ನಾಪೋಕ್ಲು, ಸೆ. ೧೦: ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಬಕ್ಕದಲ್ಲಿ ಬಕ್ಕ ಕ್ರೀಡಾ ಸಂಘ, ಶ್ರೀಕೃಷ್ಣ, ಸಂಕ್ರಾAತಿ, ಸ್ವಾಗತ, ಸಾಗರ್ ಸ್ವಸಹಾಯ ಸಂಘ, ಅಂಬಿಕಾ ಸ್ತಿçà ಶಕ್ತಿ ಸಂಘ, ಗಜಾನನ ಭಕ್ತ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ೨೦ನೇ ವರ್ಷದ ಕೈಲ್ ಮುಹೂರ್ತ ಆಟೋಟಗಳ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಕ್ಕ ಕ್ರೀಡಾ ಸಂಘದ ಅಧ್ಯಕ್ಷ ಬೈತಡ್ಕ ಡೆಲಿವಿ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಸಮಾಜ ಸೇವೆಗಾಗಿ ಎಡಿಕೇರಿ ಪ್ರಸನ್ನ, ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಬೈಚನ ತಂಗಮ್ಮ ಸೋಮಣ, ಸರ್ಕಾರಿ ಸೇವೆಗೆ ಪುದಿಯನೆರವನ ಜಯಲಕ್ಷಿö್ಮ ಚಂದ್ರಶೇಖರ, ಕೃಷಿ ಕ್ಷೇತಕ್ಕೆ ಎಡಿಕೇರಿ ಪ್ರವೀಣ್ ಪಾಲೂರು , ಮಾಧ್ಯಮ ಕ್ಷೇತ್ರಕ್ಕೆ ಪತ್ರಕರ್ತ ದುಗ್ಗಳ ಸದಾನಂದ, ರಕ್ಷಣಾ ಕ್ಷೇತ್ರಕ್ಕೆ ಗಂಗನ ಲಕ್ಷಿö್ಮ್ಮ ಪ್ರಸಾದ್ ರೈ ಬೆಟ್ಟಗೇರಿ, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗೆ ದಿಶಾ ನಿಡ್ಯಮಲೆ ಅವರುಗಳÀನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಕಾಫಿ ಬೆಳೆಗಾರ ಕಬ್ಬಚ್ಚಿರ ಸವರಿನ್ ಉತ್ತಯ್ಯ , ಉದ್ಯಮಿ ಹರೀಶ್ ಗೌಡ ಕಂಬಳ , ನಿವೃತ್ತ ಶಿರಸ್ತೆದಾರರಾದ ಕಡ್ಲೇರ ಧನವತಿ ಚಂದ್ರಶೇಖರ್, ಮಡಿಕೇರಿ ನಗರಸಭೆಯ ಅಭಿಯಂತರ ಎನ್.ಪಿ ಹೇಮ ಕುಮಾರ್, ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಇನ್ನಿತರರು ಉಪಸ್ಥಿತರಿದ್ದರು.