ಸೋಮವಾರಪೇಟೆ, ಸೆ. ೮: ಇಲ್ಲಿನ ಮಹಿಳಾ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ೭೯ನೇ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ಅಧ್ಯಕ್ಷೆ ವಿಜಯಲಕ್ಷಿö್ಮ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಿಂದಿನ ಮಹಾಸಭೆಯ ನಡಾವಳಿಗಳನ್ನು ನಿರ್ದೇಶಕಿ ಗೀತಾ ರಾಜು ಮಂಡಿಸಿದರು. ಆಡಳಿತ ಮಂಡಳಿಯ ವರದಿಯನ್ನು ನಿರ್ದೇಶಕಿ ಶೈಲಾ ವಸಂತ್, ವಾರ್ಷಿಕ ಜಮಾ - ಖರ್ಚಿನ ವರದಿಯನ್ನು ನಿರ್ದೇಶಕಿ ಗಾಯತ್ರಿ ನಾಗರಾಜ್ ಮಂಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ವಿಜಯಲಕ್ಷಿö್ಮ ಸುರೇಶ್ ಮಾತನಾಡಿ, ಸಂಘದ ಆಯವ್ಯಯ ಹಾಗೂ ಪ್ರಗತಿಯ ಕುರಿತು ಮಾಹಿತಿ ನೀಡಿದರು. ಪ್ರಸಕ್ತ ಸಾಲಿನಲ್ಲಿ ಸಂಘವು ರೂ. ೯೪,೦೯೬ ಲಾಭ ಗಳಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸಂಘವನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದಾಗಿ ಹೇಳಿದರು. ಶಾಸಕ ಡಾ. ಮಂತರ್ ಗೌಡ ಅವರು ಸಂಘಕ್ಕೆ ಹೊಸದಾಗಿ ಮಳಿಗೆ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಇದರೊಂದಿಗೆ ಸಂಸದ ಯದುವೀರ್ ಒಡೆಯರ್ ಹಾಗೂ ಎಂಎಲ್‌ಸಿ ಸುಜಾ ಕುಶಾಲಪ್ಪ ಅವರು ಸಂಘದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ತಿಳಿಸಿರುವುದಾಗಿ ಹೇಳಿದರು.

ಸಂಘದ ಮೇಲ್ಛಾವಣಿಯನ್ನು ದುರಸ್ತಿ ಮಾಡಿಕೊಟ್ಟು, ಹಲವು ವರ್ಷಗಳಿಂದ ಸಂಘಕ್ಕೆ ಸಹಕರಿಸುತ್ತಿರುವ ಗುರು ಸಿದ್ದಣ್ಣ ಅವರನ್ನು ಆಡಳಿತ ಮಂಡಳಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಸಭೆಯಲ್ಲಿ ನಿರ್ದೇಶಕಿ ಸುಮಾ ಸುದೀಪ್, ಜಲಜಾ ಶೇಖರ್, ಪಂಕಜ ಪ್ರಭಾಕರ್, ಮಾಯಾ ಗಿರೀಶ್, ಉಮಾ ರುದ್ರಪ್ರಸಾದ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಜಯಲಕ್ಷಿö್ಮ ಸುಬ್ರಮಣಿ ಕಾರ್ಯಕ್ರಮ ನಿರ್ವಹಿಸಿದರು.