ಗೋಣಿಕೊಪ್ಪಲು, ಸೆ. ೧೦: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ೪೭ನೇ ವರ್ಷದ ವಾರ್ಷಿಕ ಮಹಾಸಭೆ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಹಳೇ ಸಭಾಂಗಣದಲ್ಲಿ ಜರುಗಿತು. ಸಭೆಯ ಆರಂಭದಿAದಲೂ ಆರಂಭವಾದ ಕಾವೇರಿದ ಚರ್ಚೆ ಅಧ್ಯಕ್ಷರ ಭಾಷಣದವರೆಗೂ ಮುಂದುವರೆಯಿತು.

ಸಭೆಯಲ್ಲಿ ನೂತನ ಬೈಲಾ ರಚನೆ, ಮುಂದಿನ ಅಧ್ಯಕ್ಷರ ಆಯ್ಕೆ, ದಶಮಂಟಪಗಳಿಗೆ ಹೆಚ್ಚಿನ ಅನುದಾನ, ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ, ನೀಡಿದ ಕಾರ್ಯಕ್ರಮಗಳನ್ನೇ ಮುಂದುವರೆಸದಿರುವುದು, ಶೋಭಾಯಾತ್ರೆ ದಿನದಂದು ಮಂಟಪಗಳ ಲೈಟ್‌ಗಳನ್ನು ನಿಲುಗಡೆಗೊಳಿಸುವುದು, ಸಾರ್ವಜನಿಕರಿಗೆ ನಿರಾಶೆಗೊಳಿಸುವುದು, ಮಂಟಪಗಳಿಗೆ ಬಹುಮಾನದ ಮೊತ್ತವನ್ನು ಹೆಚ್ಚು ಮಾಡುವುದು, ಡಿಜೆ ಬಳಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸುವುದು, ಲೆಕ್ಕಪತ್ರ ಮಂಡನೆ, ಮುಖ್ಯ ಸಮಿತಿಯಲ್ಲಿ ದಶಮಂಟಪದ ಅಧ್ಯಕ್ಷರುಗಳ ಸೇರ್ಪಡೆ, ಅನುದಾನ ಉಳಿತಾಯ ಮಾಡಿ ಶಾಶ್ವತ ರಂಗಮAಟಪಕ್ಕೆ ಚಾಲನೆ ನೀಡುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪರಸ್ಪರ ಚರ್ಚೆ ನಡೆದವು.

ಸಭೆಯಲ್ಲಿ ದಶಮಂಟಪದ ಅಧ್ಯಕ್ಷರಾಗಿ ನೇಮಕಗೊಂಡಿರುವ ಸ್ನೇಹಿತರ ಬಳಗ ಕೊಪ್ಪ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕಾಡ್ಯಮಾಡ ಚೇತನ್ ಅನುದಾನವನ್ನು ಹೆಚ್ಚಿಗೆ ನೀಡುವಂತೆ ಪ್ರಸ್ತಾಪ ಸಲ್ಲಿಸಿದರು. ಯುವ ದಸರಾ ಸಮಿತಿಯ ಕೆ. ರಾಜೇಶ್, ಸರ್ವರ ದಸರಾ ಸಮಿತಿಯ ಮುರುಗ, ನವಚೇತನ ದಸರಾ ಸಮಿತಿಯ ಕೆ.ಪಿ. ಅಬ್ದುಲ್ ಜಲೀಲ್, ಅರುವತ್ತೊಕ್ಕಲು ಶಾರದಾಂಭ ದಸರಾ ಸಮಿತಿಯ ಹೆಚ್.ಎಸ್. ಸಜನ್, ಸಮಿತಿಯ ಹಿರಿಯರಾದ ಮಳವಂಡ ಅರವಿಂದ್ ಕುಟ್ಟಪ್ಪ, ಎಂ.ಪಿ. ಕೇಶವ್ ಕಾಮತ್, ಪಿ.ಕೆ. ಪ್ರವೀಣ್, ಪ್ರಭಾಕರ್ ನೆಲ್ಲಿತ್ತಾಯ ಮತ್ತಿತರರು ಮುಂದಿನ ದಸರಾ ಅಚರಣೆಯ ಬಗ್ಗೆ ಗಮನ ಸೆಳೆದರು.

ಪ್ರಮುಖವಾಗಿ ಶ್ರೀ ಕಾವೇರಿ ದಸರಾ ಸಮಿತಿಯ ಮುಂದಿನ ಸಾಲಿನ ಅಧ್ಯಕ್ಷರ ಆಯ್ಕೆ ಕುರಿತು ಹಲವು ಚರ್ಚೆಗಳು ನಡೆದವು. ಈ ವೇಳೆ ಮಾತನಾಡಿದ ಕೇಶವಕಾಮತ್, ದಸರಾಕ್ಕೆ ತನ್ನದೆ ಆದ ಇತಿಹಾಸವಿದ್ದು ಪ್ರಸ್ತುತ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ದಸರಾ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸಮಿತಿಯ ನೂತನ ಆಯ್ಕೆ ವಿಚಾರದಲ್ಲಿ ಅದರ ಜವಾಬ್ದಾರಿಯನ್ನು ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣನವರು ನಿರ್ಧಾರ ಕೈಗೊಳ್ಳಲಿದ್ದಾರೆ. ಎಲ್ಲರೂ ಸೇರಿ ನಾಡ ಹಬ್ಬವನ್ನು ಯಶಸ್ವಿಗೊಳಿಸೋಣ ಎಂದರು.

ಕಳೆದ ಸಾಲಿನ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಕಳೆದ ಬಾರಿ ದಸರಾ ಯಶಸ್ವಿಗೆ ಉಪಸಮಿತಿಗಳು, ದಶಮಂಟಪ ಪದಾಧಿಕಾರಿಗಳು ನೀಡಿದ ಸಹಕಾರದಿಂದ ಯಶಸ್ವಿಗೊಂಡಿದೆ. ಕಳೆದ ಬಾರಿ ಪ್ರತಿ ಮಂಟಪಕ್ಕೆ ರೂ. ೨ ಲಕ್ಷ ಅನುದಾನವನ್ನು ಕಾವೇರಿ ದಸರಾ ಸಮಿತಿಯಿಂದ ನೀಡಲಾಗಿತ್ತು. ಈ ಬಾರಿ ಆಗಸ್ಟ್ ತಿಂಗಳಿನಲ್ಲಿಯೇ ಶಾಸಕರ ಸೂಚನೆ ಮೇರೆ ತಾಲೂಕು ಆಡಳಿತಕ್ಕೆ ಪತ್ರ ಬರೆದ ನಂತರ ಶಾಸಕರು ವಿಶೇಷ ಆಸಕ್ತಿ ವಹಿಸಿ ಸರ್ಕಾರದಿಂದ ಒಂದು ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಕಳೆದ ೫ ವರ್ಷಗಳಿಂದ ದಸರಾ ಸಮಿತಿಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ ಅನುಭವದ ಆಧಾರದ ಮೇಲೆ ಪ್ರತಿ ವರ್ಷವೂ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ. ಕೆಲವರು ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿರಿಸಿಕೊಂಡು ತೊಂದರೆ ನೀಡುತ್ತಲೇ ಬಂದಿದ್ದಾರೆ. ಆದರೆ ದೇವರ ಕಾರ್ಯದಲ್ಲಿ ನಾನು ಎಂದಿಗೂ ಹಗೆ ಸಾಧಿಸುವವನಲ್ಲ. ಈ ಬಾರಿ ಪಂಚಾಯಿತಿ ಅವಧಿ ಮುಕ್ತಾಯಗೊಂಡಿರುವುದರಿAದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಕ್ಷೇತ್ರದ ಶಾಸಕರು ನಿರ್ಧಾರ ಕೈಗೊಳ್ಳಲಿದ್ದಾರೆ. ಅವರ ಮಾರ್ಗದರ್ಶನದಂತೆಯೇ ಮುಂದುವರೆಯಲಾಗುವುದು. ಕಳೆದ ಬಾರಿಯ ದಸರಾ ಖರ್ಚು ವೆಚ್ಚಗಳನ್ನು ಮಂಡಿಸಿದ್ದೇನೆ ಎಂದು ಸಭೆಯ ಮುಂದೆ ತಮ್ಮ ಅಭಿಪ್ರಾಯ ತಿಳಿಸಿದರು.

ಕಳೆದ ಸಾಲಿನ ದಶಮಂಟಪದ ಅಧ್ಯಕ್ಷ ಶಾಜಿ ಅಚ್ಚುತ್ತನ್ ಮಾತನಾಡಿ, ಕೆಲವು ಮಂಟಪಗಳಿಗೆ ಡಿಜೆ ಅಳವಡಿಕೆಯ ಬಗ್ಗೆ ಪ್ರಕರಣ ದಾಖಲಾಗಿದೆ. ಡಿಜೆ ಅಳವಡಿಸಿದ ಟ್ರಾö್ಯಕ್ಟರ್ ಚಾಲಕ ಹಾಗೂ ಡಿಜೆಯವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಕೆಲವು ನ್ಯೂನತೆಗಳನ್ನು ಹೊರತುಪಡಿಸಿ ದಸರಾ ಯಶಸ್ವಿಗೊಂಡಿದೆ. ಉತ್ತಮ ರೀತಿಯ ತೀರ್ಪುಗಾರಿಕೆಯಿಂದ ದಶಮಂಟಪಗಳು ಯಾವುದೇ ವಿರೋಧ ವ್ಯಕ್ತಪಡಿಸದೆ ಬಹುಮಾನ ಸ್ವೀಕರಿಸಿರುವುದು ಶ್ಲಾಘನೀಯ. ಈ ಬಾರಿಯೂ ದಸರಾ ಯಶಸ್ವಿಗೆ ಎಲ್ಲರೂ ಕೈಜೋಡಿಸೋಣ ಎಂದರು.

ಮುಖ್ಯ ರಸ್ತೆಯಲ್ಲಿ ಶೋಭಾಯಾತ್ರೆ ಆಗಮಿಸುತ್ತಿದ್ದ ವೇಳೆ ಡಿಜೆ ಸೌಂಡ್ ನಿಲ್ಲಿಸುವುದರೊಂದಿಗೆ ಕೆಲವು ಮಂಟಪದ ಲೈಟಿಂಗ್ಸ್ಗಳು ಆಫ್ ಮಾಡಿರುವುದು ಸರಿಯಲ್ಲ. ಸಾರ್ವಜನಿಕವಾಗಿ ಮಂಟಪಗಳು ಹಣವನ್ನು ವಂತಿಕೆ ರೂಪದಲ್ಲಿ ಪಡೆದು ಕೊನೆಯ ದಿನ ಶೋಭಾಯಾತ್ರೆಯಲ್ಲಿ ಈ ರೀತಿಯ ತೊಂದರೆ ಆಗುತ್ತಿರುವುದು ಸರಿಯಲ್ಲ. ಸಾವಿರಾರು ಜನರು ದೂರದ ಊರುಗಳಿಂದ ನಗರಕ್ಕೆ ಶೋಭಾಯಾತ್ರೆ ವೀಕ್ಷಣೆಗೆ ಆಗಮಿಸುತ್ತಾರೆ.

ಕೆಲವರಿಂದ ಇಂತಹ ಸಮಸ್ಯೆಗಳು ಆದಾಗ ಜನರು ನಿರಾಶೆಗೊಳ್ಳುತ್ತಾರೆ. ಮುಂದಿನ ದಸರಾದಲ್ಲಿ ಅಂತಹ ವಾತಾವರಣ ನಿರ್ಮಾಣವಾಗಬಾರದು ಎಂದು ಸಮಿತಿಯ ಹಿರಿಯ ಸದಸ್ಯ ಪಿ.ಕೆ. ಪ್ರವೀಣ್ ಸಭೆಯ ಗಮನ ಸೆಳೆದರು. ಇವರ ಮಾತಿಗೆ ಸದಸ್ಯರುಗಳಾದ ಸಪ್ತೆಶ್ ಸೇರಿದಂತೆ ಇತರರು ಧ್ವನಿಗೂಡಿಸಿದರು. ಪ್ರವೀಣ್ ಅವರ ಮಾತಿಗೆ ಮುರುಗ, ರಾಜೇಶ್ ಮತ್ತಿತ್ತರರು ಆಕ್ಷೇಪ ವ್ಯಕ್ತಪಡಿಸಿದರು.

ಡಿಜೆ ವಿಷಯದಲ್ಲಿ ಸುಪ್ರಿಂಕೋರ್ಟ್ನ ಆದೇಶವಿರುವುದರಿಂದ ಈ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆಸಕ್ತಿ ಉಳ್ಳವರು ಸುಪ್ರಿಂಕೋರ್ಟ್ನ ಮೆಟ್ಟಿಲೇರಿ ಕೋಟಿ ಖರ್ಚು ಮಾಡಿ ತಡೆಯಾಜ್ಞೆ ತನ್ನಿ ಎಂದು ಪತ್ರಕರ್ತ ಕುಪ್ಪಂಡ ದತ್ತ ಸಭೆಯ ಗಮನಕ್ಕೆ ತರುತ್ತಿದ್ದಂತೆಯೇ ಸಭೆಯು ಮೌನವಾಯಿತು. ಅಂತಿಮವಾಗಿ ಎಲ್ಲರೂ ಒಗ್ಗಟ್ಟಾಗಿ ನಾಡ ಹಬ್ಬವಾದ ಗೋಣಿಕೊಪ್ಪ ದಸರಾವನ್ನು ಯಶಸ್ವಿಗೊಳಿಸೋಣ ಎನ್ನುವ ಮೂಲಕ ವಿಷಯಕ್ಕೆ ತೆರೆ ಎಳೆದರು. ವಿವಿಧ ಸಮಿತಿಯ ಪದಾಧಿಕಾರಿಗಳಾದ ಅಬ್ದುಲ್ ಜಲೀಲ್, ನವೀನ್, ಸೇರಿದಂತೆ ಪ್ರಮುಖರು ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.

ಸಭೆಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿ, ೧ನೇ ವಿಭಾಗದ ದಸರಾ ನಾಡಹಬ್ಬ ಸಮಿತಿ, ೨ನೇ ವಿಭಾಗದ ಸರ್ವರ ದಸರಾ ಸಮಿತಿ, ೩ನೇ ವಿಭಾಗದ ಯುವ ದಸರಾ ಸಮಿತಿ, ಸ್ನೇಹಿತರ ಬಳಗ ಕೊಪ್ಪ, ಮಾರುಕಟ್ಟೆಯ ನವಚೇತನ ದಸರಾ ಸಮಿತಿ, ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ, ಅರುವತ್ತೊಕ್ಕಲು ಮೈಸೂರಮ್ಮ ನÀಗರದ ಶಾರಾದಾಂಭ ದಸರಾ ಸಮಿತಿ, ಕೈಕೇರಿಯ ಭಗವತಿ ದಸರಾ ಸಮಿತಿ, ಅರುವತ್ತೊಕ್ಕಲು ಕಾಫಿ ಬೋರ್ಡಿನ ಕಾಡ್ಲಯ್ಯಪ್ಪ ದಸರಾ ಸಮಿತಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಕಾವೇರಿ ದಸರಾ ಸಮಿತಿಯ ಕಳೆದ ಸಾಲಿನ ಕಾರ್ಯದರ್ಶಿಗಳಾದ ಎನ್.ಎಸ್. ಕಂದಾ ದೇವಯ್ಯ. ಸ್ವಾಗತಿಸಿ, ವಂದಿಸಿದರು.

- ಹೆಚ್.ಕೆ.ಜಗದೀಶ್