ವೀರಾಜಪೇಟೆಯ ಮೀನುಪೇಟೆಯ ಶ್ರೀ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿಯ ೧೫ನೇ ವರ್ಷದ ಶ್ರದ್ಧಾ-ಭಕ್ತಿಯ ಗೌರಿ ಗಣೇಶೋತ್ಸವ ನಡೆಯಲಿದೆ.
ವೀರಾಜಪೇಟೆಯ ಸಾಂಸ್ಕöÈತಿಕ ಹಾಗೂ ಧಾರ್ಮಿಕ ಹಿನ್ನೆಲೆಯಲ್ಲಿ ಮೀನುಪೇಟೆಯ ಶ್ರೀ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿಯು ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ಸಮಿತಿ ೧೫ನೇ ವರ್ಷದ ಗಣೇಶೋತ್ಸವ ಪ್ರತಿಷ್ಠಾಪನಾ ಮಹೋತ್ಸವದ ಸಂಭ್ರಮದಲ್ಲಿದ್ದು, ಭಕ್ತಿ ಮತ್ತು ಸಂಪ್ರದಾಯದೊAದಿಗೆ ಹಬ್ಬವನ್ನು ಆಚರಿಸಲು ಸಜ್ಜಾಗಿದೆ. ಮೀನುಪೇಟೆಯಲ್ಲೂ ಗಣೇಶೋತ್ಸವವನ್ನು ಸಂಭ್ರಮದಿAದ ಆಚರಿಸಬೇಕು ಎಂಬ ವಿಶೇಷ ಒಲವು ಹಾಗೂ ಮುತುವರ್ಜಿಯಿಂದ ಬಿ.ಜೆ. ಸಾಯಿನಾಥ್ ನಾಯಕ್ ಅವರು ಸ್ಥಾಪಕ ಅಧ್ಯಕ್ಷರಾಗಿ ಈ ಉತ್ಸವಕ್ಕೆ ಚಾಲನೆ ನೀಡಿದರು. ಆರಂಭದಲ್ಲಿ ಐದು ವರ್ಷಗಳ ಕಾಲ ವೈಭವದಿಂದ ನಿರಂತರವಾಗಿ ನಡೆದು ಬಂದ ಈ ಉತ್ಸವವು, ತದನಂತರ ಕೆಲವು ಕಾಲ ಸ್ಥಗಿತಗೊಂಡಿತ್ತು. ಬಳಿಕ ಅದನ್ನು ಯಶಸ್ವಿಯಾಗಿ ಮುಂದುವರಿಸಿಕೊAಡು ಬಂದು, ಇದೀಗ ೧೫ನೇ ವರ್ಷದ ಮೈಲಿಗಲ್ಲನ್ನು ತಲುಪಿದೆ. ಆರಂಭದ ದಿನಗಳಲ್ಲಿ ಸ್ಥಾಪಕ ಅಧ್ಯಕ್ಷರಾದ ಬಿ.ಜೆ. ಸಾಯಿನಾಥ್ ನಾಯಕ್ ಅವರೊಂದಿಗೆ ಪಟ್ಟಡ ಸಚಿನ್, ಹಾಲಿ ಎಂ.ಎಲ್.ಸಿ ಸುಜಾ ಕುಶಾಲಪ್ಪ, ಸೋಮಣ್ಣ ಹಾಗೂ ದಿ. ಹರ್ಷ ಅವರು ಕೈಜೋಡಿಸಿ ಉತ್ಸವದ ಯಶಸ್ಸಿಗೆ ಶ್ರಮಿಸಿದ್ದರು. ಆಗಿನಿಂದಲೂ ಸುಜಾ ಕುಶಾಲಪ್ಪ ಅವರು ಗೌರವ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಮೀನುಪೇಟೆಯ ಬಳಿಯ ಖಾಲಿ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದ ಮುತ್ತಪ್ಪ ದೇವಸ್ಥಾನದ ಆವರಣದಲ್ಲಿರುವ ಕಲಾ ಮಂಟಪದಲ್ಲಿ ಶ್ರೀ ಗಣೇಶ ಮೂರ್ತಿಯನ್ನು ಶ್ರದ್ಧೆಯಿಂದ ಪ್ರತಿಷ್ಠಾಪಿಸಲಾಗುತ್ತಿದೆ. ಪ್ರತಿದಿನ ಮೂರು ವೇಳೆಯ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದು, ವಿಶೇಷ ಸಂದರ್ಭಗಳಲ್ಲಿ ಅನ್ನದಾನ ಸೇವೆಯೂ ನಡೆಯುತ್ತದೆ. ೧೫ನೇ ವರ್ಷದ ಈ ಶುಭ ಸಂದರ್ಭದಲ್ಲಿ ವೀರಾಜಪೇಟೆಯ ಐತಿಹಾಸಿಕ ಶೋಭಾಯಾತ್ರೆಯಲ್ಲಿ ಸಮಿತಿಯು ಪಾಲ್ಗೊಳ್ಳುತ್ತಿದ್ದು, ಈ ಬಾರಿಯ ಶೋಭಾಯಾತ್ರೆಯಲ್ಲಿ ಕೊಡಗಿನ ಸಾಂಪ್ರದಾಯಿಕ ವಾದ್ಯಗಳು ಮುಂಚೂಣಿಯಲ್ಲಿವುದು ವಿಶೇಷ ಆಕರ್ಷಣೆಯಾಗಿದೆ.
ಕೇವಲ ೧೯ ಜನ ಸದಸ್ಯರ ಅತಿ ಕಡಿಮೆ ಸದಸ್ಯ ಬಲವನ್ನು ಹೊಂದಿದ್ದರೂ, ಶಿಸ್ತು ಮತ್ತು ಒಗ್ಗಟ್ಟಿನಿಂದ ಉತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಗೌರವ ಅಧ್ಯಕ್ಷರಾಗಿ ಮಂಡೇಪAಡ ಸುಜಾ ಕುಶಾಲಪ್ಪ ಅಧ್ಯಕ್ಷರಾಗಿ, ಎ.ಜಿ. ವಿಜಯ್ (ಕಳೆದ ೪ ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ) ಉಪಾಧ್ಯಕ್ಷರಾಗಿ ವಿನಾಂಕ್ ಕುಟ್ಟಪ್ಪ ಕಾರ್ಯದರ್ಶಿ ಸತೀಶ್, ಖಜಾಂಚಿ ರಘು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಡಿಮೆ ಸಂಖ್ಯೆಯ ಸದಸ್ಯರಿದ್ದರೂ ಭಕ್ತಿ, ಶ್ರದ್ಧೆ ಹಾಗೂ ಸಾಂಪ್ರದಾಯಿಕ ಮೆರುಗಿನೊಂದಿಗೆ ಮೂಡಿಬರುತ್ತಿರುವ ಮೀನುಪೇಟೆಯ ವಿಶ್ವ ವಿನಾಯಕ ಸೇವಾ ಸಮಿತಿಯ ಗಣೇಶೋತ್ಸವವು ಊರಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
- ರಜಿತ ಕಾರ್ಯಪ್ಪ,
ವೀರಾಜಪೇಟೆ. ಮೊ: ೯೪೮೧೭೭೧೮೫೧