ಮಡಿಕೇರಿ, ಸೆ. ೮: ಕುಶಾಲನಗರದ ಪಿ.ಎಂ.ಶ್ರೀ ಶಾಲೆಯಲ್ಲಿ ಅಂತರರಾಷ್ಟಿçÃಯ ಸಾಕ್ಷರತಾ ದಿನಾಚಿಚರಣೆ ಹಾಗೂ ನವ ಸಾಕ್ಷರರಿಗೆ ಸನ್ಮಾನ ಕಾಂi

Áಲೆಯಲ್ಲಿ ಪಿ.ಎಂಶ್ರೀ ದ್ವಿಭಾಷಾ ಚಟುವಟಿಕೆಗಳ ಕೊಠಡಿ ಉದ್ಘಾಟಿಸಿ ಮಾತನಾಡಿ, ಬಹಳ ದಿನಗಳಿಂದ ಈ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರ ಪರಿಶ್ರಮದಿಂದ ಕೊಠಡಿ ನಿರ್ಮಾಣವಾಗಿದೆ. ೧೫ ವರ್ಷ ಪೂರ್ಣಗೊಂಡ ಅಕ್ಷರಸ್ಥರಲ್ಲದವರು ಮುಖ್ಯವಾಹಿನಿಗೆ ಬರಬೇಕೆಂಬುದೇ ಮುಖ್ಯ ಆಶಯವಾಗಿದೆ. ಈ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಬೇಕಾದರೆ ಬಿ.ಆರ್.ಸಿ, ಬಿ.ಆರ್.ಪಿ ಹಾಗೂ ಸಿಆರ್‌ಪಿ ಗಳ ಪರಿಶ್ರಮ ಶ್ಲಾಘಿಸಿದರು.

ನವಸಾಕ್ಷರರು ಕೇವಲ ಸಹಿ ಮಾಡಲು ಕಲಿತರೆ ಸಾಲದು. ದೇಶದ ಅಭಿವೃದ್ಧಿಗೆ ನೆರವಾಗುವ ಶಿಕ್ಷಣ ಪಡೆಯಬೇಕು. ಸಾಕ್ಷರತರು ಸಾಧನೆ ಮಾಡುವುದರ ಜೊತೆಗೆ ಅವರನ್ನು ಒಂದೆಡೆ ಸೇರಿಸಿ ಅವರನ್ನು ಮುಖ್ಯವಾಹಿನಿಗೆ ತರುವುದೇ ಒಂದು ದೊಡ್ಡ ಸಾಹಸ ಎಂದು ಅಭಿಪ್ರಾಪಟ್ಟರು.

ಸಾಕ್ಷರತರ ಪಠ್ಯಪುಸ್ತಕ ಬಾಳಿಗೆ ಬೆಳಕು ಮತ್ತು ಸವಿ ಬರಹ ಎಂಬ ಎರಡು ಪುಸ್ತಕಗಳನ್ನು ಹೊಂದಿರುತ್ತದೆ. ಕರ್ನಾಟಕದ ಸಾಕ್ಷರತೆ ಶೇ.೫೪ ರಿಂದ ಪ್ರಾರಂಭವಾಗಿ ಈಗ ಶೇ.೭೫ ಕ್ಕೆ ತಲುಪಿದ್ದೇವೆ. ಅದರಲ್ಲಿ ಕೊಡಗು ಶೇ.೯೩ ರಷ್ಟು ಸಾಧಿಸಿದ್ದೇವೆ ಎಂದು ಅವರು ತಿಳಿಸಿದರು.

ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ಜರ್ಮನಿ, ಅಮೆರಿಕ, ಇಂಗ್ಲೆAಡ್ ದೇಶಗಳಲ್ಲಿ ನೂರಕ್ಕೆ ನೂರರಷ್ಟು ಸಾಕ್ಷರತೆ ಸಾಧಿಸಿದ್ದಾರೆ. ಸಾಕ್ಷರತೆ ಸಾಧಿಸಿರುವ ಈ ಎಲ್ಲಾ ದೇಶಗಳಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ೧೯೮೮ ರಲ್ಲಿ ಮೊಟ್ಟ ಮೊದಲಿಗೆ ಸಾಕ್ಷರತೆ ಕಾರ್ಯಕ್ರಮ ಪ್ರಾರಂಭವಾಯಿತು. ಹತ್ತು ಹಲವಾರು ದೇಶಗಳ ಸಾಕ್ಷರತಾ ಪ್ರಮಾಣ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಸಹಾಯಕರಾದ ರವಿಶಂಕರ್ ಅ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮೂರು ತಾಲೂಕುಗಳ ನವ ಸಾಕ್ಷರತರಿಗೆ ಸನ್ಮಾನಿಸಲಾಯಿತು.

ವಿಭಾಗ ಮಟ್ಟದಲ್ಲಿ ಅಧಿಕಾರಿಗಳ ಸಭೆಯಲ್ಲಿ ನಂಜರಾಯಪಟ್ಟಣ ಕ್ಲಸ್ಟರ್‌ನ ನೆಲ್ಲಿಹುದಿಕೇರಿ ಪ್ರಧಾನ ಮುಖ್ಯ ಶಿಕ್ಷಕಿ ಆಶಾ ಅವರನ್ನು ಪ್ರಶಂಸಿದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹೇಶ್ ಮಾತನಾಡಿ, ಯೂನಿಸೆಪ್‌ನ ೧೪ನೇ ಮಹಾಸಭೆಯಲ್ಲಿ ದೇಶ ಸಾಕ್ಷರತೆ ಸಾಧಿಸುವುದು ಅತಿಮುಖ್ಯ ಎಂದು ಒತ್ತಿ ಹೇಳಲಾಗಿದೆ. ಸಾಕ್ಷರತೆ ಪ್ರತಿಯೊಬ್ಬರ ಹಕ್ಕು. ಶಿಕ್ಷಣ ಪ್ರತಿಯೊಬ್ಬರ ಶಕ್ತಿ, ಆದ್ದರಿಂದ ದೇಶ ಅಭಿವೃದ್ಧಿ ಸಾಧಿಸಬೇಕಾದರೆ ಸಾಕ್ಷರತೆ ಸಾಧಿಸಬೇಕು ಎಂದು ತಿಳಿಸಿದರು.

ಶಿಕ್ಷಣಾಧಿಕಾರಿ ಸೌಮ್ಯ ಪೊನ್ನಪ್ಪ ಮಾತನಾಡಿ, ೨೦೨೩-೨೪ನೇ ಸಾಲಿನಲ್ಲಿ ಕೊಡಗಿನಲ್ಲಿ ಪ್ರಾರಂಭಿಸಿದ ಸಾಕ್ಷರತಾ ಕಾರ್ಯಕ್ರಮ ಯಶಸ್ವಿ ಮಾಡಿದ ಬಿ.ಆರ್‌ಪಿ, ಸಿಆರ್‌ಪಿಗಳ ಪರಿಶ್ರಮ ಶ್ಲಾಘನೀಯ ಎಂದರು.

ಪಿ.ಎA.ಶ್ರೀ ಶಾಲೆಯ ಎಸ್‌ಡಿಎಂಸಿ ಸಮಿತಿಯ ಅಧ್ಯಕ್ಷ ಚಂದನ್ ಕುಮಾರ್ ಮಾತನಾಡಿದರು, ಸಾಕ್ಷರತಾ ಇಲಾಖೆಯಿಂದ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಡಯಟ್‌ನ ಹಿರಿಯ ಉಪನ್ಯಾಸಕರಾದ ಕೃಷ್ಣಪ್ಪ, ಸ್ವಾಮಿ, ಪುಷ್ಪ, ವಿಜಯ್, ಪಿ.ಎಂ.ಶ್ರೀ ಶಾಲೆಯ ಮುಖ್ಯೋಪಾಧ್ಯಾಯರಾದ ಸಣ್ಣಸ್ವಾಮಿ, ಮೂರು ತಾಲೂಕುಗಳ ಸಿಆರ್‌ಪಿ, ಬಿ.ಆರ್.ಪಿ.ಗಳು ಹಾಜರಿದ್ದರು. ಪ್ರೌಢಶಾಲಾ ಪವಿತ್ರ ಮತ್ತು ತಂಡದವರು ಪ್ರಾರ್ಥಿಸಿದರು. ಡಯಟ್ ಉಪನ್ಯಾಸಕ ಹೇಮಂತ್ ರಾಜ್ ಸ್ವಾಗತಿಸಿದರು. ಸಿ.ಆರ್.ಪಿ ಶಾಂತಕುಮಾರ್ ನಿರೂಪಿಸಿ, ಬಿ.ಆರ್.ಪಿ ಪುಷ್ಪ ವಂದಿಸಿದರು.