ಕರಿಕೆ, ಸೆ. ೧೦: ಇಲ್ಲಿಗೆ ಸಮೀಪದ ತೋಟಮ್ ಬಳಿಯ ಕೇರಳ ಮೀಸಲು ಅರಣ್ಯದ ಗೇರು ತೋಪಿನ ಕಾಟೂರ್ ಕೂಪು ಎಂಬಲ್ಲಿ ಕಡವೆ ಬೇಟೆಯಾಡಿ ಮಾರಾಟ ಮಾಡುತ್ತಿರುವ ಜಾಲವನ್ನು ಭೇದಿಸಿರುವ ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರಿಕೆ ತೋಟಮ್‌ನ ನಿವಾಸಿ ಸಿದ್ದಿಕ್ ಸೆರೆ ಸಿಕ್ಕಿದ್ದು, ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತನಿAದ ಒಂದು ಪರವಾನಗಿ ರಹಿತ ನಾಡ ಬಂದೂಕು, ನಲವತ್ತು ಕೆಜಿ ಕಡವೆ ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಕಾಞÁಂಗಾಡ್ ವಲಯದ ಅಧಿಕಾರಿಗಳಾದ ರಾಜು ಎಂ.ಪಿ., ಪ್ರಕಾಶ್ ವಿ.ವಿ., ಪ್ರವೀಣ್ ಕುಮಾರ್ ಜಿ.ಎಸ್., ವಿನೀತ್ ವಿ, ವಿಮಲ್ ರಾಜ್ ಪಾಲ್ಗೊಂಡಿದ್ದರು

- ಸುಧೀರ್ ಹೊದ್ದೆಟ್ಟಿ