ಮಡಿಕೇರಿ, ಸೆ. ೬ : ೨೦೨೬-೨೭ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ ಕೆ.ಬಾಡಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸರಸ್ವತಿ ಬಿ.ಕೆ, ಅಯ್ಯಂಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್.ಎಸ್. ಶಾಂತಿ ಮತ್ತು ಮೂರ್ನಾಡು ಪ್ರೌಢ ಶಾಲೆಯ ಪ್ರಶಾಂತ್ ಎಸ್.ಡಿ., ಕಲ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಉಮೇಶ್ ಕುಮಾರ್ ಕೆ.ಪಿ., ನೆಲ್ಲಿಹುದಿಕೇರಿ ಕೆಪಿಎಸ್ ಪ್ರಾಥಮಿಕ ಶಾಲೆಯ ರೆಮ್ಮಿ ಪಿ.ಸಿ., ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ರತ್ನ ಕುಮಾರ್ ಕೆ.ಆರ್. ಬಾಳುಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇರಿ ಲೋಬೋ, ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಲೀಮಾ ಪಿ.ಹೆಚ್. ಹಾಗೂ ಪೊನ್ನಂಪೇಟೆ ಕೆಪಿಎಸ್ ಪ್ರೌಢಶಾಲೆಯ ಅನ್ರಿತಾ ಫುಟಾರ್ಡೊ, ಅನುದಾನ ರಹಿತ ಶಾಲೆಯ ವಿಭಾಗದಲ್ಲಿ ಸೋಮವಾರಪೇಟೆಯ ಸುಜಲಾದೇವಿ, ನೆಲ್ಯಹುದಿ ಕೇರಿಯ ವಿಶಾಲಕ್ಷಿ ಎ.ಎ, ಪೊನ್ನಂಪೇಟೆಯ ರೀಣಾ ಕೆ.ಎಸ್., ಟಿ. ಶೆಟ್ಟಿಗೇರಿಯ ನವ್ಯಾ ಗಂಗಮ್ಮ ಸಿ.ಎ., ವೀರಾಜಪೇಟೆಯ ವಿಮಲಾ ವಿ.ಎಸ್. ಹಾಗೂ ಸೈಯದಾ ನಖತ್ ಅಸ್ಯಾ ಅವರುಗಳಿಗೆ ನಿನ್ನೆ ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.