒಗ್ಗಟ್ಟು ಎಂದಿಗೂ ಮುಂದುವರಿಯಲೆAದು ಆಶಿಸಿದರು. ಕಸ್ತೂರಿ ರಂಗನ್ ವರದಿಗೆ ಸಂಬAಧಿಸಿದAತೆ ಕೇರಳ ರಾಜ್ಯದಲ್ಲಿ ಮಾಡಿದಂತೆ ಅರಣ್ಯ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೆ ಆಗಬೇಕು, ಅಂತರಿಕ್ಷ ಸರ್ವೆ ಮಾಡಿದರೆ ಸಾಲದು, ವರದಿಯಲ್ಲಿ ೫೩ ಗ್ರಾಮಗಳನ್ನು ಹೆಸರಿಸಲಾಗಿದೆಯಾದರೂ ಅದರಿಂದ ಕೊಡಗು ಜಿಲ್ಲೆಗೆ ಅಪಾಯವಿದೆ, ಜಿಲ್ಲೆಯೇ ಅರಣ್ಯಮಯವಾಗುವ ಸಾಧ್ಯತೆಯಿದೆ. ಈ ಬಗ್ಗೆ ಸರಕಾರದ ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ. ಜಿಲ್ಲೆಯ ಶಾಸಕರುಗಳು ಈ ಬಗ್ಗೆ ಮುತುವರ್ಜಿ ವಹಿಸಿಕೊಳ್ಳಬೇಕೆಂದು ಹೇಳಿದರು. ಬದುಕು ಸಾಗಿಸಲು ಅರಣ್ಯದ ಅವಶ್ಯಕತೆಯಿದೆ, ಅರಣ್ಯದ ರಕ್ಷಣೆಯಾಗಬೇಕು, ಅದನ್ನು ಅಧಿಕಾರಿಗಳು ಮಾಡಬೇಕು, ಆದರೆ ಜನಸಾಮಾನ್ಯರಿಗೆ ತೊಂದರೆ ಕೊಡಬಾರದು, ಕೊಡಗು ಕೊಡಗು ಜಿಲ್ಲೆಯಾಗಿಯೇ ಉಳಿಯಬೇಕೆಂದು ಆಶಿಸಿದರು.
ಜಾರಿಗೆ ಅವಕಾಶ ನೀಡುವದಿಲ್ಲ
ಮಾಜಿ ಸಚಿವ, ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ; ೨೦೧೦ರಲ್ಲಿ ಮಾಧವ ಗಾಡ್ಗಿಳ್ ವರದಿ ಜಾರಿಯಾದ ಸಂದರ್ಭ ಹೋರಾಟ ಸಮಿತಿ ರಚನೆ ಮಾಡಿ ಪಕ್ಷಾತೀತವಾಗಿ ಹೋರಾಟ ಮಾಡಿದ್ದಲ್ಲದೆ, ಸದನದಲ್ಲಿಯೂ ಎಲ್ಲರೂ ವಿರೋಧ ಮಾಡಿದ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ಅವರಿಗೆ ವಹಿಸಲಾಯಿತು. ಇದಕ್ಕೂ ಕೂಡ ಕೊಡಗಿನಿಂದಲೇ ಪ್ರಥಮ ವಿರೋಧ ವ್ಯಕ್ತಗೊಂಡಿತು. ಇದೀಗ ೭ನೇ ಕರಡು ತಿದ್ದುಪಡಿ ಬಂದಿದ್ದು, ಇದನ್ನು ರಾಜ್ಯ ಸರಕಾರದ ಮೂಲಕ ತಿರಸ್ಕರಿಸಬೇಕು. ಸರಕಾರ ಮೂರು ದಿವಸಗಳ ವಿಶೇಷ ಅಧಿವೇಶನ ಏರ್ಪಡಿಸಿದ್ದು, ಅಧಿವೇಶನದ ನಿರ್ಧಾರ ಏನೆಂಬದು ತಿಳಿಯಲಿದೆ ಎಂದರು. ಪರಿಸರವಾದಿಗಳ ಒತ್ತಡದಿಂದ ಅರಣ್ಯ ಇಲಾಖೆ ರೈತರಿಗೆ ಕಿರುಕುಳ ನೀಡುತ್ತಿದೆ. ಇಂದಿನ ಹೋರಾಟ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ರೈತರ ತೋಟಗಳಿಗೆ ದಾಳಿ ಮಾಡಿದರೆ ಓಡಿಸುವಂತಹ ಕೆಲಸವಾಗಬೇಕು. ವರದಿ ಸಂಬAಧ ಸಂಸದರು ಮಾಹಿತಿ ಪಡೆದು ಸಭೆ ನಡೆಸಿ ಚರ್ಚಿಸಿದ್ದಾರೆ. ತಾವೂ ಕೂಡ ದೆಹಲಿಗೆ ತೆರಳಿ ಸಂಸದರೊಡಗೂಡಿ ಸಚಿವರನ್ನು ಭೇಟಿ ಮಾಡಿ ವರದಿ ಜಾರಿ ಮಾಡಲು ಅವಕಾಶ ನೀಡುವದಿಲ್ಲವೆಂದು ಹೇಳಿದರು.
ರೈತರ ಪರವಾಗಿ ನಿಲ್ಲುತ್ತೇನೆ
ಕಸ್ತೂರಿ ರಂಗನ್ ವರದಿ, ಸಿ ಮತ್ತು ಡಿ ಜಮೀನು, ಸೆಕ್ಷನ್ ೪ ಅಧಿಸೂಚನೆ ಸಂಬAಧಿಸಿದAತೆ ಶಾಂತಿಯುತ ಹೋರಾಟ ಮಾಡಲಾಗಿದೆ. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಸಂದರ್ಭ ಬಂದಾಗ ತಾನೂ ಕೂಡ ಅಧಿಕಾರ ಬಿಟ್ಟು ರೈತರ ಪರವಾಗಿ ನಿಲ್ಲುತ್ತೇನೆ. ಯಾರೂ ಕೂಡ ತಮ್ಮ ಜಮೀನು ಕಳೆದುಕೊಳ್ಳಬೇಡಿ, ಮಾರಾಟ ಮಾಡದೆ ಸಂರಕ್ಷಣೆ ಮಾಡಿ, ರೈತರ ಬದುಕು, ರಕ್ಷಣೆಗೆ ಸದಾ ಇರುವದಾಗಿ ಮಂತರ್ ಗೌಡ ಹೇಳಿದರು.