ಮಡಿಕೇರಿ, ಸೆ. ೮: ಎಸ್.ಕೆ.ಎಸ್.ಎಸ್.ಎಫ್ ಜಿ.ಸಿಸಿ ಕೊಡಗು ಘಟಕದ ೨೦೨೬-೨೮ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಹುಸೈನ್ ಫೈಝಿ ಬಜೆಗುಂಡಿ ಆಯ್ಕೆಯಾಗಿದ್ದಾರೆ.

ಆನ್‌ಲೈನ್ ಮೂಲಕ ನಡೆದ ಸಾಮಾನ್ಯ ಸಭೆಯಲ್ಲಿ ಸಮಿತಿ ರಚನೆ ಮಾಡಲಾಯಿತು. ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಅಧ್ಯಕ್ಷ ಶುಐಬ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಬಾಖವಿ, ರಾಜ್ಯ ಉಪಾಧ್ಯಕ್ಷ ತಮ್ಲೀಕ್ ದಾರಿಮಿ, ಜಿ.ಸಿ.ಸಿ ಹಿರಿಯ ನಾಯಕರಾದ ಜೈನುದ್ದೀನ್ ಮುಸ್ಲಿಯಾರ್, ರಝಾಕ್ ಫೈಝಿ ಎಡಪಾಲಂ ಹಾಜರಿದ್ದರು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರಾ ಸದಸ್ಯ ಹಾಗೂ ಕೊಡಗು ನಾಇಬ್ ಖಾಝಿ ಅಬ್ದುಲ್ಲಾ ಫೈಝಿ ಉಸ್ತಾದ್ ನೂತನ ಸಮಿತಿಯನ್ನು ಘೋಷಿಸಿದರು.

ನೂತನ ಪದಾಧಿಕಾರಿಗಳು

ಸಲಹಾ ಸಮಿತಿ - ಜೈನುದ್ದೀನ್ ಮುಸ್ಲಿಯಾರ್, ರಝಾಕ್ ಫೈಝಿ, ಶಫೀಕ್ ನೆಲ್ಲಿಹುದಿಕೇರಿ. ಅಧ್ಯಕ್ಷ - ಹುಸೈನ್ ಫೈಝಿ ಬಜೆಗುಂಡಿ, ಉಪಾಧ್ಯಕ್ಷ - ಕಮರುದ್ದೀನ್ ಅಝ್ಹರಿ, ಯಾಹ್ಯಾ ಕೊಡ್ಲಿಪೇಟೆ, ಪ್ರಧಾನ ಕಾರ್ಯದರ್ಶಿ ಬಶೀರ್ ಚೆರಂಬಾಣೆ, ಕಾರ್ಯದರ್ಶಿಗಳು - ರಹೀಮ್ ಕುಶಾಲನಗರ, ಸಫ್ವಾನ್ ಚಾಮೆ, ಸಂಘಟನಾ ಕಾರ್ಯದರ್ಶಿ - ಅಶ್ರಫ್ ಅಝ್ಹರಿ ಕೊಂಡAಗೇರಿ, ಕಾರ್ಯಕಾರಿ ಕಾರ್ಯದರ್ಶಿ - ಅಫ್ಸರ್ ಮಡಿಕೇರಿ, ಖಜಾಂಚಿ - ರಹೀಮ್ ಪೊನ್ನಂಪೇಟೆ, ದಅವಾ ವಿಂಗ್ - ಜುನೈದ್ ಬಜೆಗುಂಡಿ, ನಝೀರ್ ದಾರಿಮಿ, ಮೀಡಿಯಾ ವಿಂಗ್ - ರಶೀದ್ ಇ.ಪಿ. ತ್ಯಾಗತ್ತೂರು, ವಿಕಾಯ ವಿಂಗ್ - ಲತೀಫ್ ಕಡಂಗ, ಸಹಚಾರೆ ವಿಂಗ್ - ನವಾಝ್ ಎಡಪಾಲ.