ವೀರಾಜಪೇಟೆ, ಸೆ. ೮: ಮೀನುಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ೧೮ನೇ ವರ್ಷದ ಓಣಂ ಆಚರಣೆಯು ಮೀನು ಪೇಟೆಯ ಶ್ರೀ ಮುತ್ತಪ್ಪ ಕಲಾ ಮಂಟಪದಲ್ಲಿ ವಿಜೃಂಭಣೆ ಹಾಗೂ ಸಾಂಸ್ಕöÈತಿಕ ವೈವಿಧ್ಯದೊಂದಿಗೆ ಸಂಪನ್ನಗೊAಡಿತು.
ಮುತ್ತಪ್ಪ ಸನ್ನಿಧಿ ಯಲ್ಲಿ ದೀಪ ಬೆಳಗಿಸಿ, ಮಹಾಬಲಿ ನೃತ್ಯರೂಪಕದೊಂದಿಗೆ ಕಾರ್ಯಕ್ರಮಕ್ಕೆ ಭಕ್ತಿಭಾವದ ಚಾಲನೆ ನೀಡಲಾಯಿತು. ತದನಂತರ ಮುತ್ತಪ್ಪ ದೇವಾಲಯದಿಂದ ಹೊರಟು ಪಟ್ಟಣದ ಮುಖ್ಯ ಬೀದಿಗಳಲ್ಲಿ ವಾದ್ಯಘೋಷಗಳೊಂದಿಗೆ ಮಾವೇಲಿ ಮೆರವಣಿಗೆ ನಡೆಯಿತು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಸಾಂಪ್ರದಾಯಿಕ ಓಣಂ ಸದ್ಯ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ಓಣಂ ಆಚರಣೆಯು ವಿಶ್ವಾದ್ಯಂತ ಪ್ರಖ್ಯಾತಿ ಪಡೆದಿದೆ. ಕೇರಳದ ವಿಭಿನ್ನ ಸಂಸ್ಕöÈತಿಯ ವಿಶಿಷ್ಟ ಆಚರಣೆ ನಮ್ಮ ನಾಡಿನಲ್ಲೂ ಪಸರಿಸುತ್ತಿರುವುದು ಈ ದೇಶದ ಸಮೃದ್ಧ ಸಾಂಸ್ಕöÈತಿಕ ಇತಿಹಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಲಯಾಳಿ ಸಮಾಜದ ಅಧ್ಯಕ್ಷರು ವಿವಿಧ ಬೇಡಿಕೆಗಳನ್ನು ಇಟ್ಟಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸಲು ಬದ್ಧವಾಗಿರುವುದಾಗಿ ಆಶ್ವಾಸನೆಯಿತ್ತರು.
ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್, ಸಮಾಜದ ನಿರಂತರ ಸೇವಾ ಕಾರ್ಯಗಳು, ಕಳೆದ ವರ್ಷದ ಸಾಧನೆಗಳು ಹಾಗೂ ಸಮಾಜದ ಪ್ರಮುಖ ಬೇಡಿಕೆಗಳ ಕುರಿತು ಮಾತನಾಡಿ, ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸುವಾಗ, ಮಳೆಗಾಲದಲ್ಲಿ ಮೃತರ ಕುಟುಂಬದವರು ಪಡುವ ಯಾತನೆ ಹಾಗೂ ನಮ್ಮ ಹಿಂದೂ ಆಚಾರ-ವಿಚಾರದಂತೆ ಹರಿಶ್ಚಂದ್ರ ಕಲ್ಲಿನ ಬಳಿ ಪೂಜೆ ಸಲ್ಲಿಸುವಾಗ ಶವದ ಮೇಲೆ ಮಳೆಹನಿ ಬೀಳುವ ದುಃಖಕರ ವಾತಾವರಣವನ್ನು ತಪ್ಪಿಸಲು ದಹನ ಸ್ಥಳಕ್ಕೆ ಮೇಲ್ಛಾವಣಿ (ಶೆಡ್) ನಿರ್ಮಿಸುವಂತೆ ಶಾಸಕರು ಹಾಗೂ ಎಂಎಲ್‌ಸಿ ಬಳಿ ಮನವಿ ಮಾಡಲಾಗಿತ್ತು.
ಅಲ್ಲಿನ ಹಳೆಯ ಪೈಪ್‌ಗಳು ತುಕ್ಕು ಹಿಡಿದು ಬೀಳುವ ಸ್ಥಿತಿಯಲ್ಲಿದೆ. ಈ ಹಿಂದೆ ಎಂಎಲ್‌ಸಿ ಸುಜಾ ಕುಶಾಲಪ್ಪ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರುಗಳು ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಪೊನ್ನಣ್ಣ ಅವರು ತಮ್ಮ ಎಂಎಲ್‌ಎ ಅನುದಾನದಿಂದ ರೂ. ೫ ಲಕ್ಷ ಅನುದಾನ ಮಂಜೂರು ಮಾಡಿ, ಕಾಮಗಾರಿ ತಕ್ಷಣ ಆರಂಭಿಸಲು ಸೂಚಿಸಿದ್ದಾರೆ ಎಂದರು. ಮಲಯಾಳಿ ಸಮಾಜವು ಬಡ ಮಕ್ಕಳ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗೆ ನೆರವಾಗುತ್ತಿದೆ. ಕಳೆದ ವರ್ಷ ಮೃತರ ಕುಟುಂಬ ಹಾಗೂ ಚಿಕಿತ್ಸಾ ನಿಧಿಗಾಗಿ ಸದಸ್ಯರಿಗೆ ರೂ.೩,೮೫,೦೦೦ ನೀಡಲಾಗಿದೆ. ಇಬ್ಬರು ಮಕ್ಕಳ ಚಿಕಿತ್ಸೆಗೆ ರೂ ೨ ಲಕ್ಷ ಹಾಗೂ ೧ ಲಕ್ಷ, ಕ್ಯಾನ್ಸರ್ ರೋಗಿಗೆ ೨ ಲಕ್ಷ ಮತ್ತು ಯುವಕನೊಬ್ಬನಿಗೆ ಕೃತಕ ಕಾಲು ಜೋಡಿಸಲು ಆರ್ಥಿಕ ನೆರವು ನೀಡಲಾಗಿದೆ. ಸರಕಾರದ ವತಿಯಿಂದ ಅನುದಾನ ನೀಡಲು ಕೋರಿದ್ದು, ಶಾಸಕರಾದ ಪೊನ್ನಣ್ಣ ಮುಂದಿನ ವರ್ಷ ಹಣ ಒದಗಿಸುವುದಾಗಿ ಹಾಗೂ ಸಮಾಜದ ವತಿಯಿಂದ ಸೂಕ್ತ ಜಾಗ ಒದಗಿಸಿದರೆ ೧ ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್, ಸಮಾಜದಲ್ಲಿ ‘ವಿಭಜಿಸಿ ಆಳುವ’ ಮನಸ್ಥಿತಿ ಇರಬಾರದು, ಪ್ರತಿಯೊಬ್ಬರೂ ಹೃದಯದಿಂದ ಒಂದಾಗಿ ನಿಂತು ದೇಶ ಹಾಗೂ ಸಮಾಜದ ನೆಮ್ಮದಿಯನ್ನು ಕಾಪಾಡಬೇಕು. ಕೊಡಗಿನ ಬೆಳವಣಿಗೆಗೆ ಮಲಯಾಳಿ ಸಮುದಾಯದ ಕೊಡುಗೆ ಅಪಾರವಾಗಿದೆ. ಸಮಾಜದ ಅಧ್ಯಕ್ಷ ಸುಮೇಶ್ ಅವರೊಂದಿಗೆ ಚರ್ಚಿಸಿದಂತೆ, ಮುತ್ತಪ್ಪ ಮಲಯಾಳಿ ಸಮಾಜದ ಪ್ರತಿಯೊಂದು ಸಮಾಜ ಮುಖಿ ಕಾರ್ಯಕ್ಕೂ ಕೊಡವ ಸಮಾಜವು ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಅಭಯ ನೀಡಿದರು.
ಮೂರ್ನಾಡು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಬಾಬು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಿಂದೂ ಮಲಯಾಳಿ ಸಂಘಗಳ ಐಕ್ಯತೆಗೆ ಮೂರ್ನಾಡು ತಳಹದಿಯಾಗಿದ್ದು, ಅಲ್ಲಿ ಪ್ರಸ್ತುತ ೧೨ ಸಂಘಟನೆಗಳು ಸಕ್ರಿಯವಾಗಿವೆ.
ಸಮುದಾಯದ ಏಳಿಗೆಗೆ ಹಾಗೂ ಕಲ್ಯಾಣ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕೆಂದರು.
ಮಡಿಕೇರಿ ಮುತ್ತಪ್ಪ ದೇವಾಲಯದ ಉಪಾಧ್ಯಕ್ಷ ಸುಧೀರ್ ಮಾತನಾಡಿ, ಸಮುದಾಯದ ಜನರನ್ನು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರುವುದೇ ಸಂಘಟನೆಯ ಉದ್ದೇಶ. ಮಕ್ಕಳು ಬರಿ ವಿದ್ಯಾವಂತರಾದರೆ ಸಾಲದು, ಸಂಸ್ಕಾರವAತರಾಗುವುದು ಮುಖ್ಯ. ವಿದ್ಯೆಯು ಜ್ಞಾನವನ್ನು ನೀಡಿದರೆ, ಸಂಸ್ಕಾರವು ಮೌಲ್ಯಯುತ ಜೀವನವನ್ನು ರೂಪಿಸುತ್ತದೆ ಎಂದರು.
ಗೋಣಿಕೊಪ್ಪ ಕಾಪ್ಸ್ ಶಾಲೆಯ ಪ್ರಾಂಶುಪಾಲ ಡಾ. ರಾಮಚಂದ್ರ ಮಾತನಾಡಿ, ಓಣಂ ಮತ್ತು ಸಂಸ್ಕöÈತಿಯ ಮಹಾನ್ ಸಂದೇಶವನ್ನು, ಧಾರ್ಮಿಕ ಆಶಯಗಳನ್ನು ಮುಂದಿನ ಪೀಳಿಗೆಗೆ ಯಥಾವತ್ತಾಗಿ ಹಸ್ತಾಂತರಿಸುವುದೇ ಪ್ರತಿಯೊಂದು ಮಲಯಾಳಿ ಸಮಾಜವು ಆಯೋಜಿಸುವ ಇಂತಹ ಓಣಂ ಆಚರಣೆಗಳ ಮುಖ್ಯ ಅಧ್ಯಾತ್ಮಿಕ ಹಾಗೂ ಸಾಂಸ್ಕöÈತಿಕ ಉದ್ದೇಶವಾಗಿದೆ ಎಂದರು. ಲೇಖಕಿ ಕೃಪ ದೇವರಾಜ್ ಕೊಡಗು ಹಾಗೂ ಮಲಯಾಳಿಗಳ ಬಾಂಧವ್ಯದ ಕುರಿತು ಪ್ರಶಂಸನೆ ವ್ಯಕ್ತಪಡಿಸಿ ಓಣಂ ಆಚರಣೆಯ ಕುರಿತು ಮಾತನಾಡಿದರು.
ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಅಭಿನವ್ ಪ್ರಭಾಕರ್, ಕುಮಾರಿ ನಂದನಾ, ಸಯೂಜ್ಯ ಪಿ., ದಿಯಾ ಕೆ, ಶ್ರೀಲಕ್ಷಿ÷್ಮ ಪ್ರದೀಪ್, ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಡಾ. ಎಂ. ರಾಮಚಂದ್ರನ್, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಸುಶೀಲಾ, ಕೃಷಿ ಕ್ಷೇತ್ರದಲ್ಲಿ ವಿಷ್ಣು ಪಿ. ಎಸ್. ಸಂಗೀತ ಕ್ಷೇತ್ರದಲ್ಲಿ ಮೋಹನ್ ಟಿ. ಡಿ., ಚಲನಚಿತ್ರ, ನೃತ್ಯ ಮತ್ತು ಅಭಿನಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಷ್ಣು, ವಿನೀಶ್, ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿಂದು ಕೆ. ಆರ್., ಸಾಂಸ್ಕöÈತಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಸುರೇಶ್ ಬಾಬು ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ ಮಲಯಾಳಿ ಸಮಾಜದ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಜರಿದ್ದರು.
ಆಕರ್ಷಕ ಸ್ಪರ್ಧೆ - ಸಾಂಸ್ಕöÈತಿಕ ವೈಭವ
ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ‘ಹೂವಿನ ರಂಗೋಲಿ’ (ಪೂಕಳಂ) ಸ್ಪರ್ಧೆಯು ನೋಡುಗರ ಗಮನ ಸೆಳೆಯಿತು. ಮಧ್ಯಾಹ್ನ ‘ತಿರುವಾದಿರ’ ನೃತ್ಯದೊಂದಿಗೆ ಮಕ್ಕಳ ಹಾಗೂ ಸಮಾಜದವರ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು. ಸಮಾರಂಭದಲ್ಲಿ ಸಮಾಜದ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.