ಮಡಿಕೇರಿ, ಸೆ. ೯: ಕೆಲವೊಂದು ನಿರ್ಧಿಷ್ಟ ದುರುದ್ದೇಶಗಳನ್ನಿಟ್ಟುಕೊಂಡು ಕೊಡವ ಸಮುದಾಯದ ಸಂವಿಧಾನಬದ್ಧವಾದ ಆಶೋತ್ತರಗಳು ಹಾಗೂ ಹಕ್ಕು-ಬೇಡಿಕೆಗಳನ್ನು ಅರೆಭಾಷೆ ಗೌಡ ಜನಾಂಗದ ಒಕ್ಕೂಟ ವ್ಯವಸ್ಥೆಯು ಆಗಿಂದ್ದಾಗೆ ವಿರೋಧಿಸುತ್ತಾ, ನ್ಯಾಯಯುತವಾದ ಬೇಡಿಕೆಗಳನ್ನು ವಿರೋಧಿಸುವುದು ಸರಿಯಲ್ಲ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದ್ದಾರೆ.

ಕೊಡವರ ಬೇಡಿಕೆಗಳು ಈಡೇರಿದರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಆಗಬಹುದೆಂದು ಕಪೋಲ ಕಲ್ಪಿತರಾದ ಕೆಲವು ವ್ಯಕ್ತಿಗಳು ಇದಕ್ಕಾಗಿ ಪಿಪಿಟಿ ತಯಾರಿ ಮಾಡಿಕೊಂಡರೆAದರೆ ಇದೊಂದು ನಕಾರಾತ್ಮಕವಾದ ವಿಚಾರವಾಗಿದೆ.

“ಯಾವುದೇ ಜನಾಂಗದ ಮೇಲೆ ನಮ್ಮ ಸಮುದಾಯಕ್ಕೆ ದ್ವೇಷ ಅಥವಾ ಅಸೂಯೆ ಇಲ್ಲ. ನಮ್ಮ ಜನಾಂಗದ ಹಕ್ಕು, ಅಸ್ತಿತ್ವ ಮತ್ತು ಭವಿಷ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಹೋರಾಟ ನಡೆಸಲಾಗುತ್ತಿದೆ ಎಂಬ ಹೇಳಿಕೆಯೊಳಗೆ ದ್ವೇಷ ಅಡಗಿದೆ. ಕೊಡವ ಭಾಷೆಗೆ ಭಾರತ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸ್ಥಾನಮಾನಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ನಿರಂತರವಾಗಿ ಪ್ರಯತ್ನಿಸುತ್ತಿದೆ. ಹಲವು ಸಂಘಟನೆಗಳು, ಸಮಾಜವು ಇದರ ಹಿಂದೆ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸರ್ಕಾರವು ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ತುಳು, ಬಂಜಾರ ಭಾಷೆಗಳೂ ಈ ಸರದಿಯಲ್ಲಿದೆ ಎಂದು ಅವರು ವಿವರಿಸಿದ್ದಾರೆ.

ರಾಜ್ಯ ಸರ್ಕಾರವು ಕೊಡವ ಭಾಷೆ, ಸಂಸ್ಕೃತಿಯನ್ನು ಕಾಪಾಡಿಕೊಂಡು, ಬೆಳೆಸುವ ಜವಾಬ್ದಾರಿಯನ್ನು ತÀನಗೆ ಕೊಟ್ಟಿದೆ. ಕೊಡವ ಸಂಸ್ಕೃತಿ, ಭಾಷೆಯ ವಿರುದ್ಧದ ಅಬದ್ಧ ಹೇಳಿಕೆಗಳನ್ನು ಸÀಹಿಸಿಕೊಳ್ಳÄವಂತಿಲ್ಲ ಎಂದು ಮಹೇಶ್ ಹೇಳಿದ್ದಾರೆ.