ಮಡಿಕೇರಿ, ಸೆ. ೪: ಜ್ಞಾನದೀಪ ದೈವಜ್ಞ ಬ್ರಾಹ್ಮಣ ಮಹಿಳಾ ಸಂಘದ ವತಿಯಿಂದ ಸವಿತಾ ಅರುಣ್ ಅವರ ನೇತೃತ್ವದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭ ಪೊಲೀಸ್ ಸಿಬ್ಬಂದಿಗಳಿಗೆ ರಾಖಿ ಕಟ್ಟಿ ಅವರ ಸೇವೆ ಮತ್ತು ಕರ್ತವ್ಯ ನಿಷ್ಠೆಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅನಿತಾ ವೆಂಕಟೇಶ್, ಖಜಾಂಚಿ ಸವಿತಾ ರಾಕೇಶ್, ನಿಕಟಪೂರ್ವ ಅಧ್ಯಕ್ಷ ಗೀತಾ ಸುಬ್ರಹ್ಮಣಿ, ಶುಭ ವಿಶ್ವನಾಥ್, ಸುವರ್ಣ ಮಲ್ಲೇಶ್, ಮುಕ್ತ ಸುರೇಶ್, ದ್ರಾಕ್ಷಾಯಿಣಿ ನೀಲಕಂಠ, ಚಂದ್ರಕಲಾ ಅರುಣ್ ಕುಮಾರ್, ಬೇಬಿ ನಾಗಪ್ಪ, ಮಂಗಳ ಸುರೇಶ್, ಮಾಲಾ ರೋಶನ್, ರಶ್ಮಿ ಪ್ರವೀಣ್ ಹಾಗೂ ಶೃತಿ ವಿನಾಯಕ್ ಉಪಸ್ಥಿತರಿದ್ದರು.