ನಾಪೋಕ್ಲು, ಸೆ. ೪: ಇತಿಹಾಸ ಪ್ರಸಿದ್ಧ ಅಯ್ಯಂಗೇರಿಯ ಶ್ರೀಕೃಷ್ಣ ಚಿನ್ನತಪ್ಪ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ, ಸಂಭ್ರಮದಿAದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಶ್ರೀ ಕೃಷ್ಣನಿಗೆ ಕ್ಷೀರಾಭಿಶೇಕ ಮತ್ತು ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಮತ್ತು ಉಪಾಹಾರ ವಿತರಿಸಲಾಯಿತು. ಪೂಜಾ ವಿಧಿ ವಿಧಾನವನ್ನು ಭಾಗಮಂಡಲದ ಪುರೋಹಿತ ಗೌರಿಶಂಕರ್ ನೆರವೇರಿಸಿಕೊಟ್ಟರು. ಈ ಸಂದರ್ಭ ಶ್ರೀಕೃಷ್ಣ ಹಾಗೂ ರಾಧೆಯ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದ್ದು, ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಚಿನ್ನತಪ್ಪ ದೇವಸ್ಥಾನದ ದೇವತಕ್ಕರು ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಬಿದ್ದಿಯಂಡ ಸುಭಾಶ್, ಪದಾಧಿಕಾರಿಗಳು, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.