ಮಡಿಕೇರಿ, ಸೆ. ೪: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದಲ್ಲಿ ಭಜನೆ ಮತ್ತು ರಕ್ಷಾಬಂಧನ ಕಾರ್ಯಕ್ರಮವನ್ನು ನಡೆಸಲಾಯಿತು.
ಮೊದಲಿಗೆ ಯುವ ಸಂಘದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಯುವ ಸಂಘದ ಸಭಾಂಗಣದಲ್ಲಿ ಯುವ ಸಂಘದ ಅಧ್ಯಕ್ಷರಾದ ಎಂ.ಎನ್ ಹರೀಶ್ ಕುಮಾರ್ ಅವರ ಮುಂದಾಳತ್ವದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಭಗವದ್ವಜಕ್ಕೆ ರಾಖಿ ಕಟ್ಟಿ ಧ್ವಜ ವಂದನೆ ಮಾಡಿ ನಂತರ ಪರಸ್ಪರ ಬಂಧುಗಳು ರಾಖಿ ಕಟ್ಟಿಕೊಂಡು ಪ್ರೀತಿ ವಿಶ್ವಾಸ ವ್ಯಕ್ತಪಡಿಸಿದರು.
ನಂತರ ರಕ್ಷಾಬಂಧನದ ಕುರಿತು ಹಾಗೂ ಪ್ರಸ್ತುತ ಸಮಾಜದಲ್ಲಿ ಯುವಕರು ಮಾದಕವಸ್ತುವಿನಿಂದ ದಾರಿ ತಪ್ಪುವ ಘಟನೆಗಳ ಬಗ್ಗೆ ಯುವ ಸಂಘದ ಸ್ಥಾಪಕ ಅಧ್ಯಕ್ಷರಾದ ಬಿ.ಎಸ್ ಜಯಪ್ಪ ಅವರು ಮಾತನಾಡಿದರು. ಹಿರಿಯ ಸದಸ್ಯರಾದ ಕೆ.ಪಿ ತಿಮ್ಮಯ್ಯ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುವ ಸಂಘದ ಪದಾಧಿಕಾರಿಗಳು, ಮಹಿಳಾ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅವಿನಾಶ್ ಬೊಟ್ಲಪ್ಪ ನಿರ್ವಹಿಸಿದರು.