ಮಡಿಕೇರಿ, ಸೆ. ೯: ಕೊಡಗು ಜಿಲ್ಲೆಯೂ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇಂದು ಸ್ಥಗಿತಗೊಂಡಿದ್ದು, ಗಂಭೀರ ಸಮಸ್ಯೆ ಎದುರಾಯಿತು.
ನಿನ್ನೆ ದಿನ ರಾಯಚೂರು ಮತ್ತು ಬಳ್ಳಾರಿಯ ಥರ್ಮಲ್ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಜನರೇಟರ್ಗಳು ಹಾಳಾಗಿದ್ದು, ವಿದ್ಯುತ್ ಉತ್ಪಾದನೆಗೆ ತೀವ್ರ ಧಕ್ಕೆ ಉಂಟಾಗಿದೆ.
ಇAದು ಕೊಡಗು ಜಿಲ್ಲೆಯ ಅನೇಕ ಕಡೆ ದುರಸ್ತಿ ಕಾರ್ಯಕ್ಕಾಗಿ ಬೆಳಗ್ಗಿನಿಂದ ಸಂಜೆಯವರೆಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಸಂಜೆ ವೇಳೆ ವಿದ್ಯುತ್ ಚಾರ್ಜ್ ಮಾಡಿದಾಗ ಮೈಸೂರಿನಿಂದಲೇ ವಿದ್ಯುತ್ ಸರಬರಾಜು ಸಂಪೂರ್ಣ ನಿಲುಗಡೆಗೊಂಡಿದೆ. ಜಿಲ್ಲೆಯ ಸೆಸ್ಕ್ನ ಅಧಿಕಾರಿಗಳ ಪ್ರಕಾರ ಇನ್ನೆರಡು ದಿನಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿರುವುದಾಗಿ ತಿಳಿದುಬಂದಿದೆ. ಇದರಿಂದಾಗಿ ಜಿಲ್ಲೆಯ ಜನತೆ ತೀವ್ರ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಪೊನ್ನಣ್ಣ ಮಾಹಿತಿ
ಈ ಕುರಿತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ “ಶಕ್ತಿ” ತಂದಾಗ ಅವರು ಸ್ಪಂದಿಸಿ ಉನ್ನತ ಅಧಿಕಾರಿಗಳ ಗಮನಕ್ಕೆ ತಂದರು. ಶೀಘ್ರದಲ್ಲಿ ೨೨೦ ಕೆವಿ ಲೈನ್ ಚಾರ್ಜ್ ಮಾಡಲಿದ್ದು ಸಂಪರ್ಕ ಕಲ್ಪಿಸುವುದಾಗಿ ಮಾಹಿತಿ ದೊರಕಿರುವುದಾಗಿ ರಾತ್ರಿ ೯.೩೦ ರ ವೇಳೆ ತಿಳಿಸಿದರು.
ವಿದ್ಯುತ್ ಅಡಚಣೆ ಹಿನ್ನೆಲೆಯಲ್ಲಿ ಸಂಬAಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚಿಸಿರುವುದಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.
ಶಾಸಕರ ವಿಶೇಷ ಕರ್ತವ್ಯಾಧಿಕಾರಿ ವಿವರಣೆ
ಈಗ ಆಗಿರುವ ವಿದ್ಯುತ್ ಸಂಪರ್ಕ ಕಡಿತಕ್ಕೂ ವೀರಾಜಪೇಟೆ ಚೆಸ್ಕಾಂ ವಿದ್ಯುತ್ ಬಲವರ್ಧನೆ ಮತ್ತು ಸುಧಾರಣೆಗೂ ಸಂಬAಧವಿಲ್ಲ.
ಕೆಲವು ಜಿಲ್ಲೆಗಳಿಗೆ ಎರಮಸ್ (ರಾಯಚೂರು) ಮತ್ತು ಬಳ್ಳಾರಿ ಕಲ್ಲಿದ್ದಲು ವಿದ್ಯುತ್ ಸ್ಥಾವರ/ ಕೇಂದ್ರ/ ಜನರೇಟಿಂಗ್ ಸ್ಟೇಷನ್ ನಲ್ಲಿ ಇದ್ದಕ್ಕಿದ್ದಂತೆ ಜನರೇಟರುಗಳು ಸ್ಥಗಿತಗೊಂಡು ಒಂದೇ ಸಲ ಸುಮಾರು ೩೦೦೦ ಒW (೩೦೦೦೦೦೦ ಏWs) ಥರ್ಮಲ್ ಪವರ್ ಸ್ಟೇಷನ್ ನಿಂದ ಉತ್ಪಾದನೆ ಆಗುತ್ತಿದ್ದ ವಿದ್ಯುತ್ ಕಡಿತಗೊಂಡು ಸುಮಾರು ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಬೇರೆ ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಾಸ ಇರುವುದಿಲ್ಲ ಏಕೆಂದರೆ ಕೆಲವಾರು ಜಿಲ್ಲೆಗಳಿಗೆ ರಾಯಚೂರು ಥರ್ಮಲ್ ವಿದ್ಯುತ್ ಸ್ಥಾವರದಿಂದ ವಾರಾಹಿ ವಿದ್ಯುತ್ ಕೇಂದ್ರದಿAದ ಶರಾವತಿ ವಿದ್ಯುತ್ ಉತ್ಪಾದನೆ ಕೇಂದ್ರದಿAದ ನಾಗಝರಿ ವಿದ್ಯುತ್ ಉತ್ಪಾದನೆ ಕೇಂದ್ರದಿAದ ಸುಪಾ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಅಡಚಣೆ ಇರುವುದಿಲ್ಲ. ಮೈಸೂರು ಚಾಮರಾಜನಗರ ಮಂಡ್ಯ ಹಾಸನ ಮುಂತಾದ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಎರಡು ಕಲ್ಲಿದ್ದಲು ವಿದ್ಯುತ್ ಕೇಂದ್ರಗಳ ಜನರೇಟರ್ಗಳನ್ನು ಸ್ಟಾರ್ಟ್ ಮಾಡಲಾಗುತ್ತಿದೆ. ಉಷ್ಣ ಟೆಂಪರೇಚರ್ ಹವೆ ಬಂದು ಜನರೇಟರ್ನಿಂದ ವಿದ್ಯುತ್ ಉತ್ಪಾದನೆ ಆಗಬೇಕಾಗಿದೆ ಈ ಒಂದು ಕೆಲಸ ಸುಮಾರು ೨ ರಿಂದ ೩ ಗಂಟೆಗಳ ಕಾಲ ಸಮಯ ಹಿಡಿಯುತ್ತದೆ.
ರಾಯಚೂರು ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ ಇಂಜಿನಿಯರ್ಗಳು ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವನ್ನು ಶತಪ್ರಯತ್ನ ಮಾಡುತ್ತಿದ್ದಾರೆ.
ವಿದ್ಯುತ್ ಗ್ರಾಹಕರು ಗಮನಿಸಬೇಕಾದ ವಿಷಯ ಏನೆಂದರೆ ಇದು ಕೆಇಬಿ ಅಥವಾ ಚೆಸ್ಕಾಂಗಳ ಅಥವಾ ಕೆಪಿಟಿಸಿಎಲ್ (ಕರ್ನಾಟಕ ಪವರ್ ಟ್ರಾನ್ಸ್ ಮಿಷನ್) ನ್ಯಾಯ ವ್ಯಾಪ್ತಿಗೆ ಅಥವಾ ಅವರ ಅಧೀನಕ್ಕೆ ಬರುವುದಿಲ್ಲ. ವಿದ್ಯುತ್ ಜನರೇಷನ್ ಕೆಪಿಸಿಎಲ್ (ಕರ್ನಾಟಕ ಪವರ್ ಕಾರ್ಪೊರೇಷನ್) ಇವರ ವ್ಯಾಪ್ತಿಗೆ ಬರುತ್ತದೆ.
ಇದನ್ನು ಉಸ್ತುವಾರಿ ಮಾಡುವ ವಿದ್ಯುತ್ ಸಂಸ್ಥೆ.. ಲೋಡ್ ಡಿಸ್ಪೇಚ್ಂಗ್ ಸೆಂಟರ್ ಬೆಂಗಳೂರು ಇವರು ಥರ್ಮಲ್ ಮತ್ತು ಹೈಡ್ರೋ ವಿದ್ಯುತ್ ಉತ್ಪಾದನೆ ಕೇಂದ್ರಗಳ ಹಿಡಿತದಲ್ಲಿ ಇರುತ್ತದೆ. ಮೈಸೂರು ಮುಖ್ಯ ಇಂಜಿನಿಯರ್ ಅವರು ಲೋಡ್ ಡಿಸ್ಪೇಚ್ಂಗ್ ಸೆಂಟರ್ ಬೆಂಗಳೂರು (ಐಆಅ ಔಖ Sಐಆಅ) ಮುಖ್ಯ ಇಂಜಿನಿಯರ್ ಇವರ ಜೊತೆ ನೇರ ಸಂಪರ್ಕದಲ್ಲಿದ್ದಾರೆ.
ಕೊಡಗಿನ ವಿದ್ಯುತ್ ಗ್ರಾಹಕರು ಬೇರೆ ಅಪಾರ್ಥ ಮಾಡಿಕೊಳ್ಳಬಾರದು ಇದು ರಾಜ್ಯ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಆದ ಅಡಚಣೆಯಿಂದ ಉಂಟಾ ಪರಿಸ್ಥಿತಿ. ತಾನು ಪೂರ್ಣ ಮಾಹಿತಿ ಪಡೆಯುತ್ತಿದ್ದೇನೆ ಎಂದು ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ. ಮುತ್ತಣ್ಣ ತಿಳಿಸಿದ್ದಾರೆ.
ಮಡಿಕೇರಿಯ ಕೆಲವು ಭಾಗಗಳಲ್ಲಿ ರಾತ್ರಿ ೧೦.೩೦ರ ವೇಳೆಗೆ ವಿದ್ಯುತ್ ಸಂಪರ್ಕ ಸಮರ್ಪಕಗೊಂಡಿತು. ಕುಶಾಲನಗರ ಹಾಗೂ ಸೋಮವಾರಪೇಟೆ ಭಾಗದಲ್ಲಿ ರಾತ್ರಿ ೧೦.೩೦ರ ಸುಮಾರಿಗೆ ವಿದ್ಯುತ್ ಸಂಪರ್ಕ ಸರಿಯಾಯಿತು. ವೀರಾಜಪೇಟೆ ಭಾಗದಲ್ಲಿ ೧೦.೪೫ರ ವೇಳೆಗೂ ವಿದ್ಯುತ್ ಸಂಪರ್ಕ ಸರಿ ಆಗಿರಲಿಲ್ಲ.