ಮಡಿಕೇರಿ, ಸೆ. ೧೦; ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ನಟಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಇಲ್ಲಿನ ನ್ಯಾಯಾಲಯ ಈರ್ವರು ಆರೋಪಿಗಳಿಗೆ ದಂಡ ಸಹಿತ ೨೦ ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜನಾಂಗಕ್ಕೆ ಸೇರಿದ ಅಪ್ರಾಪ್ತ ಬಾಲಕಿಯನ್ನು ಪರಿಚಯಿಸಿಕೊಂಡ ಕಂಬಿಬಾಣೆ ಭೂದಾನ ಪೈಸಾರಿ ಗ್ರಾಮ ನಿವಾಸಿ, ವಿವಾಹಿತ, ಒಂದು ಮಗುವಿನ ತಂದೆಯಾಗಿರುವ ಬಿ.ವಿ. ದಿಲೀಪ್‌ಕುಮಾರ್(೨೫) ಎಂಬಾತ ಆಕೆಯನ್ನು ಪ್ರೀತಿಸುವದಾಗಿ ನಂಬಿಸಿ ತನ್ನ ಮಾರುತಿ ಕಾರಿನಲ್ಲಿ ಕರೆದುಕೊಂಡು ಹೋಗಿ ಸುತ್ತಾಡಿಸಿದ್ದಾನೆ. ನಂತರ ಕೂಡಿಗೆಯ ಚಂದ್ರಪ್ಪ (೬೨)ಎಂಬವರಿಗೆ ಸೇರಿದ ಧನಲಕ್ಷಿö್ಮ ಲಾಡ್ಜ್ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ನಂತರದಲ್ಲಿ ಹತ್ತಕ್ಕೂ ಅಧಿಕ ಬಾರಿ ಹಗಲು ಹೊತ್ತಿನಲ್ಲಿ ಲಾಡ್ಜ್ಗೆ ಕರೆದುಕೊಂಡು ಹೋಗಿ ದೌರ್ಜನ್ಯವೆಸಗಿದ್ದಾನೆ. ಆ ಬಳಿಕ ದಿನಾಂಕ ೧೦-೨-೨೦೨೪ರಂದು ನಕಲಿ ತಾಳಿ ಚೈನ್ ಖರೀದಿಸಿ ಬಾಲಕಿಯನ್ನು ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ದೇವಾಲಯಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಹೊರಭಾಗದಲ್ಲಿ ಆಕೆಯ ಕುತ್ತಿಗೆಗೆ ತಾಳಿ ಚೈನ್ ಹಾಕಿ ಬಾಲ್ಯ ವಿವಾಹ ಮಾಡಿಕೊಂಡಿದ್ದಾನೆ.

ನAತರ ದಿನಾಂಕ ೯-೩-೨೦೨೪ರಂದು ರಾತ್ರಿ ೧೦.೩೦ ಗಂಟೆಗೆ ಬಾಲಕಿಯ ಮನೆಗೆ ತೆರಳಿ ಆಕೆಯನ್ನು ಅಲ್ಲಿಂದ ಅಪಹರಿಸಿಕೊಂಡು ಹೋಗಿ ಸಿದ್ದಾಪುರ ಬಳಿಯ ಅರೆಕಾಡು ಜಂಕ್ಷನ್‌ನಲ್ಲಿ ಕಾರು ನಿಲ್ಲಿಸಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ಮಾಡಿ ಆಕೆಯನ್ನು ಅಲ್ಲಿಯ ತೋಟವೊಂದರ ಲೈನ್‌ಮನೆಯಲ್ಲಿ ತನ್ನೊಂದಿಗೆ ಇರಿಸಿಕೊಂಡಿದ್ದಾನೆ. ಮಗಳು ಕಾಣೆಯಾಗಿರುವ ಬಗ್ಗೆ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಸುಂಟಿಕೊಪ್ಪ ಪೊಲೀಸರು ಬಾಲಕಿಯನ್ನು ಲೈನ್‌ಮನೆಯಿಂದ ವಶಕ್ಕೆ ಪಡೆದು ಪೋಷಕರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಅಂದಿನ ಡಿವೈಎಸ್‌ಪಿ ಆರ್‌ವಿ. ಗಂಗಾಧರಪ್ಪ ಅವರು; ಸಾಕ್ಷಾö್ಯಧಾರಗಳನ್ನು ಸಂಗ್ರಹಿಸಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆಯಡಿ ದಿಲೀಪ್ ವಿರುದ್ಧ ಹಾಗೂ ನೊಂದ ಬಾಲಕಿ ಅಪ್ರಾಪ್ತಳೆಂದು ಖಚಿತಪಡಿಸಿಕೊಳ್ಳದೆ ಲಾಡ್ಜ್ನಲ್ಲಿ ಕೊಠಡಿ ನೀಡಿ ಸಹಕಾರ ನೀಡಿದ ಆರೋಪದಡಿ ಚಂದ್ರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ದೊಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮಮ್ತಾಜ್ ಅವರು; ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ಈರ್ವರಿಗೆ ತಲಾ ೨೦ ವರ್ಷ ಕಠಿಣ ಸಜೆ ಹಾಗೂ ದಿಲೀಪ್‌ಕುಮಾರ್‌ಗೆ ರೂ.೧.೬೦ ಲಕ್ಷ, ಚಂದ್ರಪ್ಪನಿಗೆ ರೂ.೨೫ ಸಾವಿರ ದಂಡವಿಧಿಸಿ ತೀರ್ಪು ನೀಡಿದ್ದಾರೆ.

ಇದರೊಂದಿಗೆ ನೊಂದ ಬಾಲಕಿಗೆ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನಿಯಮಾನುಸಾರ ಪರಿಹಾರ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರ ಸರಕಾರಿ ಅಭಿಯೋಜಕ ಎನ್.ಪಿ. ದೇವೇಂದ್ರ ವಾದ ಮಂಡಿಸಿದರು.