ನಾಪೋಕ್ಲು, ಸೆ. ೮: ಬಿಲ್ಲವ ಸಮಾಜ ನಾಪೋಕ್ಲು (ರಿ) ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ ೧೭೨ನೇ ಜಯಂತಿ ಕಾರ್ಯಕ್ರಮವನ್ನು ಸಂಘದ ನಿವೇಶನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಯೋಜಿಸಿ, ಬಿಲ್ಲವ ಸಮಾಜದ ಸದಸ್ಯರಾಗಿರುವ ಶಿಕ್ಷಕರಿಗೆ “ಗುರು ನಮನ” ಸಲ್ಲಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜ್ಯ, ರಾಷ್ಟç ಹಾಗೂ ಅಂತರರಾಷ್ಟಿçÃAiÀ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಚೆನ್ನಯನಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಜಾಜಿ ಮೋಹನ್ ಭಾಗವಹಿಸಿ ಮಾತನಾಡಿ, ಮಕ್ಕಳಲ್ಲಿ ಸಮಾಜಸೇವೆಯ ಮನೋಭಾವ ಬೆಳೆಸಬೇಕು, ಬ್ರಹ್ಮಶ್ರೀ ನಾರಾಯಣಗುರುಗಳ ಸಮಾನತೆ ಮತ್ತು ಮಾನವೀಯತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಸತೀಶ್ ಸಿ.ಎಸ್ ಮಾತನಾಡಿ, ನಾಪೋಕ್ಲುವಿನ ಸುಮಾರು ೧೩೪ ಕುಟುಂಬಗಳು ಒಂದಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಗೌರವಿಸುತ್ತಿರುವುದು ಹಾಗೂ ಶಿಕ್ಷಣದ ಮಹತ್ವವನ್ನು ಸಾರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪುಷ್ಪಾವತಿ ಧನಂಜಯ, ಸಾವಿತ್ರಿ ವಿಠಲ್, ಹೇಮಾಮಾಲಿನಿ ಅರುಣ, ರಶ್ಮಿ ಕಿರಣ, ಕಿಶೋರ್ ಬಿ.ಎಸ್, ಹೇಮಾವತಿ ಹಾಗೂ ಕೆ.ಬಿ. ಸರಸ್ವತಿ ಅವರನ್ನು ಗುರು ನಮನ ಸಲ್ಲಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಿಕ್ಷಕರು, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ-ಸಿದ್ಧಾಂತಗಳು, ತಮ್ಮ ವೃತ್ತಿಜೀವನದ ಅನುಭವಗಳು, ಶಿಕ್ಷಣದ ಮಹತ್ವ ಹಾಗೂ ಪೋಷಕರ ಋಣವನ್ನು ಎಂದಿಗೂ ಮರೆಯಬಾರದು ಎಂಬ ಸಂದೇಶವನ್ನು ಹಂಚಿಕೊAಡರು.
ಸAಘದ ನಿರ್ದೇಶಕರಾದ ಧನಂಜಯ ಬಿ.ಜಿ. ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿ, ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ ಹಾಗೂ ಸಮಾಜ ಸುಧಾರಣೆಯ ಸಂದೇಶಗಳ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಲ್ಲವ ಸಮಾಜ ನಾಪೋಕ್ಲುವಿನ ಅಧ್ಯಕ್ಷ ಬಿ.ಎಂ. ಪ್ರತೀಪ್ ಅವರು, ಸಮಾಜದ ಸ್ವಂತ ಜಾಗದಲ್ಲಿ ಜಯಂತಿ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಬಿಲ್ಲವ ಸಮಾಜ ನಾಪೋಕ್ಲು ಹಾಗೂ ಕೊಡಗು ಜಿಲ್ಲೆಯ ಮಕ್ಕಳು ಯುಪಿಎಸ್ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬುದು ತಮ್ಮ ಕನಸಾಗಿದ್ದು, ಅದಕ್ಕಾಗಿ ಸಮಾಜ ಹಾಗೂ ವ್ಯಯಕ್ತಿಕವಾಗಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಬಳಿಕ ಸದಸ್ಯರು ಹಾಗೂ ಮಕ್ಕಳಿಗಾಗಿ ಮನೋರಂಜನಾ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜ ನಾಪೋಕ್ಲುವಿನ ಉಪಾಧ್ಯಕ್ಷರಾದ ವಸಂತ ಹಾಗೂ ಜಗನ್ನಾಥ, ಕೊಡಗು ಜಿಲ್ಲಾ ಬಿಲ್ಲವ ಸಮಾಜ ಒಕ್ಕೂಟದ ಉಪಾಧ್ಯಕ್ಷ ವಿಠಲ್ ಬಿ.ಬಿ. ಸೇರಿದಂತೆ ಸಮಾಜದ ಸದಸ್ಯರು ಮತ್ತು ಬಾಂಧವರು ಉಪಸ್ಥಿತರಿದ್ದರು. ಸಂಘದ ಖಜಾಂಚಿ ದೀಪಕ್ ಬಿ.ಡಿ. ಅವರು ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಲೋಹಿತ್ ಕೆ.ಎಸ್. ಅವರು ವಂದಿಸಿದರು.