ನಾಪೋಕ್ಲು, ಸೆ. ೫: ಬೀದಿ ನಾಯಿಗಳು ಕೋಳಿ ಗೂಡಿಗೆ ಧಾಳಿ ಮಾಡಿ ಕೋಳಿಗಳ ಮಾರಣ ಹೋಮ ಮಾಡಿದ ಘಟನೆ ಸಮೀಪದ ಚೆರಿಯಪರಂಬುವಿನಲ್ಲಿ ನಡೆದಿದೆ.
ನಾಪೋಕ್ಲು ಗ್ರಾಮ ಪಂಚಾಯತಿಗೆ ಒಳಪಟ್ಟ ಚೆರಿಯಪರಂಬು ನಿವಾಸಿ ಅಲಿಮಾ ಎಂಬವರು ತಮ್ಮ ಜೀವನೋಪಾಯಕ್ಕಾಗಿ ಕೋಳಿ ಸಾಕಣೆ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬೀದಿ ನಾಯಿಗಳು ದಾಳಿ ಮಾಡಿ ಇವರ ಕೋಳಿ ಗೂಡಿನಲ್ಲಿ ಇದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕೋಳಿಗಳನ್ನು ಕೊಂದು ಹಾಕಿವೆ. ಮಾತ್ರವಲ್ಲದೆ ನಾಯಿಗಳನ್ನು ಓಡಿಸುವ ಸಂದರ್ಭ ಅಲಿಮಾ ಅವರ ಮೇಲೂ ಧಾಳಿ ಮಾಡಲು ಮುಂದಾಗಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು ಬೀದಿ ನಾಯಿಗಳಿಂದ ಅನೇಕ ತೊಂದರೆಗಳು ಸಂಭವಿಸುತ್ತಿವೆ. ಸಂಬAಧಿಸಿದವರು ಕೂಡಲೇ ಬೀದಿ ನಾಯಿಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. - ದುಗ್ಗಳ ಸದಾನಂದ