ಗೋಣಿಕೊಪ್ಪಲು: ಗೌಡ ಸಮಾಜ ಆಯೋಜಿಸಿದ್ದ ಸಭೆಯು ಒಂದು ಕೊಡವ ಜನಾಂಗ ವಿರೋಧಿ ಷಡ್ಯಂತ್ರವಾಗಿದ್ದು ಈ ಷಡ್ಯಂತರದಲ್ಲಿ ಭಾಗವಹಿಸಿರುವ ಹಾಲಿ ಹಾಗೂ ಮಾಜಿ ಶಾಸಕರುಗಳು ಈ ಕುರಿತು ಜನತೆಗೆ ಸ್ಪಷ್ಟನೆ ನೀಡಬೇಕೆಂದು ಯುನೈಟೆಡ್ ಕೊಡವ ಆರ್ಗನೈಸೇಷನ್- ಯುಕೊ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಆಗ್ರಹಿಸಿದ್ದಾರೆ.
ಕೊಡವ ಜನಾಂಗವು ಪ್ರಪಂಚದಾದ್ಯAತ ಸೂಕ್ಷö್ಮ ಅಲ್ಪಸಂಖ್ಯಾತರಾಗಿದ್ದು, ಕೊಡವ ಭಾಷೆಯು ಯುನೆಸ್ಕೋದ ಅಳಿವಿನಂಚಿನಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ. ಆದರೆ ಗೌಡ ಜನಾಂಗವು ಜನಸಂಖ್ಯೆಯಲ್ಲಿ ಕರ್ನಾಟಕದ ಶೇ. ೨೫ ರಷ್ಟಿದ್ದು, ರಾಜ್ಯ ವಿಧಾನಸಭೆಯಲ್ಲಿ, ಗರಿಷ್ಠ ಶಾಸಕರು ಹಾಗೂ ಸಚಿವರನ್ನು ಹೊಂದಿರುವ ಈ ದೇಶದಲ್ಲಿ ಜನಸಂಖ್ಯೆ ಹಾಗೂ ರಾಜಕೀಯವಾಗಿ ಬಲಿಷ್ಠ ಜನಾಂಗವಾಗಿದೆ.
ಇಂತಹ ಬಲಾಡ್ಯ ಜನಾಂಗ ಅತ್ಯಂತ ಸೂಕ್ಷö್ಮ ಅಲ್ಪಸಂಖ್ಯಾತ ಜನಾಂಗವು ತಮ್ಮ ಹಕ್ಕುಗಳನ್ನು ಪಡೆಯಲು ಅಡ್ಡಗಾಲು ಹಾಕುತ್ತಿರುವುದು ಜನಾಂಗೀಯ ಶೋಷಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೊಡವರಿಗೆ ತಮ್ಮ ಹಕ್ಕು ಭಾದ್ಯತೆಗಳನ್ನು ಸಂವಿಧಾನಾತ್ಮಕವಾಗಿ ಕಾಪಾಡಿಕೊಳುವ ಎಲ್ಲಾ ಸ್ವಾತಂತ್ರ‍್ಯವಿದೆ, ಇದನ್ನು ವಿರೋಧಿಸುವುದು ಜನಾಂಗೀಯ ಶೋಷಣೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಗೌಡ ಸಮಾಜಗಳ ಒಕ್ಕೂಟವು ಪ್ರತಿ ಬಾರಿಯೂ ತಾವಾಗಿಯೇ ಕೊಡವ ಜನಾಂಗದ ವಿರುದ್ಧ ಷಡ್ಯಂತರಗಳನ್ನು ರೂಪಿಸುವುದರ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕದಡುವ ಕೆಲಸ ಮಾಡುತ್ತಿದ್ದು, ಈ ವಿಷಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ಕೊಡವ ಜನಾಂಗಕ್ಕೆ ಸೂಕ್ತ ರಕ್ಷಣೆ ನೀಡಬೇಕಿದೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಕೊಡವರ ಮೇಲಿನ ದೌರ್ಜನ್ಯಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೇರ ಹೊಣೆ ಹೊತ್ತುಕೊಳ್ಳಬೇಕಿದೆ ಎಂದು ಮಂಜು ಚಿಣ್ಣಪ್ಪ ಆಗ್ರಹಿಸಿದ್ದಾರೆ.