ಮಡಿಕೇರಿ, ಸೆ. ೧೦: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ತಲೆ ಮತ್ತು ಬೆನ್ನುಮೂಳೆಯ ಗಾಯಗಳು, ಪಾರ್ಶ್ವವಾಯು ಹಾಗೂ ಅಪಸ್ಮಾರದ ತುರ್ತು ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಸರ್ಜಾಪುರ ರಸ್ತೆಯ ಸ್ಪರ್ಶ್ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಡಾ. ನಿಹಾಲ್ ಅಹಮದ್ ಅವರು ಉಪನ್ಯಾಸ ನೀಡಿದರು. ತಲೆ ಮತ್ತು ಬೆನ್ನುಮೂಳೆಯ ಗಾಯಗಳ ಸಂದರ್ಭದಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು, ನರವೈಜ್ಞಾನಿಕ ಮೌಲ್ಯಮಾಪನ, ಅಗತ್ಯವಿರುವ ಸಂದರ್ಭಗಳಲ್ಲಿ ಅಖಿ/ಒಖI ಪರೀಕ್ಷೆ, ಹೆಚ್ಚಿದ ಒಳಕಪಾಲದ ಒತ್ತಡದ ನಿರ್ವಹಣೆ, ಪಾರ್ಶ್ವವಾಯುವಿನಲ್ಲಿ “ಖಿime is ಃಡಿಚಿiಟಿ” ಎಂಬ ಮಹತ್ವ, ತ್ವರಿತ ಥ್ರಾಂಬೋಲಿಸಿಸ್ ಹಾಗೂ ಮೆಕ್ಯಾನಿಕಲ್ ಥ್ರಾಂಬೆಕ್ಟಮಿ ಮತ್ತು ಅಪಸ್ಮಾರದ ತುರ್ತು ನಿರ್ವಹಣೆ ಕುರಿತು ಪ್ರಾಯೋಗಿಕವಾಗಿ ವಿವರಿಸಲಾಯಿತು.
ಕಾರ್ಯಕ್ರಮವು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರಿಗೆ ತುರ್ತು ನರರೋಗ ಪ್ರಕರಣಗಳ ನಿರ್ವಹಣೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಂತಹ ಮಹತ್ವದ ಶೈಕ್ಷಣಿಕ ಅನುಭವವಾಗಿ ಮೂಡಿಬಂದಿತು.
ಸAಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಲೋಕೇಶ್ ಎ.ಜೆ., ಆರ್‌ಎಂಒ ಡಾ.ಅಭಿನಂದನ್ ಬಿ.ವಿ. ಹಾಗೂ ಸಾಮಾನ್ಯ ಶಸ್ತçಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರವೀಣ್ ಕುಮಾರ್ ಕೆ. ಪಾಲ್ಗೊಂಡಿದ್ದರು