ಮಡಿಕೇರಿ, ಸೆ. ೮: ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಹಿನ್ನಲೆಯಲ್ಲಿ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮದ ಹಿರಿಯರಾದ ಕೆ.ಕೆ ಪೂರ್ಣಯ್ಯ, ಶೀಲಾವತಿ ರೈ, ಮುತ್ತಕ್ಕ ಬಿ.ಎಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಿರಿಯರೊಂದಿಗೆ ಮಕ್ಕಳ ನಡತೆ ಹೇಗಿರಬೇಕು ಎಂಬ ಮಾರ್ಗದರ್ಶನದೊಂದಿಗೆ ಹಿರಿಯರೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎಂದು ರೋಟರಿ ಸದಸ್ಯರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕೆ.ಎನ್ ರಮ್ಯಾ, ಮುಖ್ಯ ಶಿಕ್ಷಕಿ ಸಬಿತಾ, ರೋಟರಿ ಮಿಸ್ಟಿ ಹಿಲ್ಸ್ ನಿಕಟಪೂರ್ವ ಅಧ್ಯಕ್ಷ ರತ್ನಾಕರ್ ರೈ, ನಿರ್ದೇಶಕರಾದ ಡಾ. ಚಂದ್ರಶೇಖರ್, ಪ್ರಮೋದ್ ಕುಮಾರ್ ರೈ, ಮನೋಜ್, ಸ್ನೇಹಿತ್, ನರೇಂದ್ರ ನಂದಿ, ನಮಿತಾ ರೈ, ಶಫಾಲಿ ರೈ, ಅಶ್ವಿನಿ ಮನೋಜ್, ಬಿ.ಎಲ್ ಸುಶೀಲಾ, ವಸಂತಿ ಆಳ್ವಾ ಹಾಜರಿದ್ದರು.

ಧನ್ಯ ಮತ್ತು ತಂಡ ಪ್ರಾರ್ಥಿಸಿ, ಸಬಿತಾ ಕೆ.ಎಂ. ಸ್ವಾಗತಿಸಿ, ಲಾವಣ್ಯ ನಿರೂಪಿಸಿ, ಕುಮುದಿನಿ ವಂದಿಸಿದರು.