ಮಡಿಕೇರಿ, ಸೆ. ೧೦: ಬೆಂಗಳೂರು ರಾಜಾಜಿನಗರದ ಭಗವತಿ ಕೊಡವಕೇರಿಯ ೩೫ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಬೆಂಗಳೂರು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ನೆರವೇರಿತು.
ಸಂಘದ ಅಧ್ಯಕ್ಷರಾದ ಸುಳ್ಳಿಮಾಡ ಕಾರ್ತಿಕ್ ಕಾವೇರಪ್ಪ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.
ಕೋಡಿರ ಸಾವಿತ್ರಿ, ಮಲ್ಲೇಂಗಡ ಕಮಲ, ಪಟ್ಟಡ ಡೈನಾ ಮತ್ತು ಶ್ಯಾಮಲ ಅವರುಗಳು ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಿದರು.
ಸಭೆಗೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೊಡವ ಸಮಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಬೆಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಅಸಿಸ್ಟೆಂಟ್ ಕಮಿಷನರ್ ಅಂಜಪರವAಡ ಕವಿತ ಕಾರ್ಯಪ್ಪ, ಪೊಲೀಸ್ ಇನ್ಸ್ಪೆಕ್ಟರ್ ನೆಲ್ಲಮಕ್ಕಡ ಪೂಣಚ್ಚ ಅವರುಗಳು ಭಾಗವಹಿಸಿದ್ದರು. ಕೊಡವ ಜನಾಂಗದ ಜನಸಂಖ್ಯೆ ಕಡಿಮೆಯಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ ಮುಖ್ಯ ಅತಿಥಿಗಳು, ಜನಸಂಖ್ಯೆ ವೃದ್ಧಿಗೆ ಯುವ ಜನಾಂಗಕ್ಕೆ ಕರೆ ನೀಡಿದರು. ಯುವಕರು ಮಾದಕ ವಸ್ತುಗಳಿಂದ ದೂರ ಉಳಿದು ಸ್ವಾಸ್ಥö್ಯ ಸಮಾಜದ ಬೆಳವಣಿಗೆಗೆ ಸಹಕರಿಸುವಂತೆಯೂ ಈ ಸಂದರ್ಭ ಕಿವಿಮಾತುಗಳನ್ನಾಡಿದರು. ಈ ಸಂದರ್ಭ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು.
ಪೆಮ್ಮಡಿಯಂಡ ಲೂವಿಕ್ ಪೂವಣ್ಣ ಪ್ರಾರ್ಥನೆ ಮಾಡಿದರು. ಅಧ್ಯಕ್ಷ ಸುಳ್ಳಿಮಾಡ ಕಾರ್ತಿಕ್ ಕಾವೇರಪ್ಪ ಸ್ವಾಗತಿಸಿದರು. ಉಪಾಧ್ಯಕ್ಷ ಪಟ್ಟಡ ಚಿಂತನ್ ಅಯ್ಯಪ್ಪ ವಂದನೆಗೈದರು. ಖಜಾಂಚಿ ಬೊಪ್ಪಂಡ ಪವನ್ ಅಯ್ಯಪ್ಪ ಲೆಕ್ಕಪತ್ರವನ್ನು ಸಭೆಗೆ ಒಪ್ಪಿಸಿದರು. ಚೋಕಿರ ಅನಿತ, ಕೋಳಿರ ರೇವತಿ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ವಿವಿಧ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.