ಮಡಿಕೇರಿ, ಸೆ. ೯: ನೊಖ್ಯ-ಎಡತೋರೆಯಲ್ಲಿ ಶ್ರೀ ಕೃಷ್ಣ ಬಲರಾಮ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಗೋಪೂಜೆ ನಡೆಯಿತು.

ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ಭಕ್ತಾದಿಗಳು ಗೋಪೂಜೆಯನ್ನು ನೆರವೇರಿಸಿ ಗೋವಿಗೆ ನಮಸ್ಕರಿಸುವುದರೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ ನೀಡಿದರು. ಬಳಿಕ ಶ್ರೀ ಕೃಷ್ಣನಿಗೆ ಅರ್ಘ್ಯ ಬಿಡುವ ಪೂಜಾ ವಿಧಿವಿಧಾನಗಳನ್ನು ಶ್ರದ್ಧಾ-ಭಕ್ತಿಯಿಂದ ನಡೆಸಲಯಿತು.

ಓಲೆ ಕಡುಬು, ಅಂಬಟೆ ಸಾರು ಹಾಗೂ ಅವಲಕ್ಕಿ ಪ್ರಸಾದಗಳನ್ನು ಶ್ರೀಕೃಷ್ಣನಿಗೆ ಅರ್ಪಿಸಿ, ನೆರೆದಿದ್ದ ಭಕ್ತಾದಿಗಳಿಗೆ ವಿತರಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಊರಿನ ಸಾರ್ವಜನಿಕರು ಹಾಗೂ ಭಕ್ತಾದಿಗಳು ಪಾಲ್ಗೊಂಡು ಕೃಷ್ಣನ ಕೃಪೆಗೆ ಪಾತ್ರರಾದರು.