ಪೊನ್ನಂಪೇಟೆ, ಸೆ ೨: ಪೊನ್ನಂಪೇಟೆ ತಾಲೂಕಿನ ಮಾಪಿಳೆತೋಡಿನ ಕಲ್ಲಾಯಿ ಜುಮ್ಮಾ ಮಸೀದಿ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಸಂದೇಶ ಜಾಥಾ ಸಂಭ್ರಮದಿAದ ನಡೆಯಿತು.
ಮಸೀದಿ ಆವರಣದಿಂದ ಆರಂಭಗೊAಡ ಜಾಥಾ ಮುಖ್ಯ ರಸ್ತೆಯ ಮೂಲಕ ಸರ್ಕಾರಿ ಶಾಲಾ ಮೈದಾನದವರೆಗೆ ಸಾಗಿತು. ನೂರಾರು ಮಂದಿ ಪಾಲ್ಗೊಂಡು ಪ್ರವಾದಿ ಸಂದೇಶ ಸಾರಿದರು. ನಂತರ ಮೈದಾನದಲ್ಲಿ ಮದರಸ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸ್ಕೌಟ್ ತಂಡದಿAದ ಆಕರ್ಷಕ ದಫ್ ಪ್ರದರ್ಶನ ನಡೆಯಿತು.
ಮಸೀದಿ ಆವರಣದಲ್ಲಿ ಮಕ್ಕಳಿಗಾಗಿ ಮಹಮ್ಮದ್ ಪೈಗಂಬರ್ ಅವರ ಸಂದೇಶ ಹಾಗೂ ಈದ್ ಮಿಲಾದ್ ಮಹತ್ವದ ಕುರಿತು ಮಲಯಾಳಂ, ಉರ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಭಾಷಣ ಸ್ಪರ್ಧೆ ಹಾಗೂ ಹಾಡುಗಾರಿಕೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಲ್ಲಾಯಿ ಜುಮ್ಮಾ ಮಸೀದಿ ಅಧ್ಯಕ್ಷ ಎ.ಪಿ.ಆಲಿ, ಕಾರ್ಯದರ್ಶಿ ಎ.ಹೆಚ್.ಅಬ್ದುಲ್ ಹಮೀದ್, ಎ.ಹೆಚ್.ಅಬ್ದುಲ್ಲಾ, ಎ.ಕೆ.ನಸೀರ್, ಜಂಟಿ ಕಾರ್ಯದರ್ಶಿ ಎ.ಎ.ನಿಸಾರ್, ಎ.ಎ.ಯೂಸುಫ್, ಎ.ಕೆ.ರಶೀದ್, ಎ.ಎ.ನೌಫಲ್, ಎ.ಎಂ.ಸಾದಿಲಿ, ಖತೀಬರಾದ ಅಬ್ದುಲ್ ಸಮದ್ ಝುಹ್ರಿ, ಸದರ್ ಉಸ್ತಾದ್ ಸೇರಿದಂತೆ ಮಕ್ಕಳು, ಮಹಿಳೆಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.