ಮಡಿಕೇರಿ, ಸೆ. ೭: ಕೊಡಗು ವಿದ್ಯಾಲಯದ ಡಾ. ಪುಷ್ಪಾ ಕುಟ್ಟಣ್ಣ ಬಾಸ್ಕೆಟ್ಬಾಲ್ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ವಿವಿಧ ಹಂತದ ಸ್ಪರ್ಧೆಗಳಲ್ಲಿ ಸಂತ ಮೈಕಲರ ಶಾಲಾ ತಂಡ ಮತ್ತು ಸಂತ ಜೋಸೆಫರ ಶಾಲಾ ತಂಡಗಳು ಪ್ರಥಮ ಬಹುಮಾನಗಳಿಸಿವೆ.
ಹದಿನಾಲ್ಕು ವರ್ಷ ವಯಸ್ಸಿನ ಮಿತಿಯ ಪುರುಷರ ಮತ್ತು ಮಹಿಳಾ ಸ್ಪರ್ಧೆಗಳಲ್ಲಿ ಮಹಿಳೆಯರ ಹದಿನೇಳು ವರುಷ ಮಿತಿಯ ಸ್ಪರ್ಧೆಯಲ್ಲಿ ಸಂತ ಜೋಸೆಫರ ತಂಡ ಪ್ರಥಮ ಬಹುಮಾನಗಳಿಸಿವೆ. ಹದಿನೇಳು ವರುಷ ಮಿತಿಯ ಪುರಷರ ವಿಭಾಗದಲ್ಲಿ ಸಂತ ಮೈಕಲರ ಶಾಲೆ ಪ್ರಥಮ ಬಹುಮಾನ ಗಳಿಸಿದೆ. ಹದಿನೇಳು ವಯಸ್ಸಿನ ಮಿತಿಯ ಮಹಿಳಾ ತಂಡದ ಸ್ಪರ್ಧೆಯಲ್ಲಿ ಚೇರಂಬಾಣೆಯ ಅರುಣ ಜೂನಿಯರ್ ಕಾಲೇಜು ತಂಡ ಎರಡನೇ ಸ್ಥಾನÀಗಳಿಸಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಮಕ್ಕಂದೂರು ಪ್ರೌಢ ಶಾಲೆಯ ಆಶ್ರಯದಲ್ಲಿ ಸ್ಪರ್ಧೆಗಳು ನಡೆದವು. ಸ್ಪರ್ಧೆಯನ್ನು ಶಕ್ತಿಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಉದ್ಘಾಟಿಸಿದರು. ಬಾಸ್ಕೆಟ್ಬಾಲ್ ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಜಾಣ್ಮೆ, ಚಾಕಚಕ್ಯತೆ, ಏಕಾಗ್ರತೆಯನ್ನು ವೃದ್ಧಿಸು ತ್ತದೆ ಎಂದು ಹೇಳಿದ ಬಿ.ಜಿ. ಅನಂತಶಯನ, ಮೈದಾನದಲ್ಲಿ ಗಳಿಸುವ ಅನುಭವ ಜೀವನ ನಿರ್ವಹಿಸಲು ಸಹಕಾರಿ ಆಗಬೇಕು ಎಂದರು. ದೈಹಿಕ ಶಿಕ್ಷಿಕ ಪರಿವೀಕ್ಷಕ ಕೆ.ಎಂ. ಬಾಲಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಂಘಟಕಿ, ದೈಹಿಕ ಶಿಕ್ಷಣ ಶಿಕ್ಷಕಿ ರತಿ ಸ್ವಾಗತಿಸಿದರು. ಶಿಕ್ಷಕರುಗಳಾದ ಪ್ರೇಮ, ರಘು, ಪ್ರಮಿಳಾ, ಅಯ್ಯಪ್ಪ, ಶೀತಲ್, ಸುನಿತಾ ಹಾಗೂ ಇತರರು ಹಾಜರಿದ್ದರು.