*ಗೋಣಿಕೊಪ್ಪ, ಸೆ. ೫: ಗಣೇಶೋತ್ಸವದ ಪ್ರಯುಕ್ತ ಬಂಟಿAಗ್ಸ್ ಅಲಂಕಾರ ಮಾಡುತ್ತಿದ್ದ ವೇಳೆ ಕಂಬದ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿಯಲ್ಲಿ ನಡೆದಿದೆ.
ಚೆನ್ನಂಗೊಲ್ಲಿ ನಿವಾಸಿ ಗಣೇಶ್ (೨೮) ಮೃತಪಟ್ಟ ದುರ್ದೈವಿ. ಚೆನ್ನಂಗೊಲ್ಲಿಯ ಶ್ರೀ ವಿಘ್ನೇಶ್ವರ ಸೇವಾ ಸಮಿತಿಯಿಂದ ಎರಡನೇ ವರ್ಷದ ಗಣೇಶ ಉತ್ಸವಕ್ಕೆ ಬಂಟಿAಗ್ಸ್ ಅಲಂಕಾರ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭ ಕಂಬದ ಎತ್ತರಕ್ಕೆ ಬಂಟಿAಗ್ಸ್ ಕಟ್ಟಲು ಕಂಬದ ಮೇಲೇರಿದ್ದ ಗಣೇಶ್ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೃತರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.