ಮಡಿಕೇರಿ: ಇತ್ತೀಚೆಗೆ ಸಿ.ಎನ್.ಸಿ (ಕೊಡವ ನ್ಯಾಷನಲ್ ಕೌನ್ಸಿಲ್) ಅಧ್ಯಕ್ಷÀ ನಂದಿನೆರವAಡ ನಾಚಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿನ ಕೆಲವು ಅಸಾಂವಿಧಾನಿಕ ಬೇಡಿಕೆಗಳ ಕುರಿತು ಕೊಡಗು ಗೌಡ ಸಮಾಜಗಳ ಒಕ್ಕೂಟವು ವಿಶೇಷ ಸಭೆ ಕರೆದು ಸುದೀರ್ಘವಾಗಿ ಚರ್ಚಿಸಿದೆ ಎಂದಿರುವ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಈ ಕೆಳಗಿನ ಹೇಳಿಕೆ ನೀಡಿದ್ದಾರೆ.

ಅಸಾಂವಿಧಾನಿಕ ಬೇಡಿಕೆಗಳಿಗೆ ವಿರೋಧ

ಪ್ರತ್ಯೇಕ ‘ಕೊಡವ ಲ್ಯಾಂಡ್ ರಚನೆ ಕೊಡಗಿನಲ್ಲಿ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಆಡಳಿತಾತ್ಮಕ ಮತ್ತು ರಾಜಕೀಯ ಸ್ಥಾನಮಾನ, ಪರಿಶಿಷ್ಟ ಪಂಗಡ (Sಖಿ) ಮೀಸಲಾತಿ ಹಾಗೂ ಈಗಾಗಲೇ ಮಾರಾಟವಾಗಿರುವ ಜಮೀನುಗಳನ್ನು ಮರಳಿ ಹಿಂಪಡೆಯುವAತಹ ಬೇಡಿಕೆಗಳು ಜಿಲ್ಲೆಯಲ್ಲಿ ವಾಸಿಸುವ ಇತರ ಸಮುದಾಯಗಳ ಹಕ್ಕುಗಳಿಗೆ ತೀವ್ರ ಧಕ್ಕೆ ತರುತ್ತವೆ. ಈ ಬೇಡಿಕೆಗಳು ಸಾಮಾಜಿಕ ಸಮತೋಲನವನ್ನು ಭಂಗಗೊಳಿಸುವುದರಿAದ ಒಕ್ಕೂಟವು ಇವುಗಳನ್ನು ತೀವ್ರವಾಗಿ ಖಂಡಿಸುತ್ತದೆ ಹಾಗೂ ಕಾನೂನಾತ್ಮಕವಾಗಿ ಎದುರಿಸಲು ನಿರ್ಧರಿಸಿದೆ.

ಸಾಂಸ್ಕೃತಿಕ ಬೇಡಿಕೆಗಳಿಗೆ ವಿರೋಧವಿಲ್ಲ

ಕೊಡವ ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವುದು, ಕೊಡವರ ಸಾಂಪ್ರದಾಯಿಕ ಕೋವಿ (ಬಂದೂಕು ಹಕ್ಕನ್ನು ಕಾಯ್ದುಕೊಳ್ಳುವುದು ಹಾಗೂ ಅವರ ಸಾಂಸ್ಕೃತಿಕ ಪರಂಪರೆಯ ರಕ್ಷಣೆಯ ಬೇಡಿಕೆಗಳಿಗೆ ಗೌಡ ಸಮಾಜವಾಗಲಿ ಅಥವಾ ಇತರ ಸಮುದಾಯಗಳಾಗಲಿ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ.

ನೈಜ ಸೌಹಾರ್ದತೆಯ ತುರ್ತು ಅಗತ್ಯ

ತಮ್ಮ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಸಂಸ್ಕೃತಿಯ ವೈಭವೀಕರಣವು ಇತರ ಸಮುದಾಯಗಳ ಮೇಲಿನ ಸವಾರಿಯಾಗಬಾರದು. ಪ್ರತಿಯೊಬ್ಬರೂ ಇತರರ ಅಸ್ತಿತ್ವವನ್ನು ಗೌರವಿಸಿದಾಗ ಮಾತ್ರ ಕೊಡಗು ತನ್ನ ನೈಜ ಶಾಂತಿ ಹಾಗೂ ಸೌಹಾರ್ದತೆಯನ್ನು ಉಳಿಸಿಕೊಳ್ಳಲು ಸಾಧ್ಯ.

ಮನವಿ

ನಮ್ಮ ಈ ಹೋರಾಟವು ಕೊಡಗಿನ ಶಾಂತಿ-ನೆಮ್ಮದಿಗೆ ಧಕ್ಕೆ ತರಬಲ್ಲ ಸಿ.ಎನ್.ಸಿ.ಯ. ಅಸಾಂವಿಧಾನಿಕ ಬೇಡಿಕೆಗಳ ವಿರುದ್ಧವೇ ಹೊರತು, ಸೋದರ ಸಮಾನರಾದ ಸಮಸ್ತ ಕೊಡವ ಬಾಂಧವರ ವಿರುದ್ಧ ಖಂಡಿತವಾಗಿಯೂ ಅಲ್ಲ ಕೊಡಗಿನ ಪ್ರಬುದ್ಧ ಜನತೆ ಈ ವ್ಯತ್ಯಾಸವನ್ನು ಮನಗಂಡು, ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕಾಗಿ ವಿನಂತಿಸಿದ್ದಾರೆ.