ಮಡಿಕೇರಿ, ಸೆ.೫; ರೈತರು, ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವದು ಅಧಿಕಾರಿಗಳ ಜವಾಬ್ದಾರಿಯಾಗಿದೆ; ಕಚೇರಿಗೆ ಅಲೆದಾಡಿಸುವದಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿತವಾಗಿದ್ದ ಮಡಿಕೇರಿ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನರು ಸರಕಾರ ಅರಸಿಕೊಂಡು ಬರಬಾರದು, ಸರಕಾರವೇ ಜನರ ಬಾಗಿಲಿಗೆ ತೆರಳಿ ಅಗತ್ಯ ಸೇವೆ ಒದಗಿಸುವ ಉದ್ದೇಶದೊಂದಿಗೆ ರಾಜ್ಯದ ಮುಖ್ಯಮಂತ್ರಿಗಳು ಹೊಸ ಯೊಜನೆ ರೂಪಿಸಿದ್ದು, ಸರಕಾರ ನೂರು ದಿವಸ ಪೂರೈಸಿದ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಜನರು ಸಣ್ಣ ಕೆಲಸಗಳಿಗೆ ಅಲೆದಾಡಬಾರದು. ಜನರ ಬಾಗಿಲಿಗೆ ಸರಕಾರದ ಕೆಲಸ ತಲಪಬೇಕು. ಪ್ರತಿ ಯೋಜನೆಗಳು ಸಾಮಾನ್ಯ ಜನರಿಗೂ ತಲಪಬೇಕು; ಪ್ರಭಾವಿಗಳಿಗೆ ಮಾತ್ರವಲ್ಲ, ಗಾಂಧೀಜಿಯವರ ಚಿಂತನೆಯAತೆ ಸಮಾಜದ ಕೊನೆಯ ಸಾಲಿನಲ್ಲಿರುವವರೆಗೂ ಸ್ಪಂದಿಸಬೇಕು. ಅಧಿಕಾರಿಗಳು ಅಧಿಕಾರಕ್ಕಾಗಿ ಇರಬಾರದು. ಸೇವೆಗೆ ಬದ್ಧರಾಗಿರಬೇಕು, ಜನರು ಬರುವಾಗ ಸರಕಾರದ ಬಾಗಿಲು ಸದಾ ತೆರೆದಿರಬೇಕೆಂದು ಸಚಿವರು ಹೇಳಿದರು.

ಹೊಸ ಇಲಾಖೆ ಅಲ್ಲ

ಜನರ ಕಷ್ಟ-ಸುಖಗಳಿಗೆ ಪರಿಹಾರ ನೀಡುವದೇ ಜನಪರ ಆಡಳಿತ, ಸರಕಾರ ಜನರ ಬಳಿಗೆ ಬರಬೇಕು, ಪ್ರಜೆಗಳ ಸುಖವೇ ಆಡಳಿತದ ಸುಖ ಎಂದ ಸಚಿವರು; ಸಮಸ್ಯೆ ಪರಿಹರಿಸುವದು ಎಲ್ಲರ ಜವಾಬ್ದಾರಿಯಾಗಿದೆ. ಪ್ರಜಾಸೇವೆ ಹೊಸ ಸರಕಾರಿ ಇಲಾಖೆಯಲ್ಲ ನೇರ ಸ್ಪಂದನದ ವ್ಯವಸ್ಥೆಯಾಗಿದೆ. ಸಾರ್ವಜನಿಕರ ಕಡತಗಳು ಕಚೇರಿಯಲ್ಲಿ ಓಡಾಡದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶವಾಗಿದೆ. ವ್ಯವಸ್ಥೆ ಬದಲಾಗಬೇಕಿದೆ ಎಂದು ಹೇಳಿದರು.

ಪರಿಹಾರ ಸಿಗುವವರೆಗೂ ಜವಾಬ್ದಾರಿ

ಕಚೇರಿಗೆ ಬರುವ ಕಡತಗಳನ್ನು ಜನರು ಹುಡುಕಬೇಕಿಲ್ಲ, ಅದು ಸರಕಾರದ ಜವಾಬ್ದಾರಿಯಾಗಿದೆ. ಪ್ರತಿ ಶನಿವಾರ ತಾಲೂಕು ಹೋಬಳಿ ಮಟ್ಟದಲ್ಲಿ ನಡೆಯಲಿದೆ. ಒಂದನೇ ಹಾಗೂ ೩ನೇ ಶನಿವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ, ೨ ಹಾಗೂ ೪ನೇ ಶನಿವಾರ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇದು ಒಂದು ದಿನದ ಕಾರ್ಯಕ್ರಮವಲ್ಲ; ನಿರಂತರ ಆಡಳಿತ ವ್ಯವಸ್ಥೆಯಾಗಿದೆ. ಅಧಿಕಾರಿಗಳು ಜನರ ಸಮಸ್ಯೆಗಳನ್ನು ಕೇಳಿ ಮೂರು ಹಂತದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಸಮಸ್ಯೆಗೆ ಪರಿಹಾರ ಸಿಗುವವರೆಗೂ ನಿರಂತರ ಪ್ರಯತ್ನ ಸಾಗಲಿದೆ ಎಂದು ಸಚಿವರು ತಿಳಿಸಿದರು.

ನಗುವಿನಿಂದ ಅಲೆಯಬೇಕು

ಈ ಹೊಸ ಯೋಜನೆಯಡಿ ಅಧಿಕಾರಿಗಳು ಎಷ್ಟು ಅರ್ಜಿಗಳು ಬಂದಿವೆ, ಯಾವದೆಲ್ಲ ಸಮಸ್ಯೆಗಳಿವೆ ಎಂದು ಪರಿಶೀಲಿಸಬೇಕು. ಪರಿಹಾರವೇ ಇಲ್ಲಿ ಮುಖ್ಯ ವಿಚಾರವಾಗಿದ್ದು, ಜನರು ಅಳುತ್ತಾ ಅಲೆಯಬಾರದು, ನಗುವಿನಿಂದ ಅಲೆಯುವಂತಾಗಬೇಕು. ಗಾಂಧೀಜಿಯ ಆಶಯ, ಚಾಣಕ್ಯ ನೀತಿ, ಅಂಬೇಡ್ಕರ್ ತತ್ವ, ಬಸವಣ್ಣನ ಕಾಯಕದಂತೆ ಜನರ ಜನರನ್ನು ವಿಕಾಸಗೊಳಿಸುವ ಹೊಸ ಚಳವಳಿ ಆರಂಭವಾಗಿದೆ. ಇಲ್ಲಿ ಜನರೇ ಸೇವಕರು, ಅದುವೇ ಆಡಳಿತದ ನಿಜವಾದ ಅರ್ಥವೆಂದು ಸಚಿವರು ಹೇಳಿದರು.

ಸಮಸ್ಯೆ ಬಗೆಹರಿಸಬೇಕು

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ; ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳು ಇಂದು ನಿನ್ನೆಯದಲ್ಲ. ೪೦ರಿಂದ ೫೦ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳಾಗಿವೆ. ಇದೀಗ ಜನತೆ ನಮಗೆ ಬದಲಾವಣೆಗೆ ಅವಕಾಶ ಕಲ್ಪಿಸಿದ್ದು, ಸಮಸ್ಯೆಗಳನ್ನು ಮುಂದುವರಿಯಲು ಬಿಡದೆ ಬಗೆಹರಿಸುವಂತಾಗಬೇಕೆAದು ಹೇಳಿದರು. ಅರಣ್ಯ ಇಲಾಖೆಗೆ ಸಂಬAಧಿಸಿದAತೆ ಹಲವಷ್ಟು ಸಮಸ್ಯೆಗಳಿದ್ದು ಹಿರಿಯ ಅಧಿಕಾರಿಗಳೇ ಸಭೆಗೆ ಹಾಜರಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳು ದೊಡ್ಡದಾಗಿದ್ದು, ರಸ್ತೆಗಳು ಗುಂಡಿಬಿದ್ದಿವೆ, ಅಭಿವೃದ್ಧಿಗೆ ಅನುದಾನ ಒದಗಿಸಬೇಕು. ಕೆಲವು ಕಾನೂನು ಒತ್ತಡ, ದಾಖಲೆಗಳ ಕೊರತೆಯಿಂದ ಆಶ್ರಯ ಯೋಜನೆಯಡಿ ಮನೆ, ನಿವೇಶನ ಒದಗಿಸಲಾಗುತ್ತಿಲ್ಲ ಎಂದು ಗಮನಸೆಳೆದ ಶಾಸಕರು; ಜಿಲ್ಲೆಯಲ್ಲಿ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವದೇ ಕಷ್ಟವಾಗಿದೆ. ಕಚೇರಿಗಳಿಗೆ ಜನರು ಬರುವಾಗ ಗೌರವ ಕೊಡುವದನ್ನು ಅಧಿಕಾರಿಗಳು ಕಲಿತುಕೊಳ್ಳಬೇಕೆಂದು ತಾಕೀತು ಮಾಡಿದರು.

ಸಮಸ್ಯೆ ಬಗೆಹರಿಯುವದಿಲ್ಲ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ; ಪ್ರಜಾಸೇವೆ ಅಭಿಯಾನ ಆರಂಭಗೊAಡಿದೆ. ಯೋಜನೆಗಳನ್ನು ಪೂರೈಸಲು ರಾಜಕೀಯ ಇಚ್ಛಾಶಕ್ತಿ ಕೊರತೆ ಸರಕಾರದಲ್ಲಿ ಇರಲಿಲ್ಲ; ೨೦೨೩ರಿಂದ ಜಿಲ್ಲೆ, ಹೋಬಳಿ ಮಟ್ಟದಲ್ಲಿ ಜನಸೇವೆಗಾಗಿ ಅಭಿಯಾನ ಮಾಡಿದ್ದೇವೆ. ಘೋಷಣೆಗೂ ಕೊರತೆ ಇರಲಿಲ್ಲ, ಆದರೂ ಜನರ ಸಮಸ್ಯೆ ಬಗೆಹರಿಯುವದಿಲ್ಲ ಎಂದು ಕಾರಣಗಳ ಸಹಿತ ವಿವರಿಸಿದರು. ಅಧಿಕಾರಿ ವರ್ಗದ ಕಾರ್ಯಾಂಗ ಪ್ರಾಮಾಣಿಕ ಹಾಗೂ ಬದ್ಧತೆಯಿಂದ ಕೆಲಸ ಮಾಡದಿದ್ದರೆ ರಾಜ್ಯಾಂಗ ಎಷ್ಟೇ ಪ್ರಯತ್ನ ಮಾಡಿದರೂ ಜನರ ಕಣ್ಣೀರು ಒರೆಸಲು ಸಾಧ್ಯವಿಲ್ಲ. ಸಮಸ್ಯೆ ಪರಿಹರಿಸಲು ಜನವಲಯದಲ್ಲಿ ಕಾಳಜಿ ಇದೆ, ಆದರೆ ಕಾರ್ಯಾಂಗದಲ್ಲಿ ಇಲ್ಲ. ಸಮಸ್ಯೆ ಗಮನಕ್ಕೆ ಬಂದಾಗ ಪರಿಹರಿಸಬೇಕು. ಜನರ ಕಣ್ಣೀರು ಒರೆಸುವ ಪ್ರಯತ್ನ ಆಗಬೇಕು ಎಂದು ಹೇಳಿದ ಅವರು, ಇದೀಗ ಜನಪರ, ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ)ಬಡವರ ಪರ ಕಾರ್ಯಕ್ರಮ ಹಮ್ಮಿಕೊಂಡಿರುವದು ಶ್ಲಾಘನೀಯ; ಇದನ್ನು ಯಶಸ್ಸಿನ ಹಾದಿಯಲ್ಲಿ ನಡೆಸುವದು ಎಲ್ಲರ ಜವಾಬ್ದಾರಿಯಾಗಿದೆ. ಸ್ವಾರ್ಥಬಿಟ್ಟು ಜನರ ಹಿತ ಕಾಪಾಡುವ ಕೆಲಸ ಆಗಬೇಕಿದೆ. ತಿಂಗಳಲ್ಲಿ ಎರಡು ಬಾರಿ ಕಾರ್ಯಕ್ರಮ ಮಾಡಿ ಅಧಿಕಾರಿಗಳ ಎದುರೇ ಅಹವಾಲು ಸಲ್ಲಿಕೆಯಾದರೆ ಪರಿಹಾರವಾಗಲಿದೆ. ಈ ಕಾರ್ಯಕ್ರಮವನ್ನು ಯಶಸ್ಸು ಮಾಡೋಣವೆಂದರು.

ವೇದಿಕೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಅಧ್ಯಕ್ಷ ಮಂದ್ರಿರ ಮೋಹನ್‌ದಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಅಪರ ಜಿಲ್ಲಾಧಿಕಾರಿ ಸೌಮ್ಯ ಎಸ್. ಹಾದಿಮನಿ, ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಇದ್ದರು. ಶಿಕ್ಷಕಿಯರ ಲಹರಿ ತಂಡ ವಂದೇ ಮಾತರಂ, ನಾಡಗೀತೆ, ರೈತ ಗೀತೆಗಳನ್ನು ಹಾಡಿದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಸ್ವಾಗತಿಸಿದರು. ಶಿಕ್ಷ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

ಅಹವಾಲು ಸ್ವೀಕಾರ

ಇದೇ ಸಂದರ್ಭದಲ್ಲಿ ಸಚಿವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಸಾರ್ವಜನಿಕರಿಗೆ ತಮ್ಮ ಅವಹಾಲು ಸಲ್ಲಿಸಲು ಟೋಕನ್ ವ್ಯವಸ್ಥೆಯಡಿ ಅವಕಾಶ ಕಲ್ಪಿಸಲಾಗಿತ್ತು.