ಮಡಿಕೇರಿ, ಸೆ. ೧೦: ಭಾರತೀಯ ಸೇನೆಯ ಏರ್ ಡಿಫೆನ್ಸ್ ರೆಜಿಮೆಂಟ್ಗೆ ಲೆಫ್ಟಿನೆಂಟ್ ಆಗಿ ಪಾಂಡAಡ ನಿಕಿತಾ ಅವರು ಕಮಿಷನ್ಡ್ ಆಗಿದ್ದಾರೆ.
ಚೆನ್ನೆöÊನ ಆಫೀಸರ್ಸ್ ಟ್ರೆöÊನಿಂಗ್ ಅಕಾಡೆಮಿ ಪಾಸ್ಔಟ್ ಆಗಿ ತಾ. ೫ ರಂದು ನಿಕಿತಾ ಅವರು ಸೇನೆಯ ಏರ್ ಡಿಫೆನ್ಸ್ ರೆಜಿಮೆಂಟ್ಗೆ ಆಯ್ಕೆ ಆಗಿದ್ದಾರೆ.
ತುಮಕೂರಿನ ಕೇಂದ್ರ ವಿದ್ಯಾಲಯದಲ್ಲಿ ತಮ್ಮ ಶಿಕ್ಷಣ ಪೂರೈಸಿದ ನಿಕಿತಾ ಅವರು ಬೆಂಗಳೂರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸೈಕಾಲಜಿ ವಿಷಯದಲ್ಲಿ ಬಿ.ಎ ಪದವಿ ಪೂರೈಸಿ ನಂತರ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪಡೆದು ಚೆನ್ನೆöÊನ ಆಫೀಸರ್ಸ್ ಟ್ರೆöÊನಿಂಗ್ ಅಕಾಡೆಮಿಗೆ ಸೇರ್ಪಡೆಗೊಂಡರು. ಭರತನಾಟ್ಯ ಹಾಗೂ ಹಿಪ್ಹಾಪ್ ನೃತ್ಯ ಶೈಲಿಯಲ್ಲಿಯೂ ಪರಿಣಿತರಾಗಿರುವ ನಿಕಿತಾ ಅವರು ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಹಾಗೂ ರಾಷ್ಟಿçÃಯಮಟ್ಟದ ಲಾನ್ ಟೆನ್ನಿಸ್ ಆಟಗಾರ್ತಿಯೂ ಆಗಿದ್ದಾರೆ.
ನಿಕಿತಾ ಅವರು ಲೆಫ್ಟಿನೆಂಟ್ ಕರ್ನಲ್ ದಿವಂಗತ ಪಾಂಡAಡ ಮುತ್ತಪ್ಪ (ಎಸ್.ಎಂ.) ಹಾಗೂ ಬೆಂಗಳೂರು ಕೊಡವ ಸಮಾಜದ ಮಾಜಿ ಉಪಾಧ್ಯಕ್ಷೆ ಕಮಲಾ (ತಾಮನೆ-ಮುಕ್ಕಾಟಿರ, ಕುಂಜೇರಿ) ದಂಪತಿಯ ಪುತ್ರಿ. ನಿಕಿತಾ ಅವರ ಸಹೋದರ ಪಿ.ಎಂ. ಗಣಪತಿ ಕೂಡ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ.