ವೀರಾಜಪೇಟೆ, ಸೆ. ೨: ಪಟ್ಟಣದ ಜೈನರ ಬೀದಿಯ ಐತಿಹಾಸಿಕ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ೨೦೨೬ರ ಸಾಲಿನ ಶ್ರೀ ಗೌರಿ-ಗಣೇಶ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮಗಳು ತಾ. ೧೩ ರಿಂದ ೨೫ರವರೆಗೆ ವಿಜೃಂಭಣೆ ಯಿಂದ ಜರುಗಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರವಿಂದ್ರನಾಥ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ. ೧೩ರ ಭಾನುವಾರ ಬೆಳಿಗ್ಗೆ ೯ ಗಂಟೆಗೆ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರ ಕೆರೆಯ ಬಳಿ ಪೂಜೆಯ ಬಳಿಕ ಗೌರಮ್ಮ ಪಲ್ಲಕ್ಕಿ ಉತ್ಸವ ಆರಂಭಗೊಳ್ಳಲಿದೆ. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯವನ್ನು ತಲುಪಿದ ಬಳಿಕ ಗೌರಮ್ಮನ ವಿಗ್ರಹ ಪ್ರತಿಷ್ಠಾಪನೆ ಮಹಾಪೂಜೆ, ತಾ.೧೪ ರಂದು ೧೧.೩೦ ಗಂಟೆಗೆ ಮಹಾ ಗಣಪತಿ ಹೋಮ, ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ.
ಸೆ. ೧೫ರಂದು ರಾತ್ರಿ ಹಿರಿಯ ನ್ಯಾಯವಾದಿ ಎಂ.ಕೆ. ಪೂವಯ್ಯ ಅವರಿಂದ ಸಾಂಸ್ಖತಿಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ತಾ. ೨೫ರ ತನಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಾ. ೨೫ರಂದು ರಾತ್ರಿ ೮.೩೦ಕ್ಕೆ ಗೌರಿ-ಗಣೇಶ ಮೂರ್ತಿಗಳ ಮಹಾಪೂಜೆ, ವಿದ್ಯುತ್ ಅಲಂಕೃತ ಮಂಟಪದಲ್ಲಿ ಧಾರ್ಮಿಕ ಶೋಭಾಯಾತ್ರೆ ನಡೆದು ಗೌರಿ ಕೆರೆಯಲ್ಲಿ ಮೂರ್ತಿ ವಿಸರ್ಜನೆ ನೆರವೇರಲಿದೆ ಎಂದು ಮಾಹಿತಿ ನೀಡಿದ್ದಾರೆ.