ವೀರಾಜಪೇಟೆ: ಶ್ರದ್ಧೆ ಮತ್ತು ಒಕ್ಕೂಟದ ಸಂಕೇತವಾಗಿ ವೀರಾಜಪೇಟೆ ಪುರಸಭೆಯಲ್ಲಿ ೧೯ನೇ ವರ್ಷದ ಸೌಹಾರ್ದ ಗೌರಿ-ಗಣೇಶೋತ್ಸವ ಸಂಭ್ರಮ ಕಳೆಗಟ್ಟಿದೆ.

ಸ್ಥಳೀಯ ಪುರಸಭೆಯ ಆವರಣದಲ್ಲಿ ಶ್ರೀ ಗಣಪತಿ ಸೇವಾ ಸಮಿತಿ ಹಾಗೂ ಪೌರ ಸೇವಾ ನೌಕರರ ಸಂಘದ ಜಂಟಿ ಆಶ್ರಯದಲ್ಲಿ ೧೯ನೇ ವರ್ಷದ ಗೌರಿ-ಗಣೇಶೋತ್ಸವವು ಶ್ರದ್ಧಾ-ಭಕ್ತಿ, ಸೌಹಾರ್ದ ಹಾಗೂ ವಿಜೃಂಭಣೆಯಿAದ ಜರುಗುತ್ತಿದೆ. ನಗರದ ಸ್ವಚ್ಛತೆ ಮತ್ತು ಆಡಳಿತದ ಬೆನ್ನೆಲುಬಾಗಿ ನಿಲ್ಲುವ ಪೌರಕಾರ್ಮಿಕರು ಹಾಗೂ ಪುರಸಭೆ ನೌಕರರು ಒಂದಾಗಿ ಆಚರಿಸುವ ಈ ಹಬ್ಬವು ಸಾಮರಸ್ಯದ ಸಂಕೇತವಾಗಿ ಗಮನಸೆಳೆಯುತ್ತಿದೆ.

೨೦೦೮ರಲ್ಲಿ ಪುರಸಭೆಯ ಅಧ್ಯಕ್ಷರಾಗಿದ್ದ ಮನೆಯಪಂಡ ಕಾಂತಿ ಸತೀಶ್ ಅವರ ಅವಧಿಯಲ್ಲಿ ಪುರಸಭೆಯ ಆವರಣದಲ್ಲಿ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸತ್ಸಂಪ್ರದಾಯಕ್ಕೆ ಚಾಲನೆ ಸಿಕ್ಕಿತು. ಅಂದಿನ ನೀರು ಸರಬರಾಜು ಸಹಾಯಕ ಅರುಣ್ ಕುಮಾರ್ ಅಧ್ಯಕ್ಷರಾಗಿ ಹಾಗೂ ವೇಲು ಮುರುಗ ಕಾರ್ಯದರ್ಶಿಯಾಗಿ ಈ ಧಾರ್ಮಿಕ ಮತ್ತು ಸಾಂಸ್ಕöÈತಿಕ ಪರಂಪರೆಗೆ ಭದ್ರ ಬುನಾದಿ ಹಾಕಿದ್ದರು. ಅಂದಿನಿAದ ಇಂದಿನವರೆಗೆ ಪುರಸಭೆಯ ಮಾಜಿ ಅಧ್ಯಕ್ಷರುಗಳು, ಮಾಜಿ ಸದಸ್ಯರುಗಳು ಹಾಗೂ ಸ್ಥಳೀಯರ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಈ ಉತ್ಸವವು ಪ್ರತಿವರ್ಷ ಯಶಸ್ವಿಯಾಗಿ ಮೂಡಿಬರುತ್ತಿದೆ.

ಪ್ರಸ್ತುತ ಸಮಿತಿಯ ಅಧ್ಯಕ್ಷರಾದ ವೇಲು ಮುರುಗ ಎಚ್.ಆರ್. ಅವರ ನೇತೃತ್ವದಲ್ಲಿ ೧೧ ದಿನಗಳ ಕಾಲ ವೈವಿಧ್ಯಮಯ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ಹಬ್ಬದ ಪ್ರಯುಕ್ತ ಪುರಸಭೆಯ ಸಿಬ್ಬಂದಿಗಳು ಹಾಗೂ ದಿನನಿತ್ಯ ನಗರದ ನೈರ್ಮಲ್ಯಕ್ಕಾಗಿ ಶ್ರಮಿಸುವ ಪೌರಕಾರ್ಮಿಕರ ಮನರಂಜನೆಗಾಗಿ ವಿಶೇಷ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಸಿಬ್ಬಂದಿಗಳು ದೈನಂದಿನ ಕೆಲಸದ ಒತ್ತಡವನ್ನು ಮರೆತು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸುತ್ತಾರೆ.

೧೧ ದಿನಗಳ ಮಹಾಪೂಜೆಯ ನಂತರ, ನಾದಸ್ವರ ಹಾಗೂ ಜಾನಪದ ಕಲಾತಂಡಗಳ ಭವ್ಯ ಶೋಭಾಯಾತ್ರೆಯ ಮೆರವಣಿಗೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ಸಾಂಪ್ರದಾಯಿಕವಾಗಿ ಗೌರಿ ಕೆರೆಯಲ್ಲಿ ವಿಘ್ನನಿವಾರಕನ ವಿಸರ್ಜನಾ ಉತ್ಸವ ನೆರವೇರಲಿದೆ.

ಗೌರವಾಧ್ಯಕ್ಷರಾಗಿ ಪುರಸಭೆ ಮುಖ್ಯಾಧಿಕಾರಿ ಗಳಾದ ಪಿ.ಕೆ. ನಾಚಪ್ಪ ಹಾಗೂ ಹೇಮಕುಮಾರ್ (ಅಭಿಯಂತರರು), ಅಧ್ಯಕ್ಷರಾಗಿ ವೇಲು ಮುರುಗ ಎಚ್.ಆರ್., ಉಪಾಧ್ಯಕ್ಷರಾಗಿ ಎಚ್.ಜಿ. ಮುರುಗ, ಕಾರ್ಯದರ್ಶಿ ಹಾಗೂ ಖಜಾಂಚಿ ಗಿರೀಶ್, ನಿರ್ದೇಶಕರಾಗಿ ಕೋಮಲ, ರಜನಿ, ಸೋಮಶೇಖರ್, ಇರ್ಫಾನ್, ಪ್ರತಾಪ್, ಸುಂದರ, ನವೀನ್ ಕುಮಾರ್, ಅಂತೋಣಿ, ರವಿ, ಮಂಜು, ಪ್ರವೀಣ್, ಚಂದ್ರಶೇಖರ್ ಇದ್ದಾರೆ. ನಗರದ ಆಡಳಿತ ಮತ್ತು ನೈರ್ಮಲ್ಯದ ಹೊಣೆ ಹೊತ್ತ ನೌಕರರೆಲ್ಲರೂ ಒಂದೇ ಕುಟುಂಬದAತೆ ಸೇರಿ ಆಚರಿಸುತ್ತಿರುವ ಈ ಗೌರಿ-ಗಣೇಶೋತ್ಸವವು ವಿರಾಜಪೇಟೆಯ ಸೌಹಾರ್ದತೆಗೆ ಶ್ರೇಷ್ಠ ನಿದರ್ಶನವಾಗಿದೆ.

- ರಜಿತ ಕಾರ್ಯಪ್ಪ,

ವೀರಾಜಪೇಟೆ.

ಮೊ: ೯೪೮೧೭೭೧೮೫೧