ಸಂಪ್ರದಾಯ ಸೌಹಾರ್ದ ಮತ್ತು ೨೩ ವರ್ಷಗಳ ಶ್ರದ್ಧೆಯ ಪ್ರತಿಫಲವಾಗಿ ಕುಕ್ಲೂರು ಬಳಿಯ ಗುರುಮನೆಯಲ್ಲಿ ಶ್ರೀ ಕುಂದತ್ ಗಣೇಶೋತ್ಸವ ಸಂಭ್ರಮ ಕಳೆಗಟ್ಟಿದೆ.
ವೀರಾಜಪೇಟೆಯ ಕುಕ್ಲೂರುವಿನಲ್ಲಿರುವ ಅಜ್ಜಪ್ಪ ದೇವರ ಸನ್ನಿಧಿಯಾದ ಗುರುಮನೆಯಲ್ಲಿ ಶ್ರೀ ಕುಂದತ್ ಗಣೇಶೋತ್ಸವ ಸಮಿತಿ (ಶ್ರೀ ಕುಂದತ್ ವಿಘ್ನೇಶ್ವರ) ವತಿಯಿಂದ ೨೩ನೇ ವರ್ಷದ ಗೌರಿ-ಗಣೇಶೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮ ಸಡಗರಗಳಿಂದ ಜರುಗುತ್ತಿದೆ.
ಸುಮಾರು ೨೩ ವರ್ಷಗಳ ಹಿಂದೆ ಲವ ಎಚ್.ಪಿ., ಎಚ್.ಎಂ. ಉಮೇಶ್, ಎಚ್.ಪಿ. ಜೀವನ್ ಹಾಗೂ ದಿವಂಗತರಾದ ಶಾಮು ಮತ್ತು ಕಿಶನ್ ಅವರುಗಳು ಮುಂಚೂಣಿಯಲ್ಲಿ ನಿಂತು ಗಣೇಶೋತ್ಸವವನ್ನು ಆಚರಿಸಲು ನಾಂದಿ ಹಾಡಿದ್ದರು. ಆ ಸಂದರ್ಭದಲ್ಲಿ ಎಚ್.ಎಂ. ಉಮೇಶ್ ಅವರು ಮೊದಲ ಅಧ್ಯಕ್ಷರಾಗಿ ಸಮಿತಿಗೆ ಸಾರಥ್ಯ ವಹಿಸಿದ್ದರು. ಅಂದಿನಿAದ ಇಂದಿನವರೆಗೆ ಸ್ಥಳೀಯ ನಿವಾಸಿಗಳೆಲ್ಲರೂ ಒಂದಾಗಿ, ಸೌಹಾರ್ದತೆಯಿಂದ ಈ ಉತ್ಸವವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಗುರುಮನೆಯಲ್ಲಿ ಅತ್ಯಂತ ಶ್ರದ್ಧೆಯಿಂದ ಶ್ರೀ ಗಣೇಶ ಮೂರ್ತಿ ಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸ ಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಎರಡು ದಿನಗಳ ಕಾಲ ಸ್ಥಳೀಯ ಕಲಾಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ ವಿಶೇಷ ದಿನಗಳಂದು ಭಕ್ತಾದಿಗಳಿಗೆ ಬೃಹತ್ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನೆರವೇರಲಿದೆ.
ಪ್ರಸ್ತುತ ೨೮ ಸಕ್ರಿಯ ಸದಸ್ಯರನ್ನೊಳಗೊಂಡ ಈ ಸಮಿತಿಯಲ್ಲಿ ಅಕ್ಷತ್, ಮೋಹನ್, ಅನಿಲ್ ಹಾಗೂ ಅನಂತ್ ಕುಮಾರ್ ಸೇರಿದಂತೆ ಅನೇಕ ಯುವಕರು ಉತ್ಸವದ ಯಶಸ್ಸಿಗೆ ಹೆಗಲು ಕೊಟ್ಟು ಶ್ರಮಿಸುತ್ತಿದ್ದಾರೆ. ಊರಿನ ಸಮಸ್ತ ನಿವಾಸಿಗಳು ಒಂದಾಗಿ ಆಚರಿಸುವ ಈ ಹಬ್ಬವು ಕುಕ್ಲೂರು ಭಾಗದ ಐಕ್ಯತೆಗೆ ಪ್ರೇರಣೆಯಾಗಿದೆ.
ಪ್ರಸ್ತುತ ಗೌರವಾಧ್ಯಕ್ಷರಾಗಿ ಹೆಚ್.ಕೆ. ವಿದ್ಯಾಧರ್, ಅಧ್ಯಕ್ಷರಾಗಿ ನಾಣಯ್ಯ ಎಚ್.ಎ, ಉಪಾಧ್ಯಕ್ಷರಾಗಿ ಎಚ್.ಎಂ. ರಮೇಶ್, ಕಾರ್ಯದರ್ಶಿ ಸಂತೋಷ್ ಕುಮಾರ್ ಎಚ್.ಎ., ಉಪಕಾರ್ಯದರ್ಶಿ: ಎಚ್.ಪಿ. ಲವ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಿರಿಯರು ಹಾಕಿಕೊಟ್ಟ ಪವಿತ್ರ ಹಾದಿಯಲ್ಲಿ, ಊರಿನ ನಾಗರಿಕರ ಪ್ರೋತ್ಸಾಹ ಮತ್ತು ಯುವಕರ ಒಗ್ಗಟ್ಟಿನೊಂದಿಗೆ ೨೩ನೇ ವರ್ಷದ ಶ್ರೀ ಕುಂದತ್ ಗಣೇಶೋತ್ಸವವು ವೈಭವದಿಂದ ಮುನ್ನಡೆಯುತ್ತಿದೆ.
- ರಜಿತ ಕಾರ್ಯಪ್ಪ,
ವೀರಾಜಪೇಟೆ.
ಮೊ: ೯೪೮೧೭೭೧೮೫೧