ಕೂಡಿಗೆ, ಸೆ. ೫: ಕರ್ನಾಟಕ ರಾಜ್ಯ ಕ್ರೀಡಾಶಾಲೆ ವಸತಿ ನಿಲಯದ ಉಪ ನಿರ್ದೇಶಕರಾದ ತಿಪ್ಪೇಸ್ವಾಮಿ ಅವರು ಕೂಡಿಗೆ ಕ್ರೀಡಾ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಬಾಲಕರ, ಬಾಲಕಿಯರ ವಸತಿ ಗೃಹಗಳಿಗೆ ಭೇಟಿ ನೀಡಿ ನಂತರ ಮಕ್ಕಳೊಂದಿಗೆ ಊಟ ಸವಿದು ಆಹಾರದ ಗುಣಮಟ್ಟದ ಬಗ್ಗೆ ಖುದ್ದಾಗಿ ಸೇವನೆ ಮಾಡುವ ಮೂಲಕ ಪರಿಶೀಲನೆ ಮಾಡಿದರು. ನಂತರ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ನೀಡಲಾಗುವ ಕ್ರೀಡಾ ಸಮವಸ್ತçಗಳ ಪರಿಶೀಲನೆ ಸೇರಿದಂತೆ ಶಾಲೆಯ ಇತರ ವಿಷಯಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.

ನಂತರ ಕ್ರೀಡಾಪಟುಗಳು, ಶಿಕ್ಷಕರು ಹಾಗು ತರಬೇತುದಾರರೊಂದಿಗೆ ಸಂವಾದ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರರು.

ಈ ಸಂದರ್ಭ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ ಸೇರಿದಂತೆ ಕ್ಷೇಮ ಪಾಲಕರು, ಶಾಲಾ ಶಿಕ್ಷಕರ ವೃಂದ, ತರಬೇತುದಾರರು, ವಿದ್ಯಾರ್ಥಿಗಳು ಇದ್ದರು.