ನಾಪೋಕ್ಲು, ಸೆ. ೮: ಸ್ಥಳೀಯ ಟೌನ್ ಸುನ್ನಿ ಮುಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ಇಲ್ಲಿನ ಮುಖ್ಯ ಬೀದಿಗಳಲ್ಲಿ ಮಿಲಾದ್ ಸಂದೇಶದ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಮುಹಿಯುದ್ದೀನ್ ಜುಮ್ಮಾ ಮಸೀದಿಯಿಂದ ಪ್ರಾರಂಭಗೊAಡ ಮಿಲಾದ್ ಸಂದೇಶ ಜಾಥಾ ವಿವಿಧ ಬೀದಿಗಳಲ್ಲಿ ಸಂಚರಿಸಿ ಅಂತ್ಯಗೊಳಿಸಲಾಯಿತು. ಜಾಥಾದಲ್ಲಿ ಮಕ್ಕಳ ದಫ್ ಕುಣಿತ ಅತ್ಯಾಕರ್ಷಕವಾಗಿ ಪ್ರತಿಬಿಂಬಿಸಿತು.

ಮದದೇ ಮದೀನ ಮೀಲಾದ್ ಸಮಾವೇಶ ೨೦೨೬ ರ ಅಂಗವಾಗಿ ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು ಶುಕ್ರವಾರ ಮಧ್ಯಾಹ್ನ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್ ಧ್ವಜಾರೋಹಣ ನೆರವೇರಿಸಿದರು. ಸಂಜೆ ಮಿಲಾದ್ ಸಮಾವೇಶವನ್ನು ಉದ್ಘಾಟಿಸಲಾಯಿತು.

ಬಳಿಕ ಮದರಸ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಜರುಗಿತು. ಶನಿವಾರ ಮದರಸ ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹುಬ್ಬು ರಸೂಲ್ ಪ್ರಭಾಷಣವನ್ನು ಬಹು ಸಲಾಂ ಮುಸ್ಲಿಯಾರ್ ನೆರವೇರಿಸಿದರು. ಭಾನುವಾರ ಸಂಜೆ ನಡೆದ ಯಹ್ಯ ಬಾಖವಿ ಪೊಝಕ್ಕರ ಅವರ ಹುಬ್ಬು ರಸುಲ್ ಪ್ರಭಾಷಣದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಮುಖಂಡರು, ಗಣ್ಯರು ಹಾಗೂ ಸುನ್ನಿ ಮುಸ್ಲಿಂ ಜಮಾಅತ್‌ನ ಪದಾಧಿಕಾರಿಗಳು ಹಾಗೂ ಸಮುದಾಯ ಬಾಂಧವರು ಭಾಗವಹಿಸಿದ್ದರು.