ಸೋಮವಾರಪೇಟೆ, ಸೆ. ೬: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಮಾತೆಯಂದಿರು ತಮ್ಮ ಮಕ್ಕಳಿಗೆ ಶ್ರೀ ಕೃಷ್ಣ, ರಾಧೆಯರ ವೇಷಗಳನ್ನು ಧರಿಸಿ ಸಂಭ್ರಮಿಸಿದರು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶ್ರೀ ಕೃಷ್ಣ ಹಾಗೂ ರಾಧೆಯರ ವೇಷಧಾರಿಗಳಾಗಿ ಶಾಲೆಗಳಿಗೆ ಆಗಮಿಸಿ ಕಣ್ಮನ ಸೆಳೆದರು. ದೇವಾಲಯಗಳಲ್ಲಿ ಅಷ್ಟಮಿ ಅಂಗವಾಗಿ ವಿಶೇಷ ಪೂಜೆಗಳು ನಡೆದವು.ಐಗೂರು, ಸೆ. ೬: ಮಾದಾಪುರದ ಎಸ್.ಜೆ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಭೂಷಣ ಧರಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಅನಿಶ್ ಕುಮಾರ್, ಪ್ರದೀಪ್, ಕುಮಾರ್, ಮುಖ್ಯೋಪಾಧ್ಯಾಯರಾದ ಪ್ರಿಯಾ, ಶಿಕ್ಷಕರಾದ ಪ್ರಜ್ಞ, ಆದಿರ, ಪ್ರಿಯಾಂಕ, ಭವ್ಯ, ಅಕ್ಷತಾ, ಆಶಾ, ನಿತ್ಯ ಮತ್ತು ಸೌಮ್ಯ ಭಾಗವಹಿಸಿದ್ದರು.