ಮಡಿಕೇರಿ, ಸೆ. ೫: ಮೂರ್ನಾಡು ಪ್ರೌಢಶಾಲೆಯ ಕ್ರೀಡಾಪಟುಗಳು ಇತ್ತೀಚೆಗೆ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಸಾಧನೆ ಗೈದಿದ್ದಾರೆ.

ಬಾಲಕ ವಿಭಾಗದಲ್ಲಿ ನಾಜಿಮ್ ೪೦೦ ಮೀ (ಪ್ರಥಮ), ೮೦೦ ಮೀ (ಪ್ರಥಮ), ಹೈಜಂಪ್ (ದ್ವಿತೀಯ), ಅಕುಲ್ ೨೦೦ ಮೀ (ಪ್ರಥಮ), ಲಾಂಗ್ ಜಂಪ್ (ದ್ವಿತೀಯ), ೧೦೦ ಮೀ (ತೃತೀಯ), ಸಿದ್ಧರಾಮ ೩೦೦೦ ಮೀ (ಪ್ರಥಮ), ೧೫೦೦ ಮೀ (ದ್ವಿತೀಯ), ಮೋಕ್ಷಿತ್ ಡಿಸ್ಕಸ್ ಥ್ರೋ (ಪ್ರಥಮ), ಚಂಗಪ್ಪ: ೧೦೦ ಮೀ (ದ್ವಿತೀಯ), ಯದೀಶ್ ಶಾಟ್‌ಪುಟ್ (ದ್ವಿತೀಯ) ಸ್ಥಾನ ಗೈದಿದ್ದಾರೆ.

೪*೧೦೦ ಮೀ ರಿಲೇ ತಂಡದಲ್ಲಿ ನಾಜಿಮ್, ಚಂಗಪ್ಪ, ಅಕುಲ್, ನಮನ್ (ಪ್ರಥಮ ಸ್ಥಾನ) ಪಡೆದಿದ್ದಾರೆ.

ಬಾಲಕಿಯರ ಕ್ರೀಡಾಕೂಟದಲ್ಲಿ ಜಿಯಾ ೧೫೦೦ ಮೀ (ದ್ವಿತೀಯ), ೧೦೦ ಮೀ (ತೃತೀಯ), ಪೊನ್ನಮ್ಮ ೨೦೦ ಮೀ (ದ್ವಿತೀಯ) ಪಡೆದಿದ್ದಾರೆ. ೪*೪೦೦ ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ, ೪*೧೦೦ ಮೀ ರಿಲೇಯಲ್ಲಿ ತೃತೀಯ ಸ್ಥಾನ ದೊರಕಿದೆ.

ಬಾಲಕರ ವಿಭಾಗದ ಫುಟ್‌ಬಾಲ್ ಪ್ರಥಮ ಸ್ಥಾನ, ಖೋ-ಖೋ ಪ್ರಥಮ ಸ್ಥಾನ, ವಾಲಿಬಾಲ್ ದ್ವಿತೀಯ ಸ್ಥಾನ ದೊರಕಿದೆ.

ಬಾಲಕಿಯರ ವಿಭಾಗದ ವಾಲಿಬಾಲ್ ಪ್ರಥಮ ಸ್ಥಾನ, ಥೋಬಾಲ್ ಪ್ರಥಮ ಸ್ಥಾನ, ಖೋ-ಖೋ ರನ್ನರ್ಸ್ ಅಪ್ ಪಡೆದಿದೆ.