ಮಡಿಕೇರಿ, ಸೆ. ೬: ಬಾಡಗರಕೇರಿ ಪೋರಾಡ್ ಗ್ರಾಮದಲ್ಲಿ ಅಲ್ಲಿನ ಕ್ರೀಡಾ ಸಮಿತಿ ವತಿಯಿಂದ ೨೫ನೇ ವರ್ಷದ ಕೈಲ್‌ಪೊಳ್ದ್ ಕ್ರಿಡಾಕೂಟ ಆಚರಿಸಲಾಯಿತು.

ವಿವಿಧ ಕ್ರೀಡೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಎಸ್.ಎಸ್.ಎಲ್.ಸಿಯಲ್ಲಿ ಶೇ.೮೫ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಅಣ್ಣೀರ ಸದಾ, ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್, ಉಷ, ನವೀನ್, ಮೀದೇರಿರ ಕವಿತ ಮತ್ತಿತರರು ಪಾಲ್ಗೊಂಡಿದ್ದರು.