ಸಿದ್ದಾಪುರ, ಸೆ. ೬: ಸಿದ್ದಾಪುರ ಪಟ್ಟಣದೊಳಗೆ ಭಾನುವಾರ ಬೆಳಗ್ಗಿನ ಜಾವ ಆರು ಕಾಡಾನೆಗಳು ರಸ್ತೆಯಲ್ಲಿ ಸಂಚರಿಸಿದ್ದು ಪಟ್ಟಣದ ನಿವಾಸಿಗಳು ಭಯಭೀತರಾದರು. ಸಿದ್ದಾಪುರದ ಮೈಸೂರು ರಸ್ತೆಯ ಸಮೀಪದ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಮೈಸೂರ್ ರಸ್ತೆಯ ಸ್ವರ್ಣಮಾಲ ಕಲ್ಯಾಣ ಮಂಟಪದ ಬಳಿ ಆರು ಕಾಡಾನೆಗಳು ಸಂಚರಿಸುತ್ತಿದ್ದವು.
ಕಾಡಾನೆಗಳು ರಸ್ತೆ ದಾಟುತ್ತಿರುವುದು ಮೈಸೂರು ರಸ್ತೆಯ ನಿವಾಸಿಗಳ ಮನೆಯಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಅಮ್ಮತ್ತಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಮನೋಜ್ ನೇತೃತ್ವದಲ್ಲಿ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಆನೆಗಳನ್ನು ಓಡಿಸಿದರು. -ವಾಸು