ಸುಂಟಿಕೊಪ್ಪ, ಸೆ. ೬:ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ೭ನೇ ಹೊಸಕೋಟೆ ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ೭ನೇ ವರ್ಷದ ಛದ್ಮವೇಷ ಸ್ಪರ್ಧೆ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಗಣಪತಿ ಮತ್ತು ಗೋಪಾಲಕೃಷ್ಣ ದೇವರುಗಳಿಗೆ ಹೋಮ ಸಹಿತವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಾಲಯದ ಪ್ರಧಾನ ಅರ್ಚಕರಾದ ನರಸಿಂಹ ಉಪಾದ್ಯಾಯ ಅವರೊಂದಿಗೆ ಪ್ರಸನ್ನ ಭಟ್ ಮತ್ತು ಸಂತೋಷ್ ಹೆಬ್ಬಾರ್ ಅವರುಗಳು ವಿಶೇಷ ಪೂಜೆ, ಬೆಣ್ಣೆ ಅಲಂಕಾರ, ಗಣಪತಿ ಹೋಮ, ಶ್ರೀಕೃಷ್ಣ ಮಂತ್ರ ಹೋಮ ಬಳಿಕ ಹಾಲಭಿಷೇಕ, ಹೂವಿನ ಅಲಂಕಾರದೊAದಿಗೆ ಮಹಾಪೂಜೆಯನ್ನು ನೇರವೇರಿಸಿದರು.
ಕೃಷ್ಣ ಅಷ್ಟಮಿ ಅಂಗವಾಗಿ ೫ ವರ್ಷ ಒಳಪಟ್ಟ ಮತ್ತು ೫ ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೃಷ್ಣ ಮತ್ತು ರಾಧ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸಂದೀಪ್, ಈತಿಕ್ಷ ಮತ್ತು ಜ್ಞಾನವಿಕ ಪಟೇಲ್ ಮೊದಲ ೩ ಸ್ಥಾನಗಳಿಗೆ ಭಾಜನರಾದರು.
೫ ವರ್ಷ ಮೇಲ್ಪಟ್ಟ ಮಕ್ಕಳ ಸ್ಪರ್ಧೆಯಲ್ಲಿ ಪ್ರತೀಕ್ಷ ಪೂಜಾರಿ, ಆರಾಧ್ಯ ಮತ್ತು ದೀಕ್ಷಾ ಮೊದಲ ೩ ಸ್ಥಾನಗಳಿಗೆ ಭಾಜನರಾದರು. ಸ್ಪರ್ಧೆಗೆ ೨ ವಿಭಾಗಗಳಿಂದ ೪೬ ಮಂದಿ ಮಕ್ಕಳು ಸ್ಪರ್ಧಿಗಳಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಹಾಗಣಪತಿ ಮತ್ತು ಗೋಪಾಲಕೃಷ್ಣ ದೇವಸ್ಥಾನದ ಸಮಿತಿಯ ಅಧ್ಯಕ್ಷ ದಾಸಂಡ ರಮೇಶ್, ಕಾರ್ಯದರ್ಶಿ ಶಿವಪ್ಪ, ಕಾರ್ಯಕ್ರಮದ ಆಯೋಜಕರಾದ ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಶರವಣ, ರಾಮಚಂದ್ರ, ಪ್ರಕಾಶ್, ಚೇತನ್, ಸತೀಶ್, ಸಿಜು, ರವಿ, ಚಂದ್ರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.