ಗೋಣಿಕೊಪ್ಪ ವರದಿ, ಸೆ. ೮ ; ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆಯ ವಾರ್ಷಿಕ ಮಹಾಸಭೆಯನ್ನು ತಾ.೨೧ ರಂದು ನಡೆಸುವ ನಿರ್ಧಾರವನ್ನು ವೇದಿಕೆ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತೀರ ಪಿ. ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಯಿತು.

ಪೊನ್ನಂಪೇಟೆ ಇಗ್ಗುತ್ತಪ್ಪ ಸೌಹಾರ್ಧ ಸಹಕಾರ ಸಂಘದ ಸಭಾಂಗಣದಲ್ಲಿ ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಡೆಸುವುದಾಗಿ ಅಧ್ಯಕ್ಷರು ಪ್ರಕಟಿಸಿದರು. ವಾರ್ಷಿಕ ವ್ಯಕ್ತಿಯನ್ನು ಆಯ್ಕೆ ಮಾಡಿ ವಿಶೇಷವಾಗಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭ ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಚೇಂದೀರ ಬೋಪಣ್ಣ, ಜಂಟಿ ಕಾರ್ಯದರ್ಶಿ ನೆರೆಯಂಡಮ್ಮAಡ ಸುಬ್ರಮಣಿ, ಖಜಾಂಚಿ ಐನಂಡ ಮಂದಣ್ಣ, ಆಂತರಿಕ ಲೆಕ್ಕ ಪರಿಶೋಧಕ ಬೊಳಿಯಂಗಡ ದಾದು ಪೂವಯ್ಯ, ನಿರ್ದೇಶಕರುಗಳಾದ ಕಾಳಿಮಾಡ ಮೋಟಯ್ಯ, ಮಾಚಿಮಾಡ ಲೌಲಿ ಸೋಮಯ್ಯ, ಕೇಚೇಟಿರ ಕಾಮುಣಿ ಪೂಣಚ್ಚ, ಎಚ್. ಬಿ. ಬೀಜಮ್ಮ, ಮಾಣಿಪಂಡ ಪಾರ್ವತಿ, ಮಲ್ಲಂಡ ರಾಜ ಸುಬ್ಬಯ್ಯ, ಕೊಳ್ಳಿಮಾಡ ಕಾರ್ಯಪ್ಪ, ಕಳ್ಲಿಚಂಡ ಶಂಭು ಪೂವಯ್ಯ, ಮೇಚಮಾಡ ಕೆ. ಪೊನ್ನಪ್ಪ, ಕಳ್ಳಿಚಂಡ ಕಟ್ಟಿ ಪೂಣಚ್ಚ, ಚೋಟುಮಾಡ ಶಾಂತು ನಾಣಯ್ಯ, ಮೂಡೆರ ಮುತ್ತಮ್ಮ, ಕೋಳೇರ ನರೇಂದ್ರ ಕಾಟಿಮಾಡ ಡಿಕ್ಕಿ ಅಣ್ಣಯ್ಯ ಇದ್ದರು.