ಮಡಿಕೇರಿ, ಸೆ. ೫: ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯ ಆವರಣದಲ್ಲಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗಾಗಿ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಅವರು ಶುಕ್ರವಾರ ಸಂಜೆ ಭೂಮಿಪೂಜೆ ನೆರವೇರಿಸಿದರು. ಶಾಸಕರು ದಸರಾ ದಶಮಂಟಪ ದೇಗುಲಗಳ ಅಭಿವೃದ್ಧಿಗೆ ತಲಾ ರೂ. ೫ ಲಕ್ಷವನ್ನು ಸರಕಾರದಿಂದ ಒದಗಿಸುವುದಾಗಿ ಈ ಹಿಂದೆ ವಾಗ್ದಾನ ನೀಡಿದ್ದರು. ಈ ಪ್ರಯುಕ್ತ ಶ್ರೀ ಕೋದಂಡ ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದರು.

ಅವರೊಂದಿಗೆ ನಗರದ ಅನೇಕ ಪ್ರಮುಖರು, ಕೋದಂಡರಾಮ ದೇಗುಲದ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು. ಬಳಿಕ ಶ್ರೀ ರಾಮ ಸನ್ನಿಧಿಯಲ್ಲಿ ಪೂಜೆಯಲ್ಲಿ ಭಾಗವಹಿಸಿದ ಶಾಸಕರು ಕೋದಂಡರಾಮ ಮಹಿಳಾ ಭಜನಾ ತಂಡದಿAದ ನಡೆಸುತ್ತ್ತಿದ್ದ ಭಜನಾ ಕಾರ್ಯಕ್ರಮದಲ್ಲಿ ಕೆಲಹೊತ್ತು ಕುಳಿತು ಆಲಿಸಿದರು.